Advertisement

Karnataka ಇನ್ನೊಂದು ಪಶ್ಚಿಮ ಬಂಗಾಳಕ್ಕೆ ಶೀಘ್ರದಲ್ಲೇ ಸಾಕ್ಷಿ: ಚಕ್ರವರ್ತಿ ಸೂಲಿಬೆಲೆ

09:00 PM Jul 10, 2023 | Team Udayavani |

ಬೆಂಗಳೂರು: ಯುವ ಬ್ರಿಗೇಡ್ ಟಿ ನರಸೀಪುರದ ಸಂಚಾಲಕರಾಗಿದ್ದ ವೇಣುಗೋಪಾಲ ಅವರ ಹತ್ಯೆ ವಿಚಾರಕ್ಕೆ ಸಂಬಂಧಿಸಿ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಕೂಡ ಸರಣಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಆಕ್ರೋಶ ಹೊರ ಹಾಕಿದೆ.

Advertisement

”ಸಿದ್ಧರಾಮಯ್ಯ 2.0 ತನ್ನ ಗ್ರಹಣಾಂಗಗಳನ್ನು ವಿಸ್ತರಿಸುತ್ತಿದೆ. ಹನುಮ ಜಯಂತಿಯ ಸಕ್ರಿಯ ಆಯೋಜಕರಾಗಿದ್ದರಿಂದ ನಾವು ನಿನ್ನೆ ನಮ್ಮ ಸ್ವಯಂಸೇವಕರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದೇವೆ! ಅವರನ್ನು ಕಾಂಗ್ರೆಸ್ ಬೆಂಬಲಿಗರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಉರಿಯುತ್ತಿರುವ ಕರ್ನಾಟಕ..ಇನ್ನೊಂದು ಪಶ್ಚಿಮ ಬಂಗಾಳಕ್ಕೆ ಶೀಘ್ರದಲ್ಲೇ ಸಾಕ್ಷಿಯಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಟ್ವೀಟ್ ಮಾಡಿ ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ಸುಲಿಗೆಕೋರರು ಮತ್ತು ಕೊಲೆಗಡುಕರಿಗೂ ಅವಿನಾಭಾವ ಸಂಬಂಧ. ಟಿ. ನರಸೀಪುರದಲ್ಲಿ ನಡೆದ ಕೊಲೆಯ ಆರೋಪಿ ಜತೆ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಮಹದೇವಪ್ಪ ಅವರ ಮಗ ಸುನಿಲ್‌ ಬೋಸ್‌ ಅವಿನಾಭಾವ ಸಂಬಂಧ ಇರಿಸಿಕೊಂಡಿರುವುದರ ಹಿಂದಿನ ಹಕೀಕತ್ತೇನು?” ಎಂದು ಫೋಟೋಗಳನ್ನೂ ಹಂಚಿಕೊಂಡಿದೆ.

”ಕಾಂಗ್ರೆಸ್ ಬಂದಿದೆ, ಯಾತನೆ ತಂದಿದೆ..!

ಬೆಳಗಾವಿಯಲ್ಲಿ ಜೈನ ಮುನಿಯ ಭೀಕರ ‌ಕೊಲೆ..!
ಟಿ.ನರಸೀಪುರದಲ್ಲಿ ಹಿಂದೂ ಯುವಕನ ಕೊಲೆ..!
ಮಂಗಳೂರಿನಲ್ಲಿ ಕೆಲಸಕ್ಕಿದ್ದ ಕಾರ್ಮಿಕನ ಬರ್ಬರ ಹತ್ಯೆ..!
ಕಲಬುರ್ಗಿಯಲ್ಲಿ ಅಕ್ರಮ ಮರುಳು ಮಾಫಿಯಾ ‌ಪೇದೆಯ ಕೊಲೆ..!
ಕಲಬುರ್ಗಿಯಲ್ಲಿ ಹಫ್ತಾ ವಸೂಲಿಗೆ ಕಿರುಕುಳ ಪೊಲೀಸ್ ಪೇದೆ ಆತ್ಮಹತ್ಯೆ ಯತ್ನ..!
ಮಂಡ್ಯ ಕೃಷಿ ಸಚಿವನ ದೌರ್ಜನ್ಯಕ್ಕೆ ಒಳಗಾಗಿ KSRTC ಚಾಲಕ ಆತ್ಮಹತ್ಯೆ ಯತ್ನ..!

Advertisement

ಕಳೆದ ಒಂದು ತಿಂಗಳಲ್ಲಿ ಅನ್ನದಾತರ ಸರಣಿ ಆತ್ಮಹತ್ಯೆ!

ರಿಪ್ಪನ್ ಪೇಟೆ: ರೈತ ಸುರೇಶ್
ಹಾವೇರಿ: ರೈತ ದೇವೇಂದ್ರಪ್ಪ ಹನುಮಂತಪ್ಪ ಲಮಾಣಿ,‌
ಹಾವೇರಿ: ರೈತ ಬಸವರಾಜ್ ಬೆನಕಣ್ಣನವರ್,
ಹಾವೇರಿ: ರೈತ ಸಿದ್ದಲಿಂಗಪ್ಪ ಹನುಮಂತಪ್ಪ ಸಪ್ಪಣ್ಣನವರ,
ಹಾವೇರಿ: ರೈತ ಚಂದ್ರಪ್ಪ ಗದಿಗೆಪ್ಪ,
ಹಾವೇರಿ: ರೈತ ಶಿವನಗೌಡ ಭೀಮನಗೌಡ ಹೊಸಮನಿ,
ಹಾವೇರಿ: ರೈತ ಮಂಜುನಾಥ ನಾಗನೂರು
ಯಾದಗಿರಿ : ರೈತ ಅಮರಣ್ಣ ಕುಂಬಾರ
ಸುರಪುರ: ರೈತ ಕಾಮರಾಯ
ಮೈಸೂರು : ಯಾಲಕ್ಕಿ ಗೌಡ
ಚೆನ್ನಗಿರಿ: ರೈತ ಛತ್ರನಾಯ್ಕ
ಪಾವಗಡ: ರೈತ ಭೀಮಪ್ಪ
ಮುದ್ದೇಬಿಹಾಳ: ರೈತ ಶಿವಪ್ಪ ಬಿರಾದಾರ್

ಸಿದ್ದರಾಮಯ್ಯರವರ 2.0 ತುಘಲಕ್ ಆಡಳಿತದಲ್ಲಿಯೂ ಮುಂದುವರೆದಿದೆ ಕೊಲೆ, ಸುಲಿಗೆ,ದರೋಡೆ, ರೈತರ ಆತ್ಮಹತ್ಯೆ..! “ಕರ್ನಾಟಕ ಅಶಾಂತಿಯ ತೋಟವನ್ನಾಗಿಸುವುದೇ” ಕಾಂಗ್ರೆಸ್ ಗ್ಯಾರಂಟಿ..! ಎಂದು ಬಿಜೆಪಿ ಟ್ವೀಟ್ ಮಾಡಿದೆ.

ನರಸೀಪುರದಲ್ಲಿ ನಡೆದ ವೇಣುಗೋಪಾಲ್ ನಾಯಕ್‌ಗೆ ಚೂರಿ ಇರಿತ ಪ್ರಕರಣದಲ್ಲಿ ಮಣಿಕಂಠ ಮತ್ತು ಸಂದೇಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪುನೀತ್ ರಾಜ್‌ಕುಮಾರ್ ಮತ್ತು ಹನುಮಾನ್ ಪೋಸ್ಟರ್‌ಗಳ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದು ಬಳಿಕ ಚಾಕುವಿನಿಂದ ಇರಿಯಲಾಗಿದೆ ಎಂದು ಹೇಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next