Advertisement
ಬೊಂಬಯಿಯಲ್ಲಿ ಜಾರ್ಜ್: ಉದ್ಯೋಗ ಹುಡುಕಿ ಇಪ್ಪತ್ತರ ಹರೆಯದಲ್ಲಿ ಆಗಿನ ಬೊಂಬಯಿ (ಈಗಿನ ಮುಂಬಯಿ)ಗೆ ಪ್ರಯಾಣ. ಅಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರೂಫ್ ರೀಡರ್. ಕೆಲವೇ ತಿಂಗಳುಗಳಲ್ಲಿ ಅದಕ್ಕೂ ತಿಲಾಂಜಲಿ. ಖ್ಯಾತ ಕಾರ್ಮಿಕ ನಾಯಕ ಪಿ. (ಪ್ಲಾಸಿದ್) ಡಿಮೆಲ್ಲೊ ಅವರ ಶಿಷ್ಯರಾಗಿ ಕಾರ್ಮಿಕ ಕ್ಷೇತ್ರದಲ್ಲಿ ದುಡಿಮೆ. ಬಳಿಕ 17 ವರ್ಷಗಳಲ್ಲಿ ಬೊಂಬಯಿಯ ಖ್ಯಾತ ಕಾರ್ಮಿಕ ನಾಯಕನ ಪಟ್ಟ. ಇಂಡಿಯನ್ ಲೈಫ್ ಅಶ್ಯೂರೆನ್ಸ್ ಕಂಪೆನಿ ಸ್ಟಾಫ್ ಯೂನಿಯನ್, ಮೋಟಾರ್ ಲಾರಿ ಡ್ರೈವರ್ ಆ್ಯಂಡ್ ಕ್ಲೀನರ್ ಅಸೋಸಿಯೇಶನ್, ಮುನ್ಸಿಪಲ್ ಮಜ್ದೂರ್ ಯೂನಿಯನ್, ಬಾಂಬೆ ಟ್ಯಾಕ್ಸಿಮನ್ ಯೂನಿಯನ್, ಬೆಸ್ಟ್ (ಬಿಇಎಸ್‌ಟಿ) ವರ್ಕರ್ ಯೂನಿಯನ್, ಬಾಂಬೆ ಲೇಬರ್ ಯೂನಿಯನ್ ಮೊದಲಾದ ಹತ್ತು ಹಲವು ಕಾರ್ಮಿಕ ಸಂಘಟನೆಗಳ ನೇತಾರ.
Related Articles
Advertisement
ಸಿಯಾಚಿನ್‌ನ ಭೇಟಿ: ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಜಾರ್ಜ್ ರಕ್ಷಣಾ ಮಂತ್ರಿ. ರಾಜಸ್ಥಾನದ ಪೋಖರಣ್ ಮರುಭೂಮಿಯಲ್ಲಿ ಪರಮಾಣು ಪರೀಕ್ಷೆ ನಡೆಯಿತು. ಉಷ್ಣತೆ ಮೈನಸ್ 40ರಷ್ಟು ಇರುವ ಸಿಯಾಚಿನ್ ಪ್ರದೇಶಕ್ಕೆ ಎರಡು ಬಾರಿ ಖುದ್ದು ಭೇಟಿ ನೀಡಿ ಅಲ್ಲಿಯ ಸೈನಿಕರ ಜೀವನ ಸ್ಥಿತಿಗತಿಯನ್ನು ಕಣ್ಣಾರೆ ಕಂಡಿದ್ದಾರೆ. ಎನ್‌ಡಿಎ ಸಂಚಾಲಕರಾಗಿಯೂ ಗಮನಾರ್ಹ ಸೇವೆ ನೀಡಿದ್ದಾರೆ.
ಅಗ್ರಗಣ್ಯ ನಾಯಕ: ಭಾರತ ಕಂಡ ಅಗ್ರಮಾನ್ಯ ಕಾರ್ಮಿಕ ನಾಯಕರಲ್ಲಿ, ರಾಜಕೀಯ ಮುಂದಾಳುಗಳಲ್ಲಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದವರಲ್ಲಿ ಜಾರ್ಜರು ಓರ್ವರು. 9 ಬಾರಿ ಲೋಕಸಭೆ ಮತ್ತು ಒಂದು ಬಾರಿ ರಾಜ್ಯಸಭೆ ಪ್ರತಿನಿಧಿಸಿದ್ದಾರೆ (ಬಿಹಾರದಿಂದಲೇ ಅಧಿಕ). ಅವರಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಜೀವನದ ಉನ್ನತಿ ಸಾಧಿಸಿದ್ದಾರೆ. ಕಾರ್ಮಿಕರ ಉನ್ನತಿಗೆ ಮುಂಬಯಿಯಲ್ಲಿ ಬಾಂಬೆ ಲೇಬರ್ ಕೋ-ಆಪರೇಟಿವ್ ಬ್ಯಾಂಕ್ ಎನ್ನುವ ಸಹಕಾರಿ ಬ್ಯಾಂಕನ್ನೂ ಅವರು ಸ್ಥಾಪಿಸಿದ್ದರು. ಅದು ಬಳಿಕ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಎಂದಾಯಿತು. ದೇಶದಾದ್ಯಂತ ಜಾರ್ಜರಿಂದ ಉಪಕೃತವಾದ ಹಲವಾರು ಸಂಘ – ಸಂಸ್ಥೆಗಳಿವೆ.
ಮಂಗಳೂರಿನಲ್ಲಿದ್ದಾಗಲೇ ಸಮಾಜವಾದಿ ಪಕ್ಷದಲ್ಲಿದ್ದ ಅವರು ಬಳಿಕ ಸಂಯುಕ್ತ ಸಮಾಜವಾದಿ, ಜನತಾ ಪಕ್ಷ, ಜನತಾ ದಳ, ಸಮತಾ, ಜನತಾದಳ (ಸಂಯುಕ್ತ) ಪಕ್ಷಗಳಲ್ಲಿಯೂ ಇದ್ದರು. ಕೇಂದ್ರ ಸರಕಾರದಲ್ಲಿ ವಿವಿಧ ಅವಧಿಗಳಲ್ಲಿ ಸಂಪರ್ಕ, ಕೈಗಾರಿಕಾ, ರೈಲ್ವೇ ಮತ್ತು ರಕ್ಷಣಾ ಸಚಿವರಾಗಿದ್ದು ಹಲವಾರು ಜನಪರ ಯೋಜನೆಗಳನ್ನು ಸಾಕಾರಗೊಳಿಸಿದವರು.
ಮಾತು-ಬರಹಗಳಲ್ಲಿ ಧೀಮಂತ: ಕೊಂಕಣಿ ಜಾರ್ಜರ ಮಾತೃಭಾಷೆಯಾಗಿದ್ದರೂ, ತುಳು, ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಮತ್ತಿತರ ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಮಾತಾಡಬಲ್ಲವರು. ಲ್ಯಾಟಿನನ್ನೂ ಒಳಗೊಂಡು ಒಟ್ಟು ಹತ್ತು ಭಾಷೆಗಳಲ್ಲಿ ಅವರು ಸಂವಹನ ಸಾಧಿಸಬಲ್ಲವರಾಗಿದ್ದರು. ಅವರ ಮಾತುಗಳನ್ನು ಕೇಳಲು ಜನ ಮುಗಿಬೀಳುತ್ತಿದ್ದರು. ಅವರ ಭಾಷಣಗಳಲ್ಲಿ ಜನರನ್ನು ಹಿಡಿದಿಡುವಂತಹ ಶಕ್ತಿಯಿತ್ತು. ಕನ್ನಡ, ಕೊಂಕಣಿಯನ್ನೂ ಒಳಗೊಂಡು ವಿವಿಧ ಭಾಷೆಗಳಲ್ಲಿ ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದರು. ಉತ್ತಮ ಬರಹಗಾರರೂ ಆಗಿರುವ ಜಾರ್ಜರು ಹಲವು ನಿಯತಕಾಲಿಕಗಳ ಸಂಪಾದಕ / ಪ್ರಕಾಶಕರೂ ಆಗಿದ್ದರು. ಅವುಗಳಲ್ಲಿ ಮಂಗಳೂರಿನಲ್ಲಿರುವಾಗ ಪ್ರಕಾಶಿಸಿದ “ಕೊಂಕಿ¡ ಯುವಕ್’ ಮಾಸಿಕ (ಕೊಂಕಣಿ – 1949), “ಪ್ರತಿಪಕ್Ò’ (ಹಿಂದಿ – 1980) ಮತ್ತು “ದಿ ಅದರ್ ಸೈಡ್’ (ಇಂಗ್ಲಿಷ್ – 1982) ಕೂಡಾ ಸೇರಿವೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಅವರ ಲೇಖನಗಳು ವಿವಿಧ ಭಾಷೆಗಳ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಜಾರ್ಜರ ಧೋರಣೆಗಳಲ್ಲಿ ಕಾÇಕಾಲಕ್ಕೆ ಬದಲಾವಣೆ ಗಳಾಗಿದ್ದರೂ ಅವು ದೇಶಕ್ಕಾಗಿ. ಅವರ ಮೇಲೆ ಅಪಾದನೆಗಳು ಬಂದಿದ್ದರೂ ತನಿಖೆ ಬಳಿಕ ಅವರು ಶುದ್ಧ ಹಸ್ತರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರು ಯಾವುದೇ ದುಶ್ಚಟ ರಹಿತರು. ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸುವವರು. ಉಡುಗೆ-ತೊಡುಗೆ, ಊಟೋಪಚಾರ, ಜೀವನ ಎಲ್ಲದರಲ್ಲಿಯೂ ಬಹಳ ಸಾದಾಸೀದಾ ಮನುಷ್ಯ ಮನುಷ್ಯ ಅವರಷ್ಟು ಸರಳವಾಗಿ ಬದುಕಿದ ರಾಜ ಕಾರಣಿಗಳು ಬಹಳ ಅಪರೂಪ.
ಬದುಕಿರುವಾಗಲೇ ಗುರುತಿಸಲ್ಪಡಲಿ: ಪ್ರಸ್ತುತ ಅಲ್ಜೀಮರ್ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿರುವ ಜಾರ್ಜರನ್ನು ಕೇಂದ್ರ ಸರಕಾರ ಗೋವಾದಲ್ಲಿ ಕನಿಷ್ಟ “ಜಾರ್ಜ್ ಫೆರ್ನಾಂಡಿಸ್ ಇನ್‌ಸ್ಟಿಟ್ಯೂಟ್ ಆಫ್ ಟನೆಲ್ ಟೆಕ್ನೋಲೊಜಿ’ ಸ್ಥಾಪನೆಯ ಮೂಲಕ ಗೌರವಿಸಿದೆ. ಕೇಂದ್ರದ ಅತ್ಯುನ್ನತ ಪ್ರಶಸ್ತಿಯೊಂದಕ್ಕೂ ಅವರನ್ನು ಪರಿಗಣಿಸಬೇಕು. ಈ ಹೆಮ್ಮೆಯ ಪುತ್ರನನ್ನು ಗೌರವಿಸುವಲ್ಲಿ ಕರ್ನಾಟಕ ಸರಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯೂ ಹಿಂದೆ ಉಳಿಯಬಾರದು. ಮಂಗಳೂರಿನ ನೆಲದಲ್ಲಿ ಹುಟ್ಟಿ, ಬೆಳೆದು, ಶಿಕ್ಷಣ ಪಡೆದು, ನಡೆದಾಡಿದ ಹಾಗೂ ಕರಾವಳಿಯ ಕೀರ್ತಿಯನ್ನು ಭಾರತದಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಚುರಪಡಿಸಿದವರು ಜಾರ್ಜರು. ಜಾತಿ, ಮತ, ರಾಜಕೀಯ ಅಭಿಪ್ರಾಯ ಭೇದ ಮರೆತು ಜಾರ್ಜರ ಜೀವಿತ ಕಾಲದಲ್ಲೇ ಅವರ ಸಾಧನೆಗಳನ್ನು ಗುರುತಿಸುವಂತಾಗಬೇಕು. ಮಂಗಳೂರಿನ ದೊಡ್ಡ ಯೋಜನೆಯೊಂದಕ್ಕೆ ಅಥವಾ ಪ್ರಮುಖ ರಸ್ತೆಯೊಂದಕ್ಕೆ ಜಾರ್ಜರ ಹೆಸರು ನೀಡಲು ಸಂಬಂಧ ಪಟ್ಟವರು ನಿರ್ಧಾರ ಕೈಗೊಳ್ಳಲಿ.
– ಎಚ್. ಆರ್. ಆಳ್ವ