Advertisement

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಮಹಾರಾಷ್ಟ್ರ ಘಟಕ ಉದ್ಘಾಟನೆ

02:23 PM Apr 24, 2018 | Team Udayavani |

ಮುಂಬಯಿ: ಕರ್ನಾಟಕ ಸುಗಮ ಸಂಗೀತ ಪರಿಷತ್‌, ಬೆಂಗಳೂರು ಇದರ ಮಹಾರಾಷ್ಟ್ರ ಘಟಕ ಉದ್ಘಾಟನೆ ಮತ್ತು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಎ. 22 ರಂದು ಅಪರಾಹ್ನ 3 ರಿಂದ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಸಂಗೀತ-ನೃತ್ಯ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕರ್ನಾಟಕ ವಿಧಾನ ಪರಿಷತ್ತು ಬೆಂಗಳೂರು ಸಭಾಪತಿ ಡಿ. ಎಚ್‌. ಶಂಕರಮೂರ್ತಿ ಇವರು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕಕ್ಕೆ ದೀಪಪ್ರಜ್ವಲಿಸಿ ಚಾಲನೆ ನೀಡಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತು ಇದರ ಸ್ಥಾಪಕ ಅಧ್ಯಕ್ಷ ವೈ. ಕೆ. ಮುದ್ದುಕೃಷ್ಣ, ಅಧ್ಯಕ್ಷ ಡಾ| ಕಿಕ್ಕೇರಿ ಕೃಷ್ಣಮೂರ್ತಿ ಅವರು ಅತಿಥಿಗಳಾಗಿ ಆಗಮಿಸಿದ್ದರು.

ವೈ. ಕೆ. ಮುದ್ದುಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ  ಸಭಾ ಕಾರ್ಯಕ್ರಮದಲ್ಲಿ ಎ. ಕೆ. ಎಂ. ಆಶ್ರಫ್‌, ಪ್ರಭಾಕರ ಕಲ್ಲೂರಾಯ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕಾರ್ಯದರ್ಶಿ ಶ್ರೀನಿವಾಸ ಉಡುಪ, ಕೋಶಾಧಿಕಾರಿ ಧಾರವಾಡ  ರವಿ, ಉದ್ಯಮಿ, ಕಲಾಪೋಷಕ ಕಾಪು ವಿಶ್ವನಾಥ ಶೆಟ್ಟಿ, ಝೆಡ್‌. ಎ. ಕಯ್ನಾರು, ಶಾರದಾ ಶಾಲೆಯ ಪ್ರಾಂಶುಪಾಲೆ ವನಿತಾ ಕುಮಾರ್‌, ಸಪ್ತಸ್ವರ ಕಲ್ಚರಲ್‌ ಅಸೋಸಿಯೇಶನ್‌ ಕಾರ್ಯಾಧ್ಯಕ್ಷ ಭಾಸ್ಕರ ಸರಪಾಡಿ ಸಸಿಹಿತ್ಲು, ಕರ್ನಾಟಕ ಸಂಘ ಅಂಧೇರಿ ಗೌರವಾಧ್ಯಕ್ಷ ವಿ. ಧನಂಜಯ ಶೆಟ್ಟಿ, ಅಧ್ಯಕ್ಷ ಹ್ಯಾರಿ ಸಿಕ್ವೇರಾ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಬಾಲ ಕಲಾವಿದೆಯರುಗಳಾದ ಲಾವಣ್ಯಾ ಸಂತೋಷಿ ರಾವ್‌, ಭಾವಿಕಾ ಸುವರ್ಣ ಇವರಿಂದ ನೃತ್ಯ ವೈವಿಧ್ಯ, ಆಶೀಷ್‌ ದೇವಾಡಿಗ ಇವರಿಂದ ಕೊಳಲು ವಾದನ, ಹರೀಶ್‌ ಪೂಜಾರಿ ಇವರಿಂದ ಸ್ಯಾಕೊÕಫೋನ್‌,  ಶೌರ್ಯ ಸನಿಲ್‌ ಇವರಿಂದ ಕೀಬೋರ್ಡ್‌ ವಾದನ ನಡೆಯಿತು. ಪವಿತ್ರಾ ಆರ್ಟ್ಸ್ ವಿಜ್ಯುವಲ್‌ ಇನ್‌ಸ್ಟಿಟ್ಯೂಟ್‌ ಡೊಂಬಿವಲಿ ಕಲಾವಿದರಿಂದ ವಿಶೇಷ ನೃತ್ಯ ಪ್ರದರ್ಶನ ಜರಗಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮಹಾರಾಷ್ಟÅ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಮುಂಬಯಿ ಘಟಕದ ಅಧ್ಯಕ್ಷ ದಿನೇಶ್‌ ಶೇರುಗಾರ್‌, ಸಂಸ್ಥೆಯ ಸಂಚಾಲಕ ರಾಜ್‌ಕುಮಾರ್‌ ಕಾರ್ನಾಡ್‌, ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಕೋಶಾಧಿಕಾರಿ ಮೋಹನ್‌ದಾಸ್‌ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪ್ರಭಾಕರ ನಾಯಕ್‌, ಸೌಭಾಗ್ಯ ಗೌಡ, ಪ್ರತಿಮಾ ಎಸ್‌. ಹೆಗ್ಡೆ, ಪುಷ್ಪಾ ಗೌಡ, ರಾಜೇಂದ್ರ ರಾವ್‌, ನಂದಾ ಸುವರ್ಣ, ಶಾಲಿತಾ ಎನ್‌. ಕೋತ್ವಾಲ್‌  ಇವರು ಉಪಸ್ಥಿತರಿದ್ದರು. 

Advertisement

ನಗರ ಮತ್ತು ಉಪ ನಗರಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಗೀತ, ಕಲಾ ಸಂಘಟನೆಗಳ ಪದಾಧಿಕಾರಿಗಳು, ಸಂಗೀತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಚಿತ್ರ-ವರದಿ : ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next