Advertisement

ಪ್ಲಿಸ್ಕೋವಾ ಆಟಕ್ಕೆ ತೆರೆ ಎಳೆದ ಗಾರ್ಸಿಯಾ

06:51 PM Sep 03, 2020 | mahesh |

ನ್ಯೂಯಾರ್ಕ್‌: ಯುಎಸ್‌ ಓಪನ್‌ ವನಿತಾ ಸಿಂಗಲ್ಸ್‌ ವಿಭಾಗದ ಅಗ್ರ ಶ್ರೇಯಾಂಕಿತ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ ಅವರ ಆಕ್ರಮಣಕಾರಿ ಆಟಕ್ಕೆ ಪ್ಲಿಸ್ಕೋವಾ ತತ್ತರಿಸಿ ಹೋದರು.

Advertisement

4 ವರ್ಷಗಳ ಹಿಂದೆ ಇಲ್ಲಿ ರನ್ನರ್ ಅಪ್‌ ಆಗಿದ್ದ ಮಾಜಿ ನಂ.1 ಆಟಗಾರ್ತಿ ಪ್ಲಿಸ್ಕೋವಾ ಅವರನ್ನು ಗಾರ್ಸಿಯಾ 6-1, 7-6 (7-2) ಅಂತರದಿಂದ ಕೆಡವಿದರು. ಇವರ ಮುಂದಿನ ಎದುರಾಳಿ ಅಮೆರಿಕದ ಜೆನ್ನಿಫ‌ರ್‌ ಬ್ರಾಡಿ.

ಚೇತರಿಸಿಕೊಂಡ ಒಸಾಕಾ
ಸ್ನಾಯು ಸೆಳೆತಕ್ಕೊಳಗಾಗಿದ್ದ ಜಪಾನಿನ ನವೋಮಿ ಒಸಾಕಾ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದಂತೆ ಕಂಡುಬಂದರು. ಆಕ್ರಮಣಕಾರಿ ಆಟವಾಡಿದ ಒಸಾಕಾ ಇಟೆಲಿಯ ಕ್ಯಾಮಿಲಾ ಜಾರ್ಜಿ ಅವರನ್ನು 6-1, 6-2ರಿಂದ ಹಿಮ್ಮೆಟ್ಟಿಸಿದರು.

ಒಸಾಕಾ ಅವರಿನ್ನು ಉಕ್ರೇನಿನ ಮಾರ್ತಾ ಕೋಸ್ಟ್‌ಯುಕ್‌ ವಿರುದ್ಧ ಆಡಲಿದ್ದಾರೆ. ಕೋಸ್ಟ್‌ಯುಕ್‌ ಲಾತ್ವಿಯಾದ ಅನಸ್ತಾಸಿಜಾ ಸೆವಸ್ತೋವಾ ಅವರನ್ನು 6-3, 7-6 (7-5) ಅಂತರದಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next