Advertisement
ಬುಧವಾರ ಮೋದಿ ಆ್ಯಪ್ ಮೂಲಕ ಮೈಸೂರು, ಆಗ್ರಾ, ದಾಮೋಹ್, ಕರೌಲಿ-ಧೋಲ್ಪುರ್, ರಾಯ್‌ಪುರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ವಿರುದ್ಧ ಟೀಕೆ ಗುಜರಾತ್‌ನಿಂದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳ ಕಾರ್ಮಿಕರನ್ನು ಬಡಿದು ಅಟ್ಟಲಾಗುತ್ತದೆ ಎಂಬ ಕಾಂಗ್ರೆಸ್ ಆರೋಪವನ್ನು ಪರೋಕ್ಷ ವಾಗಿ ಪ್ರಸ್ತಾವಿಸಿದ ಪ್ರಧಾನಿ ಮೋದಿ, ಬಿಜೆಪಿ ಎಲ್ಲರನ್ನೂ ಒಟ್ಟುಗೂಡಿಸಿ ಮುಂದುವರಿಯುವ ಬಗ್ಗೆ ಮಾತನಾಡುತ್ತಿದ್ದರೆ, ಕಾಂಗ್ರೆಸ್ ಸಮಾಜವನ್ನು ಒಡೆಯುವ ಮಾತುಗಳನ್ನಾಡುತ್ತಿದೆ. ಐದು ರಾಜ್ಯ ಗಳಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ. ಅದಕ್ಕೆ ಅನುಸಾರವಾಗಿ ಸಣ್ಣ-ಸಣ್ಣ ವಿಚಾರಗಳಿಗೆ ಸಂಬಂಧಿಸಿ ದಂತೆ ಕಾಂಗ್ರೆಸ್ ಜನರ ನಡುವೆ ಜಗಳ ತಂದಿಡಲಿದೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರು, ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರೆ ಅದನ್ನು ಹೆಮ್ಮೆ ಎಂದು ಪರಿಗಣಿಸಬಾರದು. ಜನರ ಸೇವೆ ಮಾಡಲು ಸಿಕ್ಕಿದ ಅವಕಾಶ ಎಂದು ಪರಿಗಣಿಸಬೇಕು. ಪರಾಜಿತ ಅಭ್ಯರ್ಥಿಗಳನ್ನು ಹೀಯಾಳಿಸ ಬಾರದು ಎಂದು ಪಕ್ಷದ ನಾಯಕರು, ಕಾರ್ಯ ಕರ್ತರಿಗೆ ಪ್ರಧಾನಿ ಕಿವಿಮಾತು ಹೇಳಿದರು.
Related Articles
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‌ಕುಮಾರ್ ಗೌಡ ಅವರ “ಮಾದರಿ ಕಾರ್ಯಕರ್ತನಾಗುವುದು ಹೇಗೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮನಸ್ಸಿನಲ್ಲೂ ತಾನೊಬ್ಬ ಆದರ್ಶ ಕಾರ್ಯ ಕರ್ತ ಆಗಬೇಕೆಂಬ ಬಯಕೆ ಇದ್ದರೂ ಇದ ಕ್ಕಾಗಿ ಸಾಕಷ್ಟು ಪರಿಶ್ರಮವಹಿಸಬೇಕಿದೆ. ಎಂದರು.
Advertisement
“ಅಂ.ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಒಳ್ಳೆಯ ಹೆಸರು ಬಂದಲ್ಲಿ ಜನಜೀವನ ಸುಧಾರಿಸುವುದೇ?’ ಎಂಬ ಎನ್.ಆರ್. ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಮುರಳೀ ಧರ್ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಜನಜೀವನ ಸುಧಾರಿಸಿದರೆ ಅಂ.ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಬೆಲೆ ಸಿಗುತ್ತದೆ. ದೇಶದ ಬೆಲೆ ಹೆಚ್ಚಾದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.