Advertisement
ಮಾನಸಗಂಗೋತ್ರಿ ಆವರಣದಲ್ಲಿರುವ ಮುಕ್ತ ವಿಶ್ವವಿದ್ಯಾಲಯದಆಡಳಿತಭವನದಲ್ಲಿಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂಲ ವಿವಿ ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಮುಕ್ತ ವಿವಿಯನ್ನು ದೂರ ಶಿಕ್ಷಣ ನೀಡುವ ಏಕಮಾತ್ರ ವಿವಿ ಎಂಬ ಗೌರವ ನೀಡಿ ಬೆಳ್ಳಿ ಮಹೋ ತ್ಸವದ ಹೊಸ್ತಿನಲ್ಲಿದ್ದ ವಿಶ್ವವಿದ್ಯಾಲಯಕ್ಕೆ ಉಡುಗೊರೆ ಯಂತೆ ನೀಡಿದೆ.
Related Articles
Advertisement
ಬಿ.ಇಡ್ ಪ್ರವೇಶಾತಿ: ಹೆಚ್ಚಿನ ಸಂಖ್ಯೆ ಬಿ.ಇಡಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ಅನುಕೂಲವಾಗುಂತೆ ಪ್ರವೇಶಾತಿ ಸಂಖ್ಯೆಯನ್ನು 500ರಿಂದ 2 ಸಾವಿರಕ್ಕೆ ಹೆಚ್ಚಿಸಲು ಎನ್‌ಸಿಟಿಇ ಅವರಿಗೆ ಪತ್ರ ಬರೆಯಲಾಗಿದೆ. ಕರಾಮುವಿಯಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ 20 ವಿದ್ಯಾರ್ಥಿಗಳು ಕೆಪಿಎಸ್‌ಸಿ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ. ಅವರನ್ನು ಸನ್ಮಾನಿಸಲಾಗುವುದು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಶಿಕ್ಷಕರ ಪದನ್ನೋತಿಯನ್ನು ಯುಜಿಸಿ ನಿಯಮಾನುಸಾರ ಜಾರಿ ಮಾಡಲಾಗಿದೆ.
ಸರ್ಕಾರಿ ಶಾಲೆ ದತ್ತು: ಕರ್ನಾಟಕ ರಾಜ್ಯ ಮುಕ್ತ ವಿವಿ ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸಲು 10 ಕೋಟಿ ರೂ. ಮೀಸಲಿಟ್ಟಿದೆ.ಕೆಲವು ಶಾಲೆಗಳನ್ನು ದತ್ತು ಪಡೆದಿದ್ದು, ಕಟ್ಟಡ ನಿರ್ಮಾಣ, ಪರಿಕರ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನು ವಿವಿಯಿಂದಲೇಕಲ್ಪಿಸಲಾಗುವುದು ಎಂದರು.
ಯುಜಿಸಿ 2018-19ರಿಂದ2023ರವರೆಗೆಮಾನ್ಯತೆ ನೀಡಿದ್ದು, ಮುಂದಿನ ಅವಧಿಯ ಮಾನ್ಯತೆ ನವೀಕರಣಕ್ಕೆ ನ್ಯಾಕ್ ಮಾನ್ಯತೆ ಅತ್ಯವಶ್ಯಕತೆಯಾಗಿದ್ದು, ಈ ಸಂಬಂಧ ಅಗತ್ಯಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಕ್ರೋಡೀಕೃತ ಅಂಕಿಅಂಶ ಶೇಖರಿಸಲು ಡಾಟಾ ಸೆಂಟರ್ ಸ್ಥಾಪಿಸುವ ಕಾರ್ಯ ನಡೆಯುತ್ತಿದ್ದೆ. ಸರ್ಕಾರದ ನಿರ್ದೇಶನದಂತೆ ಸಂಪೂರ್ಣಇಆಫೀಸ್ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವೇಳೆ ವಿವಿಯಿಂದ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್. ರಾಜಣ್ಣ, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಪರೀಕ್ಷಾಂಕ ನಿಯಂತ್ರಕ ಡಾ.ಅಶೋಕ, ಡಾ.ಷಣ್ಮುಖ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಜೈನಳ್ಳಿ ಸತ್ಯನಾರಾಯಣಗೌಡ ಇದ್ದರು.