Advertisement
ಗುರುವಾರ ತಡರಾತ್ರಿ 12 ಗಂಟೆಯ ಸುಮಾರಿಗೆ ದಾನಾ ಚಂಡಮಾರುತ ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಿದ್ದು, ಸುಮಾರು ಎಂಟೂವರೆ ಗಂಟೆಗಳ ಬಳಿಕ ಲ್ಯಾಂಡ್ಫಾಲ್ ಪ್ರಕ್ರಿಯೆ ಪೂರ್ಣವಾಯಿತು ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಭೂಮಿಗೆ ಅಪ್ಪಳಿಸಿದ ಸಮಯದಲ್ಲಿ ಗಾಳಿಯ ವೇಗ 110 ಕಿ.ಮೀ. ಇದ್ದು, ಇದರ ಭೀಕರತೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
Related Articles
ಪದೇಪದೆ ಚಂಡಮಾರುತಕ್ಕೆ ತುತ್ತಾಗುವ ಒಡಿಶಾದಲ್ಲಿ ಜನರ ರಕ್ಷಣೆಗಾಗಿ ಬೃಹತ್ ಮಟ್ಟದಲ್ಲಿ ತಗ್ಗು ಪ್ರದೇಶದಿಂದ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಮೊದಲು ಆರಂಭಿಸಿದ್ದು ನವೀನ್ ಪಟ್ನಾಯಕ್. ಇದೇ ಮಾದರಿಯನ್ನು ಒಡಿಶಾದಲ್ಲಿ ಈಗಲೂ ಅನುಸರಿಸಲಾಗುತ್ತಿದ್ದು, ಚಂಡಮಾರುತದ ಎಚ್ಚರಿಕೆ ಬೆನ್ನಲ್ಲೇ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ.
Advertisement
113 ವರ್ಷದ ಟ್ಯಾಂಕ್ ರಕ್ಷಿಸಲು ನೀರು ಸ್ಥಗಿತಕೋಲ್ಕತಾ: ದಾನಾ ಚಂಡಮಾರುತ ಪ್ರಭಾವದಿಂದ ಕೋಲ್ಕತಾದ ಬಹುಭಾಗಕ್ಕೆ ನೀರು ಪೂರೈಕೆ ಮಾಡುವ 113 ವರ್ಷ ಇತಿಹಾಸ ಇರುವ ನೀರಿನ ಟ್ಯಾಂಕ್ ಅನ್ನು ರಕ್ಷಿಸಿದ ಅಂಶ ಬೆಳಕಿಗೆ ಬಂದಿದೆ. ಅದಕ್ಕಾಗಿ ಟ್ಯಾಂಕ್ನಿಂದ ನೀರು ಪೂರೈಕೆ ಸ್ಥಗಿತಕ್ಕೆ ಕೋಲ್ಕತಾ ಪಾಲಿಕೆ ಅಧಿಕಾರಿಗಳು ತೀರ್ಮಾ ನಿಸಿದ್ದರು. 25 ಲಕ್ಷ ಗ್ಯಾಲನ್ ನೀರು ಸಂಗ್ರಹಿಸುವ ಸಾಮರ್ಥ್ಯದ ಟ್ಯಾಂಕ್ ಖಾಲಿ ಯಾದ 3.6 ಲಕ್ಷ ಟನ್ ತೂಕವಿರುತ್ತದೆ. ಆದರೆ ನೀರು ತುಂಬಿಕೊಂಡಿದ್ದರೆ 4 ಲಕ್ಷ ಟನ್ ತೂಕವಿರುತ್ತದೆ. ರಾತ್ರಿಯಿಡೀ ಕಂಟ್ರೋಲ್ ರೂಂನಲ್ಲೇ ಇದ್ದ ಮಮತಾ
ಚಂಡಮಾರುತದ ಸಮಯದಲ್ಲಿ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಲು ಸಹಾಯವಾಗಲಿ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾತ್ರಿಯಿಡೀ ಕೋಲ್ಕತಾದ ಕಂಟ್ರೋಲ್ ರೂಂನಲ್ಲೇ ಕಳೆದಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಭಾರೀ ಮಳೆ, ಹಾನಿ
ದಾನಾ ಚಂಡಮಾರುತ ಪಶ್ಚಿಮ ಬಂಗಾಲದಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಕರಾವಳಿ ಜಿಲ್ಲೆಗಳಾದ ಪೂರ್ವ ಮೇದಿನಿಪುರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳಲ್ಲಿನ ಪ್ರದೇಶಗಳು ಮುಳುಗಡೆ ಯಾಗಿವೆ. ರಾಜ್ಯದಲ್ಲಿ 250 ಮರಗಳು ಹಾಗೂ 175 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 300ಕ್ಕೂ ಹೆಚ್ಚು ಕಚ್ಚಾ ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು, ವಿಮಾನ ಸೇವೆ ಪುನರಾರಂಭ
ಚಂಡಮಾರುತದಿಂದಾಗಿ ರದ್ದು ಮಾಡಲಾಗಿದ್ದ ವಿಮಾನ, ರೈಲು ಸೇವೆ ಶುಕ್ರವಾರ ಮುಂಜಾನೆ ಯಿಂದಲೇ ಆರಂಭವಾಗಿವೆ. ಕೋಲ್ಕತಾದಲ್ಲಿ ವಿಮಾನ ಸೇವೆ 8 ಗಂಟೆಗೆ ಆರಂಭವಾದರೆ, ರೈಲು ಸೇವೆ 10 ಗಂಟೆಗೆ ಆರಂಭವಾಗಿದೆ.