ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಜಾತಿ ನಿಂದನೆ ಕೇಸ್ ಹಾಕಿಸಿದ್ದಾರೆ ‘ ಎಂದು ಮಾಜಿ ಸಚಿವ
ಜಿ.ಕರುಣಾಕರರೆಡ್ಡಿ ಅವರು ಸಂಸದ ಬಿ.ಶ್ರೀರಾಮುಲು ವಿರುದ್ಧ ವಾಗ್ಧಾಳಿ ನಡೆಸಿದರು. ಸೋಮವಾರ ನಗರದ ತಮ್ಮ ನಿವಾಸದಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
Advertisement
“ಬಿ.ಶ್ರೀರಾಮುಲು ಅವರು, ನನ್ನ ಅನುಮತಿ ಪಡೆಯದೆ ಸುಷ್ಮಾ ಸ್ವರಾಜ್ ಕಾಲೋನಿಯ 10 ನಿವೇಶನ ಮಾರಾಟಮಾಡಿದ್ದಾರೆ. ಹೀಗಾಗಿ ಬಳ್ಳಾರಿಯ ಸಿಜೆಎಂ ಕೋರ್ಟ್ನಲ್ಲಿ 10 ಕೇಸ್ ಹಾಕಿದ್ದೇನೆ’ ಎಂದರು. ಮುಂಬರುವ
ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಬಿ.ಶ್ರೀರಾಮುಲು ಟಿಕೆಟ್ ವಿಷಯದಲ್ಲಿ ಅಡ್ಡಗಾಲು ಹಾಕುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ನಾನೇ ಮೊದಲಿಗೆ ಬಿಜೆಪಿಯಲ್ಲಿ ರಾಮುಲುಗೆ ಟಿಕೆಟ್ ಕೊಡಿಸಿದ್ದು, ರಾಮುಲು ನನಗೆ ಟಿಕೆಟ್ ಕೊಟ್ಟಿಲ್ಲ.
ವಿನಾಕಾರಣ ನನ್ನ ತೇಜೋವಧೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾಲವೇ ಉತ್ತರಿಸಲಿದೆ ಎಂದರು.