Advertisement
ನಂತರ ದೇವಸ್ಥಾನದ ಸಭಾಂಗಣದಲ್ಲಿ ನೂರಾರು ಜನ ಮುತ್ತೆದೆಯರಿಂದ ದೇವಿಗೆ ಪುಷ್ಪಾರ್ಚನೆ ನಡೆಯಿತು.ದೇವಸ್ಥಾನದ ಅರ್ಚಕರಾದ ಮಾಣಿಕಪ್ರಭು ಜೋಶಿ, ಋತ್ವಿಜರಾದ ಸುರೇಶ ಜೋಶಿ ಅವರು ಲಕ್ಷ ಪುಷ್ಪಾರ್ಚನೆಯ ಸಂಕಲ್ಪ ಹಾಗೂ ದೇವಿ ನಾಮಾವಳಿ ಪಾರಾಯಣ ಮಾಡಿದರು. ನಂತರ ಮಂಗಳಾರತಿ ಮಾಡಲಾಯಿತು.
ದೇವಸ್ಥಾನ ಸಮಿತಿಯ ಪ್ರಹ್ಲಾದರಾವ ಕುಲಕರ್ಣಿ, ಗಜಾನನ ಕುಲಕರ್ಣಿ, ಸುರೇಶ ಕುಲಕರ್ಣಿ ರಘೋತ್ತಮ ಸರಾಫ್, ಕಾಶೀನಾಥ ಕುಲಕರ್ಣಿ, ಶಾಂತಲಿಂಗ, ಮಾರ್ಥಂಡಪ್ಪ ಬುರಲಿ, ಶ್ರೀಧರ ಕುಲಕರ್ಣಿ, ಎಂ. ಆರ್. ಕುಲಕರ್ಣಿ, ಶಾಂತಲಿಂಗ ಟೆಂಗಳಿ, ಅರ್ಚಕರಾದ ಮಲ್ಹಾಭಟ್ಟ ಜೋಶಿ, ಮಾರ್ಥಂಡ ಭಟ್ಟ ಜೋಶಿ, ಅನಂತ ಜೋಶಿ ಪಾಲ್ಗೊಂಡಿದ್ದರು.