Advertisement

Rajasthan: ಕರ್ನಾಟಕದ ಜಯವೇ ರಾಜಸ್ಥಾನದಲ್ಲಿ ಒಗ್ಗಟ್ಟಿಗೆ ಸ್ಫೂರ್ತಿ!

08:58 PM Nov 16, 2023 | Pranav MS |

ಜೈಪುರ: ರಾಜಸ್ಥಾನದಲ್ಲಿ ನಾನೊಂದು ತೀರ, ನೀನೊಂದು ತೀರ ಎಂಬಂತಿರುವ ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಬಾಂಧವ್ಯ ಬೆಸೆಯಲು ಹೈಕಮಾಂಡ್‌ ಮುಂದಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.

Advertisement

ಕರ್ನಾಟಕದಲ್ಲಿ ಚುನಾವಣೆ ವೇಳೆ ಬೆಂಗಳೂರಿಗೆ ಬಂದಿದ್ದ ರಾಹುಲ್‌ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಸೂಚಿಸಿದ್ದರು. ಪ್ರತಿ ರ್ಯಾಲಿಯಲ್ಲಿ ಇಬ್ಬರು ಒಟ್ಟಾಗಿ ಪರಸ್ಪರ ಕೈಎತ್ತುವ ಮೂಲಕ ನಾವು ಇಬ್ಬರಲ್ಲ, ಒಬ್ಬರು ಎಂದು ಘೋಷಿಸಿದ್ದರು. ಈ ಒಗ್ಗಟ್ಟೇ ಕರ್ನಾಟಕದಲ್ಲಿ ಜಯ ತರಲು ಕಾರಣಗಳಲ್ಲಿ ಒಂದು ಎಂದು ಅರಿತಿರುವ ಕಾಂಗ್ರೆಸ್‌ ಹೈಕಮಾಂಡ್‌, ಇದರಿಂದ ಸ್ಫೂರ್ತಿ ಪಡೆದು ರಾಜಸ್ಥಾನದಲ್ಲೂ ಇದನ್ನು ಪ್ರಯೋಗಿಸಲು ಮುಂದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಗೆಹ್ಲೋಟ್‌ ಮತ್ತು ಪೈಲಟ್‌ ಜತೆಗಿರುವ ಫೋಟೋಗಳನ್ನು ಕಾಂಗ್ರೆಸ್‌ ಹಂಚಿಕೊಂಡಿದೆ. ಅಲ್ಲದೇ ಅದಕ್ಕೆ “ರಾಜಸ್ಥಾನದ ಜೋಡಿ ನಂ 1′ ಎಂದು ಶೀರ್ಷಿಕೆ ನೀಡಿದೆ. ಇದೇ ವೇಳೆ ಇತ್ತೀಚಿಗೆ ನಡೆದ ಚುರು ರ್ಯಾಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಗೆಹೊÉàಟ್‌ ಮತ್ತು ಪೈಲಟ್‌ ಕೇವಲ ಜತೆಯಾಗಿ ಕಾಣಿಸುತ್ತಿಲ್ಲ. ಇಬ್ಬರೂ ಒಗ್ಗಟ್ಟಾಗಿ ಒಂದೇ ಆಗಿದ್ದಾರೆ. ನಾವು ರಾಜಸ್ಥಾನ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next