Advertisement

ನೆಟ್‍ಫ್ಲಿಕ್ಸ್ ನಲ್ಲಿ ತೆರೆಕಾಣಲಿರುವ ಕಾರ್ತಿಕ್ ಆರ್ಯನ್ “ಧಮಾಕ”

05:15 PM Oct 18, 2021 | Team Udayavani |

ನವದೆಹಲಿ: ನಟ ಕಾರ್ತಿಕ್ ಆರ್ಯನ್ ಅವರ ಮುಂದಿನ ಚಿತ್ರ “ಧಮಾಕ” ನವೆಂಬರ್ 19 ರಂದು ನೆಟ್‍ಫ್ಲಿಕ್ಸ್ ನಲ್ಲಿ ತೆರೆಕಾಣಲಿದೆ.

Advertisement

ಈ ಚಿತ್ರವನ್ನು ರಾಮ್ ಮಧ್ವನಿ ನಿರ್ದೇಶಿಸಿದ್ದು, ಚಿತ್ರದ ಮೊದಲ ಟ್ರೈಲರ್ ಅ.19ರಂದು ಬಿಡುಗಡೆಯಾಗಲಿದೆ.

ಈ ಚಿತ್ರ ಮಾಜಿ ಸುದ್ದಿ ನಿರೂಪಕ ಅರ್ಜುನ್ ಪಾಠಕ್ ಅವರ ಕಥೆಯನ್ನು ಒಳಗೊಂಡಿದ್ದು, ಕಾರ್ತಿಕ್ ನಟಿಸುತ್ತಿದ್ದಾರೆ. ಚಿತ್ರದ ನಾಯಕನಿಗೆ ನೇರಪ್ರಸಾರದಲ್ಲಿ ಪ್ರೈಮ್ ಟೈಮ್  ಸುದ್ದಿ ನಿರೂಪಣೆ ಮಾಡಲು ಮತ್ತೊಂದು ಅವಕಾಶ ಸಿಕ್ಕಾಗ, ಭಯೋತ್ಪಾದಕರು ಕರೆ ಮಾಡಿ ಬಾಂಬ್ ಬೆದರಿಕೆ ಹಾಕುತ್ತಾರೆ. ಆ ಒಂದು ಕರೆ ಅವನ ಜೀವನದ ದಿಕ್ಕನ್ನು ಹೇಗೆ ಬದಲಾಯಿಸುತ್ತದೆ ಹಾಗೂ ಅವನನ್ನು ಹೇಗೆ ದ್ರೋಹಿಯನ್ನಾಗಿಸುತ್ತದೆ ಎಂಬುವುದು ಚಿತ್ರದಲ್ಲಿ ಮೂಡಿ ಬಂದಿದೆ.

ಅಮೃತ ಸುಭಾಷ್, ವಿಕಾಸ್ ಕುಮಾರ್ ಮತ್ತು ವಿಶ್ವಜಿತ್ ಪ್ರಧಾನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ನಟ ಮೃಣಾಲ್ ಠಾಕೂರ್ ಚಿತ್ರದಲ್ಲಿ ವಿಶೇಷ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next