Advertisement
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಈಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಹಾಕಿದೆ. ಇದು ಕೇಂದ್ರದ ತತ್‌ಕ್ಷಣದ ನಿರ್ಧಾರ ಎಂದು ಅನ್ನಿಸಿದರೂ ಇದರ ಹಿಂದೆ ದೊಡ್ಡ ಹೋರಾಟದ ಯಶೋ ಗಾಥೆಯಿದೆ. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ರೂಪಿಸಿದ್ದ ಹೋರಾಟದ ಅನಂತರ ಬಿಜೆಪಿ ಕೂಡ ದೊಡ್ಡ ಮಟ್ಟದ ಅಭಿಯಾನ ನಡೆಸಿತ್ತು. ಇದೆಲ್ಲದರ ಫಲವಾಗಿ ಕೇಂದ್ರ ಸರಕಾರ ಈಗ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದುಕೊಂಡಿದೆ.
ಇಂದು ಕಾಶ್ಮೀರ ಉಳಿದರೆ, ಭವಿಷ್ಯದಲ್ಲಿ ಭಾರತ ಉಳಿಯಲಿದೆ ಎಂಬ ಧ್ಯೇಯವಾಕ್ಯ ದೊಂದಿಗೆ 1990ರಲ್ಲಿ ಅಖೀಲಭಾರತೀಯ ವಿದ್ಯಾರ್ಥಿ ಪರಿಷತ್ ಕಾಶ್ಮೀರ್ ಚಲೋ ಅಭಿ ಯಾನ ಹಮ್ಮಿಕೊಂಡಿತ್ತು. 1990ರ ಸೆ.11ರಂದು ಕಾಶ್ಮೀರದ ಶ್ರೀನಗರದಲ್ಲಿ ತ್ರಿವರ್ಣಧ್ವಜ ಹಾರಿ ಸುವುದು ಮತ್ತು ಕಾಶ್ಮೀರದ ಸಮಸ್ಯೆಯನ್ನು ಜನ ಸಾಮಾನ್ಯರಿಗೆ ತಿಳಿಸುವುದು ಅಭಿಯಾನದ ಮೂಲ ಉದ್ದೇಶವಾಗಿತ್ತು. ಅದರಂತೆ 1990ರ ಆರಂಭದಲ್ಲಿ ವಿದ್ಯಾರ್ಥಿ ಪರಿಷತ್ ಅಭಿಯಾನದ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು. ಆಗಸ್ಟ್ ಅಂತ್ಯದವರೆಗೂ ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸಭೆ, ಸೆಮಿನಾರ್, ಚರ್ಚಾಗೋಷ್ಠಿ ಇತ್ಯಾದಿ ಎಲ್ಲವನ್ನೂ ಏರ್ಪಡಿಸಿತ್ತು. ಸೆ.11ರಂದು ಕಾಶ್ಮೀರ್ ಚಲೋ ದಿನಾಂಕ ನಿಗದಿ ಮಾಡಿದ್ದರಿಂದ ಬೆಂಗಳೂರು, ಮಂಗಳೂರು, ಬೀದರ್, ಕಲಬುರಗಿ, ಹುಬ್ಬಳ್ಳಿ ಸಹಿತವಾಗಿ ರಾಜ್ಯದ ಬೇರೆ ಬೇರೆ ಕಡೆಗಳಿಂದ ತಂಡತಂಡವಾಗಿ ಜಮ್ಮುವಿಗೆ ಹೋಗುವ ಸಿದ್ಧತೆ ಮಾಡಿಕೊಂಡೆವು. ಅದರಂತೆ ರೈಲಿನಲ್ಲಿ ಸುಮಾರು 1,200 ವಿದ್ಯಾರ್ಥಿಗಳ ಸಮೂಹ ಜಮ್ಮುವಿಗೆ ಹೊರಟಿತ್ತು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಂದಿನ ರಾಜ್ಯ ಸಂಘಟನ ಕಾರ್ಯದರ್ಶಿ ಹಾಗೂ ಈಗ ವಿದ್ಯಾಭಾರತೀ ಜವಾಬ್ದಾರಿ ಹೊತ್ತಿರುವ ಜಿ.ಆರ್. ಜಗದೀಶ್ ಅವರು “ಉದಯವಾಣಿ’ಗೆ ಮಾಹಿತಿ ನೀಡಿದರು.
Related Articles
Advertisement
ಉಧಂಪುರದಿಂದ ಪಾದಯಾತ್ರೆ ಮೂಲಕ ಶ್ರೀನಗರಕ್ಕೆ ಹೋಗುವ ಪ್ರಯತ್ನ ಮಾಡಿದ್ದೆವು. ಅದನ್ನೂ ಪೊಲೀಸರು ತಡೆದು ಬಂಧಿಸಿದರು. ಆದರೂ ಯುವ ಸಮೂಹದಲ್ಲಿನ ಉತ್ಸಾಹವನ್ನು ಅಲ್ಲಿನ ಸರಕಾರಕ್ಕೆ ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಹೋರಾಟದ ಆ ದಿನಗಳು ನೆನಪಿಸಿಸಿಕೊಂಡರೆ, ಇಂದು ಸರಕಾರ ತೆಗೆದುಕೊಂಡು ನಿರ್ಧಾರದಿಂದ ಸಾರ್ಥಕ ಭಾವ ಮೂಡುತ್ತದೆ ಎಂದು ವಿವರಿಸಿದರು.
ತಿಂಗಳ ಅಭಿಯಾನಕರ್ನಾಟಕದಿಂದ ದತ್ತಾತ್ರೇಯ ಹೊಸಬಾಳೆ, (ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ), ಅರವಿಂದ ಲಿಂಬಾವಳಿ (ಈಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ) ಸಹಿತವಾಗಿ ಅನೇಕ ನಾಯಕರು ಹೋರಾಟದ ಮುಂದಾಳತ್ವವನ್ನು ವಹಿಸಿದ್ದರು. ಕರ್ನಾಟಕದಲ್ಲಿ 1 ತಿಂಗಳ ಅಭಿಯಾನ ನಡೆಸಿದ್ದೆವು. ಇದಕ್ಕಾಗಿ ಲಕ್ಷಕ್ಕೂ ಹೆಚ್ಚು ಕರಪತ್ರ ಹಂಚಿ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದಿಂದ ಕೆಲವರಿಗೆ ಮಾತ್ರ ಆಗುತ್ತಿದ್ದ ಅನುಕೂಲ, ದೇಶಕ್ಕೆ ಬಂದಿರುವ ಅಪಾಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೆವು ಎಂದಿದ್ದಾರೆ. - ರಾಜು ಖಾರ್ವಿ ಕೊಡೇರಿ