Advertisement

ದ.ಕ. ಸಾರಿಗೆ ನಿರ್ವಹಣೆಯ ಮೇಲೆ ಹೊಡೆತ

07:00 PM Jan 24, 2022 | Team Udayavani |

ಪುತ್ತೂರು: ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆಯ ಸಿಬಂದಿ ಮಾತೃ ಜಿಲ್ಲೆಗೆ ತೆರಳಲು ವರ್ಗಾವಣೆ ಆದೇಶವನ್ನು ಪಡೆದಿದ್ದಾರೆ. ಇಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದಿರುವ ಕಾರಣ ಸಿಬಂದಿ ಕೊರತೆ ಉಂಟಾಗಿ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ.

Advertisement

ಮಂಗಳೂರು ಮತ್ತು ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಜನವರಿ ತಿಂಗಳಲ್ಲಿ ಒಟ್ಟು 94 ಚಾಲಕ ಮತ್ತು ನಿರ್ವಾಹಕರು ನಿವೃತ್ತರಾಗಲಿದ್ದಾರೆ. ಉಭಯ ವಿಭಾಗಗಳಲ್ಲಿ 260 ಚಾಲಕ ಮತ್ತು ನಿರ್ವಾಹಕರು ತಮ್ಮ ತವರು ವಿಭಾಗಗಳಿಗೆ ವರ್ಗಾವಣೆ ಆದೇಶ ಪಡೆದು ಕರ್ತವ್ಯದಿಂದ ಬಿಡುಗಡೆಗಡೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಉಭಯ ವಿಭಾಗಗಳಿಂದ 167 ಚಾಲಕ ಮತ್ತು ನಿರ್ವಾಹಕರು ತಮ್ಮ ಜಿಲ್ಲೆಗಳಿಗೆ ವರ್ಗಾ ವಣೆಗೊಂಡು ತೆರಳಿದ್ದಾರೆ.

15 ವರ್ಷ ವರ್ಗಾವಣೆ
ಮಾಡಬಾರದು
ಕೆಎಸ್‌ಆರ್‌ಟಿಸಿ ಚಾಲಕ ಮತ್ತು ನಿರ್ವಾ ಹಕರ ನೇಮಕಾತಿಯನ್ನು ಸ್ಥಳೀಯವಾಗಿ ಮಾಡಲು ಅವಕಾಶವಿಲ್ಲವೆಂದಾದರೆ ಕೇಂದ್ರ ಕಚೇರಿಯಿಂದ ನೇಮಕ ಮಾಡುವ ಸಂದರ್ಭ ವಿಭಾಗವಾರು ನೇಮಕಾತಿ ಪದ್ಧತಿಯನ್ನು ಜಾರಿಗೊಳಿಸಬೇಕು. ಯಾವುದೇ ವಿಭಾಗಕ್ಕೆ ಹೊರ ಜಿಲ್ಲೆಯ ಚಾಲಕ ಮತ್ತು ನಿರ್ವಾಹಕರು ನೇಮಕಾತಿ ಗೊಂಡಲ್ಲಿ ಅವರಲ್ಲೂ 15 ವರ್ಷಗಳ ಕಾಲ ಅವರ ಮಾತೃವಿಭಾಗಕ್ಕೆ ವರ್ಗಾವಣೆ ಮಾಡಬಾರದು. ಆಯಾ ವಿಭಾಗವಾರು ಚಾಲಕರ ಚಾಲನ ಪರೀಕ್ಷೆಯನ್ನು ಮಾಡುವ ಮೂಲಕ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಯಾವುದೇ ಕಾರಣಕ್ಕೂ ಪ್ರಯಾಣಿಕರ ಅಸುರಕ್ಷತೆಗೆ ಕಾರಣವಾಗಲಿರುವ ಗುತ್ತಿಗೆ ಆಧಾರದ ಅಥವಾ ಖಾಸಗಿ ಏಜೆನ್ಸಿಗಳಿಂದ ಚಾಲಕ ಮತ್ತು ನಿರ್ವಾಹಕರ ನೇಮಕಾತಿ ಮಾಡ ಬಾರದು ಎಂಬ ಬೇಡಿಕೆ ಕೇಳಿ ಬಂದಿದೆ.

ಬಿಎಂಎಸ್‌ ಎಚ್ಚರಿಕೆ
ಹೊಸ ನೇಮಕಾತಿ ಅಥವಾ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಕೆಎಸ್‌ಆರ್‌ಟಿಸಿಯ ಹಾಸನ ವಿಭಾಗ ದಲ್ಲಿ 80 ಮಂದಿ ಹೆಚ್ಚುವರಿ ಚಾಲಕ ಮತ್ತು ನಿರ್ವಾಹಕರಿದ್ದಾರೆ. ಅವರನ್ನು ತಾತ್ಕಾಲಿ ಕವಾಗಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಗೆ ನೇಮಕಾತಿಗೊಳಿಸಬೇಕು. ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ ಚಾಲಕ ಮತ್ತು ನಿರ್ವಾಹಕ ಹುದ್ದೆಯ ಕೊರತೆಗೆ ಕಾರಣವಾಗಿ ಇಲ್ಲಿ ಸಾರಿಗೆ ನಿರ್ವಹಣೆಯ ಸಮಸ್ಯೆ ಉಂಟಾದರೆ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಮಜ್ದೂರ್‌ ಸಂಘವು ಸಾರ್ವಜನಿಕರೊಂದಿಗೆ ಸೇರಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜನಾಂದೋಲನವನ್ನು ನಡೆಸಬೇಕಾದೀತು ಎಂದು ಕೆಎಸ್‌ಆರ್‌ಟಿಸಿ ಮಜ್ದೂರ್‌ ಸಂಘದ ಪುತ್ತೂರು ವಿಭಾಗ ವಕ್ತಾರ ಶಾಂತರಾಮ ವಿಟ್ಲ ತಿಳಿಸಿದ್ದಾರೆ.

ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಮನವಿ
ವರ್ಗಾವಣೆಗೊಂಡವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದಂತೆ ಕೆಎಸ್‌ಆರ್‌ಟಿಸಿ ಮಜ್ದೂರ್‌ ಸಂಘದ ನಿಯೋಗವು ಪುತ್ತೂರು ವಿಭಾಗ ಕಚೇರಿಗೆ ಭೇಟಿ ನೀಡಿದ ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾ ಕರ ರೆಡ್ಡಿ ಅವರ ಮೂಲಕ ಆಡಳಿತ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ. ಕೆಎಸ್‌ಆರ್‌ಟಿಸಿ ಮಜ್ದೂರ್‌ ಸಂಘದ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಮತ್ತು ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿ ಮಾಡಿ ವರ್ಗಾವಣೆಯ ಸಮಸ್ಯೆಯಿಂದ ಕೊಡಗು, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾರಿಗೆ ನಿರ್ವಹಣೆಯ ಸಮಸ್ಯೆ ಉಂಟಾ ಗುತ್ತಿರುವ ಕುರಿತು ವಿವರಿಸಿತ್ತು. ಸ್ಪಂದಿಸಿದ ಸಚಿವರು ಮತ್ತು ಶಾಸಕರು ಪ್ರವಾಸಿ ಮಂದಿರಕ್ಕೆ ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿಗಳನ್ನು ಕರೆ ಯಿಸಿ ಈ ಕುರಿತಂತೆ ಸಮಾಲೋಚನೆ ನಡೆಸಿದರು. ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಸಂಪರ್ಕಿಸಿದ ಸಚಿವ ಎಸ್‌. ಅಂಗಾರ ಈ ಸಮಸ್ಯೆಯ ಕುರಿತು ಚರ್ಚಿಸಲು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರನ್ನು ಪುತ್ತೂರಿಗೆ ಕಳುಹಿಸುವಂತೆ ವಿನಂತಿಸಿದ್ದರು. ಸಚಿವರ ನಿರ್ದೇಶನದಂತೆ ಮಜ್ದೂರ್‌ ಸಂಘದ ನಿಯೋಗವು ಮನವಿ ಸಲ್ಲಿ ಸಿತ್ತು. ನಿಯೋಗದಲ್ಲಿ ಕೆಎಸ್‌ಆರ್‌ಟಿಸಿ ಮಜ್ದೂರ್‌ ಸಂಘದ ಪುತ್ತೂರು ವಿಭಾಗ ವಕ್ತಾರ ಶಾಂತರಾಮ ವಿಟ್ಲ, ಉಪಾಧ್ಯಕ್ಷರಾದ ಸತ್ಯಶಂಕರ್‌ ಭಟ್‌, ರಾಮಚಂದ್ರ ಅಡಪ, ಕಾರ್ಯದರ್ಶಿ ಬಿ.ಆರ್‌. ಆನಂದ, ದಯಾನಂದ ಕಲ್ಲಡ್ಕ, ದೇವಾನಂದ ಮತ್ತಿತರರು ತೆರಳಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next