Advertisement

ಬೆಂಗಳೂರಿನ ಪ್ರಣವ್‌ ಆನಂದ್‌ ಭಾರತದ 76ನೇ ಗ್ರ್ಯಾನ್‌ಮಾಸ್ಟರ್‌

11:05 PM Sep 16, 2022 | Team Udayavani |

ಚೆನ್ನೈ: ಬೆಂಗಳೂರಿನ ಪ್ರಣವ್‌ ಆನಂದ್‌ ಭಾರತದ 76ನೇ ಗ್ರ್ಯಾನ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಅವರು ರೊಮೇನಿಯದ ಮಾಮೈಯನಲ್ಲಿ ನಡೆಯುತ್ತಿರುವ ವಿಶ್ವ ಯುವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ 2500 ಇಎಲ್‌ಒ ಅಂಕಗಳನ್ನು ದಾಟುವ ಮೂಲಕ ಈ ಸಾಧನೆ ಮಾಡಿದ್ದಾರೆ.

Advertisement

15 ವರ್ಷದ ಪ್ರಣವ್‌ ಗ್ರ್ಯಾನ್‌ಮಾಸ್ಟರ್‌ ಆಗುವುದಕ್ಕೆ ಬೇಕಾದ ಇತರೆಲ್ಲ ಅಗತ್ಯಗಳನ್ನು ಈಗಾಗಲೇ ಪೂರೈಸಿದ್ದಾರೆ.

ಕೊರೊನಾ ಕಾಟವಿಲ್ಲದೇ ಇದ್ದರೆ ಒಂದು ವರ್ಷ ಮೊದಲೇ ಅವರು ಈ ಸಾಧನೆ ಮಾಡಿರುತ್ತಿದ್ದರು ಎಂದು ಮೂಲಗಳು ಹೇಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next