ಮುಂಬೈ: ರಣಜಿ ದಿಗ್ಗಜ ತಂಡ ಮುಂಬೈ ವಿರುದ್ದ ಕರ್ನಾಟಕ ತಂಡ ರಣಜಿ ಪಂದ್ಯದಲ್ಲಿ ಐದು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದ ರಣಜಿ ಪಂದ್ಯ ಲೋ ಸ್ಕೋರಿಂಗ್ ಮುಖಾಮುಖಿಗೆ ಸಾಕ್ಷಿಯಾಯಿತು. ಬೌಲರ್ ಗಳ ಮೇಲಾಟದಲ್ಲಿ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಪಡೆ ಐದು ವಿಕೆಟ್ ಗಳ ಜಯ ಸಾಧಿಸಿತು.
ಗೆಲ್ಲಲು 126 ರನ್ ಗಳಿಸುವ ಗುರಿ ಪಡೆದ ಕರ್ನಾಟಕ ಕೇವಲ 24.3 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಜಯದ ಗುರಿ ಮುಟ್ಟಿತು.
ಮೊದಲ ಇನ್ನಿಂಗ್ಸ್ ನಲ್ಲಿ 194 ರನ್ ಗೆ ಆಲ್ ಔಟ್ ಆಗಿದ್ದ ಮುಂಬೈ ದ್ವಿತೀಯ ಇನ್ನಿಂಗ್ಸ್ ನಲ್ಲೂ ಅಲ್ಪ ಮೊತ್ತಕ್ಕೆ ಕುಸಿಯಿತು. ಸರ್ಫರಾಜ್ ಖಾನ್ ಅಜೇಯ 71 ರನ್ ಹೋರಾಟ ನಡೆಸಿದರೂ ಬೇರಾವ ಆಟಗಾರರ ಬೆಂಬಲ ಸಿಗದೆ 149 ರನ್ ಗೆ ಆಲ್ ಔಟ್ ಆಗಿದೆ.
ಎರಡೂ ಇನ್ನಿಂಗ್ಸ್ ಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ರವಿಕುಮಾರ್ ಸಮರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮುಂಬೈ: 194 ಮತ್ತು 149
ಕರ್ನಾಟಕ: 218 ಮತ್ತು 129-5