Advertisement
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ (ಅಜೇಯ 84 ರನ್, 48 ಎಸೆತ, 7 ಬೌಂಡರಿ, 4 ಸಿಕ್ಸರ್) ಅವರ ಭರ್ಜರಿ ಬ್ಯಾಟಿಂಗ್‌ನಿಂದ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್ ಗಳಿಸಿ ಜಯ ದಾಖಲಿಸಿತು. ಇದರೊಂದಿಗೆ ಕರ್ನಾಟಕ ತಂಡ ಲೀಗ್, ಸೂಪರ್ ಲೀಗ್ ಸೇರಿದಂತೆ ಸತತ 7ನೇ ಗೆಲುವು ಸಾಧಿಸಿತು. ಸೋಮವಾರ ನಡೆಯುವ ಸೂಪರ್ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ಮುಂಬಯಿ ತಂಡವನ್ನು ಎದುರಿಸಲಿದೆ.
ಚೇಸಿಂಗ್ ವೇಳೆ ಇನ್‌ಫಾರ್ಮ್ ಆರಂಭಕಾರ ದೇವದತ್ತ ಪಡಿಕ್ಕಲ್ ಕೇವಲ 2 ರನ್ ಮಾಡಿ ಔಟಾದಾಗ ಕರ್ನಾಟಕ ಆಘಾತ ಅನುಭವಿಸಿತು. ಆಗ ಸ್ಕೋರ್ 33 ರನ್ ಆಗಿತ್ತು. ಆದರೆ ಒಂದೆಡೆ ಗಟ್ಟಿಯಾಗಿ ಕ್ರೀಸಿಗೆ ಅಂಟಿಕೊಂಡ ರಾಹುಲ್ ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಸಾಗಿದರು. ಕರ್ನಾಟಕದ ಜಯಭೇರಿ ವೇಳೆ ರಾಹುಲ್ ಅಜೇಯ 84 ರನ್ ಮಾಡಿದ್ದರು. 48 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್ ವೇಳೆ 7 ಬೌಂಡರಿ, 4 ಸಿಕ್ಸರ್ ಸಿಡಿಯಲ್ಪಟ್ಟಿತು. ರೋಹನ್ ಕದಮ್ (23), ನಾಯಕ ಮನೀಷ್ ಪಾಂಡೆ (33 ರನ್, 29 ಎಸೆತ, 3 ಸಿಕ್ಸರ್) ಮತ್ತು ಕರುಣ್ ನಾಯರ್ (ಅಜೇಯ 23 ರನ್, 11 ಎಸೆತ, 2 ಬೌಂಡರಿ, 2 ಸಿಕ್ಸರ್) ರಾಹುಲ್‌ಗೆ ಉತ್ತಮ ಬೆಂಬಲ ನೀಡಿದರು.
Related Articles
ಪಂಜಾಬ್ ಪರ ಮನ್‌ದೀಪ್ ಸಿಂಗ್ (76 ರನ್, 50 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಗುರುಕೀರತ್ ಸಿಂಗ್ (44 ರನ್, 32 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಕ್ಲಿಕ್ ಆಗಲಿಲ್ಲ. ಪಂಜಾಬ್‌ಗ ಕಡಿವಾಣ ಹಾಕುವಲ್ಲಿ ರೋನಿತ್ ಮೋರೆ (27ಕ್ಕೆ 4) ಪಾತ್ರ ಮಹತ್ವದ್ದಾಗಿತ್ತು.
Advertisement
ಸಂಕ್ಷಿಪ್ತ ಸ್ಕೋರ್ಪಂಜಾಬ್: 20 ಓವರ್‌ಗಳಲ್ಲಿ 6 ವಿಕೆಟಿಗೆ 163 (ಮನ್‌ದೀಪ್ 76, ಗುರುಕೀರತ್ 44, ಮೋರೆ 27ಕ್ಕೆ 4). ಕರ್ನಾಟಕ: 18 ಓವರ್‌ಗಳಲ್ಲಿ 3 ವಿಕೆಟಿಗೆ 167 (ರಾಹುಲ್ ಅಜೇಯ 84, ಪಾಂಡೆ 33, ಕದಮ್ 23, ನಾಯರ್ ಅಜೇಯ 23).