Advertisement

ಕ್ಯಾಂಡಿಡೇಟ್ಸ್‌  ಚೆಸ್‌: ಪ್ರಜ್ಞಾನಂದ ಗೆಲುವು

12:17 AM Apr 08, 2024 | Team Udayavani |

ಟೊರೊಂಟೊ (ಕೆನಡಾ): ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ವಿದಿತ್‌ ಗುಜ್ರಾತಿ ವಿರುದ್ಧ ಆರ್‌. ಪ್ರಜ್ಞಾನಂದ ಗೆಲುವು ಸಾಧಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಅಮೆರಿಕದ ಹಿಕಾರು ನಕಮುರ ಅವರನ್ನು ವಿದಿತ್‌ ಸೋಲಿಸಿದ್ದರು.

Advertisement

ಇದು ಈ ಟೂರ್ನಿಯಲ್ಲಿ ಪ್ರಜ್ಞಾನಂದ ಸಾಧಿಸಿದ ಮೊದಲ ಗೆಲುವು. ಹಿಂದಿನ ಪಂದ್ಯದಲ್ಲಿ ಡಿ. ಗುಕೇಶ್‌ ವಿರುದ್ಧ ಪ್ರಜ್ಞಾನಂದ ಸೋತಿದ್ದರು. ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದ ಅವರ ಸಹೋದರಿ ಆರ್‌. ವೈಶಾಲಿ, ಬಲ್ಗೇರಿಯದ ನರ್ಗ್ಯುಲ್‌ ಸಲಿಮೋವಾ ವಿರುದ್ಧ ಜಯ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next