Advertisement

ಜೈಲಲ್ಲಿ ಕಾರ್ತಿ-ಇಂದ್ರಾಣಿ ಮುಖಾಮುಖೀ ವಿಚಾರಣೆ

09:00 AM Mar 05, 2018 | Harsha Rao |

ಮುಂಬಯಿ: ಐಎನ್‌ಎಕ್ಸ್‌ ಅವ್ಯವಹಾರ ಪ್ರಕರಣ ಸಂಬಂಧ ಮಾಜಿ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ರವಿವಾರ ಸಿಬಿಐ ಮುಂಬಯಿಯ ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಿದೆ. ಐಎನ್‌ಎಕ್ಸ್‌ ಸಂಸ್ಥೆಯ ಮಾಲಕರಾಗಿದ್ದ ಇಂದ್ರಾಣಿ ಮುಖರ್ಜಿ ಮುಂದೆಯೇ ಕೂರಿಸಿ ವಿಚಾರಣೆ ನಡೆಸಲಾಗಿದೆ.

Advertisement

ಮಾಧ್ಯಮ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅನುವು ಮಾಡಿಕೊಡಲು ಸಚಿವರಾಗಿದ್ದ ಚಿದಂಬರಂ ಮೂಲಕ ಪ್ರಭಾವ ಬೀರಲು ಕಾರ್ತಿ 3.5 ಕೋಟಿ ರೂ.ಲಂಚ ಕೇಳಿದ್ದರು ಎಂದು ದಿಲ್ಲಿಯ ಕೋರ್ಟ್‌ಗೆ ಇಂದ್ರಾಣಿ ಹೇಳಿಕೆ ನೀಡಿದ್ದರು. ರವಿವಾರ ಮುಂಬಯಿಯ ಬೈಕುಲ್ಲಾ ಕಾರಾಗೃಹದಲ್ಲಿ ನಡೆದ ಮುಖಾಮುಖೀ ವಿಚಾರಣೆ ವೇಳೆ ಕಾರ್ತಿ ಈ ಆರೋಪ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 11.15ಕ್ಕೆ ಮುಂಬಯಿಗೆ ಕಾರ್ತಿಯವರನ್ನು ಕರೆತಂದ ಸಿಬಿಐ ಅಧಿಕಾರಿಗಳು ಸಂಜೆ ಇಬ್ಬರನ್ನೂ ಮುಖಾಮುಖೀಯಾಗಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಜೈಲಧಿಕಾರಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅವರ ಮೇಲೆ ನಿಗಾ ಇರಿಸಲು ಇಬ್ಬರು ಮಹಿಳಾ ಪೊಲೀಸ್‌ ಸಿಬಂದಿ ನಿಯೋಜಿಸಲಾಗಿತ್ತು. ಜತೆಗೆ ಅವರಿಬ್ಬರ ವಿಚಾರಣೆಯನ್ನು ವೀಡಿಯೋ ರೆಕಾರ್ಡ್‌ ಮಾಡಲಾಗಿತ್ತು. ಜೈಲಿನೊಳಕ್ಕೆ ಪ್ರವೇಶಿಸುವ ಮುನ್ನ ಕಾರ್ತಿ ಮಾಧ್ಯಮದವರತ್ತ ಕೈಬೀಸಿದರು. ಅವರು ಮಾ.5ರ ವರೆಗೆ ಸಿಬಿಐ ವಶದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next