Advertisement

ಕರೋಪಾಡಿ :ನಿಧಿಶೋಧಕ್ಕಾಗಿ ಬಂದ ಅಂತಾರಾಜ್ಯ ದರೋಡೆಕೋರರ ಬಂಧನ

03:45 AM Feb 05, 2017 | Team Udayavani |

ವಿಟ್ಲ : ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ವಿಘ್ನರಾಜ ಭಟ್‌ ಅವರ ಮನೆ ಅಂಗಳದಲ್ಲಿ ನಿಧಿಯಿದೆ ಎಂದು ಜ.24ರಂದು ಮುಂಜಾನೆ 2 ಗಂಟೆಯಿಂದ 4 ಗಂಟೆಯ ನಡುವೆ ಇನೋವಾ ಮತ್ತು ಆಲ್ಟೋ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಮನೆಯೊಳಗಿದ್ದವರನ್ನು ಕಟ್ಟಿ ಹಾಕಿ ಬೆದರಿಸಿ, ಜಾಗವನ್ನು ಅಗೆದು, ಬೆಳಗ್ಗೆಯಾದುದರಿಂದ ಏನೂ ಸಿಗದೇ ಬರಿಗೆ„ಯಲ್ಲಿ ಪರಾರಿಯಾಗಿದ್ದವರಲ್ಲಿ ಶನಿವಾರ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕನ್ಯಾನ ಗ್ರಾಮದ ಪೊಯ್ಯಕಂಡ ಇಕ್ಬಾಲ್‌ ಯಾನೆ ಇಕ್ಕು (22), ಕರೋಪಾಡಿ ಗ್ರಾಮದ ಕೋಡ್ಲ ಮಹಮ್ಮದ್‌ ಆಲಿ ಯಾನೆ ಅಲಿ ಮೋನು (29), ಕನ್ಯಾನ ಗ್ರಾಮದ ಮಂಡ್ನೂರು ಮೂಲದ ಕಾಸರಗೋಡು ಜಿಲ್ಲೆಯ ಬಾಕ್ರಬೈಲು ಪಾತೂರು ಬದಿಮಾರು ನಿವಾಸಿ ಅಬ್ಟಾಸ್‌ (26), ಕೊಳ್ನಾಡು ಗ್ರಾಮದ ಕುಡ್ತಮುಗೇರು ಕುಲಾಲ್‌ಕೋಡಿ ನಿವಾಸಿ ಅಶ್ರಫ್‌ ಯಾನೆ ಎಲ್‌ಟಿಟಿ ಅಶ್ರಫ್‌ (21), ಪೈವಳಿಕೆ ಗ್ರಾಮದ ಬಾಯಿಕಟ್ಟೆ ಲಕ್ಷಬೀಡು ನಿವಾಸಿ ಆಶಿಕ್‌ ಪಿ.(19) ಅವರು ಬಂಧಿತರು. ಅಲ್ಲದೇ ಈ ಪ್ರಕರಣದ ಆರೋಪಿಗಳಾದ ಪೈವಳಿಕೆ ವಾಸಿ ಶಾಫಿ ಕೆ. ಯಾನೆ ಕಲಂದರ್‌ ಶಾಫಿ ಯಾನೆ  ಎಮ್‌ ಎಲ್‌ ಎ ಶಾಫಿ, ಕೇರಳದ ಶಾಫಿ ಯಾನೆ ಚೋಟು ಶಾಫಿ, ಮಿತ್ತನಡ್ಕ ಹ್ಯಾರಿಸ್‌ ಹಾಗೂ ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಆರೋಪಿಗಳನ್ನು ಬಂಧಿಸುವುದಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದು, ಈ ತಂಡ ವಿವಿಧ ಆಯಾಮಗಳಿಂದ ತನಿಖೆ  ನಡೆಸಿ, ಕೇರಳದ ಕಾಸರಗೋಡು, ಕುಂಬಳೆ, ಪೈವಳಿಕೆ, ಮಂಜೇಶ್ವರ, ಕಡೆಗಳಲ್ಲಿ ಆರೋಪಿಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಶನಿವಾರ ಸಾಲೆತ್ತೂರು ಸಮೀಪದಲ್ಲಿ ಕೃತ್ಯಕ್ಕೆ ಬಳಸಿದ ಇನೋವಾ ಕಾರು, ಆಲ್ಟೋ ಕಾರು, ಮಾರಕಾಯುಧಗಳ ಸಹಿತ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದಾರೆ.

ಇಕ್ಬಾಲ್‌ ಯಾನೆ ಇಕ್ಕು  ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿವೆ. 2015ರಲ್ಲಿ ಯುವತಿಯೊಬ್ಬಳನ್ನು ಅಪಹರಿಸಿದ ಪ್ರಕರಣ ಮತ್ತು ಕನ್ಯಾನದಲ್ಲಿ ನಡೆದ ಆಸೀಫ್‌ ಯಾನೆ ಬಾಯಿಕಟ್ಟೆ ಆಸೀಫ್‌ ಕೊಲೆ ಪ್ರಕರಣದಲ್ಲಿ ಹಾಗೂ 2016ರಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವಾಗ ಜೈಲಿನೊಳಗಡೆ ನಡೆದ ಗಣೇಶ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಮಹಮ್ಮದ್‌ ಆಲಿ ಯಾನೆ ಅಲಿ ಮೋನು ಮೇಲೆ 2014ರಲ್ಲಿ ವಿಟ್ಲ ಠಾಣೆಯಲ್ಲಿ ಗಲಾಟೆ ಪ್ರಕರಣ, ಮತ್ತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಿಡ್ನಾಪ್‌ ಪ್ರಕರಣ, 2015ರಲ್ಲಿ ಕನ್ಯಾನದಲ್ಲಿ ನಡೆದ ಆಸೀಫ್‌ ಯಾನೆ ಬಾಯಿಕಟ್ಟೆ ಆಸೀಫ್‌ ಕೊಲೆ ಪ್ರಕರಣದಲ್ಲಿ, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

Advertisement

ಅಬ್ಟಾಸ್‌, ಅಶ್ರಫ್‌ ಯಾನೆ ಎಲ್‌ಟಿಟಿ ಅಶ್ರಫ್‌ ಮತ್ತು ಆಶಿಕ್‌ ಪಿ. ಅವರ ವಿರುದ್ದ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಎಸ್ಪಿ ಡಾ| ಭೂಷಣ್‌ ಜಿ.ಬೋರಸೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಡಾ| ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್‌ಪಿ ರವೀಶ್‌ ಸಿ ಆರ್‌ ಅವರ ನೇತƒತತ್ವದಲ್ಲಿ ಬಂಟ್ವಾಳ ಪೊಲೀಸ್‌ ವೃತ್ತ ನಿರೀಕ್ಷಕ ಬಿ ಕೆ ಮಂಜಯ್ಯ ,ವಿಟ್ಲ ಪಿಎಸ್‌ಐ ನಾಗರಾಜ್‌ ಎಚ್‌.ಇ., ಬೆಳ್ತಂಗಡಿ ಪಿಎಸ್‌ಐ ರವಿ ಬಿ.ಎಸ್‌., ಪೊಲೀಸರಾದ ಬಾಲಕೃಷ್ಣ , ಗಿರೀಶ್‌, ಉದಯ್‌, ಸಿಜು, ಜಯ ಕುಮಾರ್‌,  ಜನಾರ್ದನ್‌ , ಪ್ರವೀಣ್‌ ರೈ, ರಮೇಶ್‌, ಪ್ರವೀಣ್‌ ಕುಮಾರ್‌, ಭವಿತ್‌ ರೈ, ಸತೀಶ್‌  ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್‌, ದಿವಾಕರ್‌ ಮತ್ತು ಚಾಲಕರಾದ ರಘುರಾಮ, ವಿಜಯೇಶ್ವರ, ಸತ್ಯಪ್ರಕಾಶ್‌, ಯೋಗೀಶ್‌ ಭಾಗವಹಿಸಿದ್ದಾರೆ. ಈ ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪ್ರಶಂಸನ ಪತ್ರ ಮತ್ತು ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next