Advertisement

ಇಂದಿನಿಂದ ಕರುನಾಡ ಯುವ ಜಾಗೃತಿ ಯಾತ್ರೆ

02:34 PM Mar 29, 2018 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸಲು ಬಿಜೆಪಿ ಯುವ ಮೋರ್ಚಾ ಗುರುವಾರದಿಂದ “ಕರುನಾಡ ಯುವ ಜಾಗೃತಿ ಯಾತ್ರೆ’ ಬೈಕ್‌ ರ್ಯಾಲಿ ಹಮ್ಮಿಕೊಂಡಿದೆ.

Advertisement

ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರತಾಪಸಿಂಹ, ಮಾರ್ಚ್‌ 29 ರಿಂದ ಏಪ್ರಿಲ್‌ 5 ರವರೆಗೆ ರಾಜ್ಯದ 224 ವಿಧಾನಸಭೆ ಕ್ಷೇತ್ರ, ಪ್ರತಿ ಬೂತ್‌ ಮಟ್ಟಕ್ಕೂ ಬೈಕ್‌ ರ್ಯಾಲಿ ತಲುಪಲಿದ್ದು ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

“ಕಾಂಗ್ರೆಸ್‌ ಸರ್ಕಾರದ ಚಾರ್ಜ್‌ಶೀಟ್‌: ವೈಫ‌ಲ್ಯಗಳು’ ಶೀರ್ಷಿಕೆ ಹಾಗೂ ಕಾಂಗ್ರೆಸ್‌ ತೊಲಗಿಸಿ , ಕಮಲ ಅರಳಿಸಿ’ ಘೋಷಣೆಯಡಿ ರ್ಯಾಲಿ ನಡೆಯಲಿದ್ದು ಕಾಂಗ್ರೆಸ್‌ ಸರ್ಕಾರದ ಐದು ವರ್ಷಗಳ ಭ್ರಷ್ಟಾಚಾರ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ, ಕಾನೂನು ಸುವ್ಯವಸ್ಥೆ ಕುಸಿತ, ರೈತಾಪಿ ಸಮುದಾಯ ಸಂಕಷ್ಟಕ್ಕೊಳಗಾಗಿರುವುದನ್ನು ದಾಖಲೆ ಸಮೇತ ಮತದಾರರ ಮುಂದಿಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಡಿ.ಕೆ.ರವಿ, ಅನುರಾಗ್‌ ತಿವಾರಿ, ಕಲ್ಲಪ್ಪ ಹಂಡಿಬಾಗ್‌, ಡಿವೈಎಸ್‌ಪಿ ಗಣಪತಿ, ತಹಸೀಲ್ದಾರ್‌ ಶಂಕರಯ್ಯ ಅವರು ನಿಗೂಢವಾಗಿ ಮೃತಪಟ್ಟಿದ್ದಾರೆ. ಸಚಿವರ ದರ್ಪಕ್ಕೆ ಕೆಲವು ಅಧಿಕಾರಿಗಳು ಕೆಲಸ ಮಾಡಲಾಗದೆ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಕಾವೇರಿ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್‌ ವಿಫ‌ಲವಾಗಿದೆ. ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಿ ಎಸಿಬಿ ರಚಿಸಿ ತನ್ನ ತಾಳಕ್ಕೆ ತಕ್ಕಂತೆ ಬಳಕೆ ಮಾಡಿ ಆಧಿಕಾರ ದುರುಪಯೋಗ ಮಾಡಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರ ಶಾದಿ ಭಾಗ್ಯ ಸೇರಿ ಇತರೆ ಯೋಜನೆ ನೀಡಲಾಗಿದೆ. ಈ ಸರ್ಕಾರ ಬಂದ ನಂತರ ಕೋಮುಗಲಭೆ ಅಪರಾಧಗಳಿಗಾಗಿ ಸೆರೆಮನೆಯಲ್ಲಿದ್ದ ಜಿಹಾದಿ ಸಂಸ್ಥೆಗಳ 1700 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿದರು.

Advertisement

ಸಿಐಡಿ ತನಿಖೆ ಮೂಲಕ ಡಿವೈಎಸ್‌ಪಿ ಗಣಪತಿ ನಿಗೂಢ ಸಾವು ಪ್ರಕರಣ ಮುಚ್ಚಿ ಹಾಕಿ ಸಚಿವ ಜಾರ್ಜ್‌ಗೆ ಕ್ಲೀನ್‌ ಚಿಟ್‌ ನೀಡಲಾಗಿದೆ. ಅದೇ ರೀತಿ ಸಿಐಡಿ ತನಿಖೆ ಮೂಲಕ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಎಚ್‌.ವೈ.ಮೇಟಿಗೂ ಕ್ಲೀನ್‌ಚಿಟ್‌ ನೀಡಲಾಗಿದೆ. ಆದರೆ,  ಕುಟ್ಟಪ್ಪ, ಮೈಸೂರಿನ ರಾಜು, ಪ್ರಶಾಂತ್‌ ಪೂಜಾರಿ, ಶರತ್‌ ಮಡಿವಾಳ, ರುದ್ರೇಶ್‌, ದೀಪಕ್‌ರಾವ್‌, ಪರೇಶ್‌ ಮೇಸ್ತಾ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರ ಕಗ್ಗೊàಲೆಯನ್ನು ಕೆಎಫ್ಡಿ, ಪಿಎಫ್ಐ ಸಂಘಟನೆಗಳು ಮಾಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲ ವಿಚಾರಗಳನ್ನು ಮತದಾರರ ಮುಂದಿಡಲು ಕರುನಾಡ ಯುವ ಜಾಗೃತಿ ಯಾತ್ರೆ ಕೈಗೊಳ್ಳಲಾಗಿದೆ ಎಂದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಿಮ್ಮೇಶ್‌ಗೌಡ , ಪದಾಧಿಕಾರಿಗಳಾದ ಹರ್ಷವರ್ಧನ್‌, ಪ್ರೇಂ ಪ್ರಸಾದ್‌ ಶೆಟ್ಟಿ, ಮಹೇಶ್‌, ಕರುಣಾಕರ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪೈಕಿ ಯಾರು ಎ ಟೀಂ, ಬಿ ಟೀಂ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಬಿಎಂಪಿ, ತುಮಕೂರು ಜಿಲ್ಲಾ ಪಂಚಾಯಿತಿ ಹೀಗೆ ಎರಡೂ ಪಕ್ಷಗಳು ಏನೇನು ಒಪ್ಪಂದ ಮಾಡಿಕೊಂಡಿವೆ ಎಂಬುದು ಜನರಿಗೆ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ.
-ಪ್ರತಾಪಸಿಂಹ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next