Advertisement
ಇದು ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಎ.ಹೇಮಂತ್‌ಕುಮಾರ್ ಗೌಡ ಅವರ ನುಡಿಗಳು. ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯ ಯೋಜನೆಗಳ ಬಗ್ಗೆ ಉದಯವಾಣಿಗೆ ಸಂದರ್ಶನ ನೀಡಿದ ಅವರು, ಪ್ರಾಧಿಕಾರಕ್ಕೆ ಹೊಸ ಆಯಾಮ ನೀಡುವ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
Related Articles
Advertisement
ನಾನು ಪ್ರವಾಸಿ ಪ್ರಿಯ, ಅದರಂತೆ ಅಭಿರುಚಿಗೆ ತಕ್ಕಂತೆ ಈ ಅಧಿಕಾರ ಸಿಕ್ಕಿದೆ. ಈಗಾಗಲೇ20ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸಮಾಡಿ,ಆದೇಶಗಳಲ್ಲಿರುವವಸ್ತುಪ್ರದರ್ಶನವನ್ನು ಗಮನಿಸಿದ್ದೇನೆ. ಅಲ್ಲಿಯಂತೆಯೇ ಮೈಸೂರಿನಲ್ಲೂ ವಸ್ತುಪ್ರದರ್ಶನವನ್ನು ಮೇಲ್ದರ್ಜೆಗೇರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ನನ್ನ ಗುರಿ. ಹಾಂಕಾಂಗ್ ನಲ್ಲಿರುವಂತೆ ಇಲ್ಲಿಯೂ ಬೆಳಗ್ಗೆ ವಸ್ತು ಪ್ರದರ್ಶನಕ್ಕೆಕಾಲಿಟ್ಟವರು ಸಂಜೆವರೆಗೂಸುತ್ತಾಡುವಂತೆಮಾಡುವುದು ನನ್ನ ಕನಸು.ಇದಕ್ಕೆಸ್ಥಳೀಯ ಶಾಸಕರು,ಜನಪ್ರತಿನಿಧಿಗಳು, ಅಧಿಕಾರಿಗಳು ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ.
ರಾಜ್ಯದ ಇತರೆ ವಸ್ತು ಪ್ರದರ್ಶನಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೀರ?
ಸದ್ಯಕ್ಕೆ ನಮ್ಮ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಸ್ತು ಪ್ರದರ್ಶನಗಳಿವೆ. ಅವುಗಳಲ್ಲಿ ಮೈಸೂರು ವಸ್ತು ಪ್ರದರ್ಶನ ಪ್ರಮುಖವಾದದ್ದು. ನಂತರ ಮಂಗಳೂರು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿರುವುದು ಸ್ವಲ್ಪ ದೊಡ್ಡದಿವೆ.ಇವುಗಳ ವಿಸ್ತರಣೆಗೆ ಮತ್ತು ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ.
ಆರ್ಥಿಕ ಸುಧಾರಣೆಗೆಕಾರ್ಯಕ್ರಮಗಳೇನು:
ಪ್ರತಿ ವರ್ಷ ದಸರಾದಲ್ಲಿ 3 ತಿಂಗಳು ವಸ್ತು ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ12ರಿಂದ 13 ಲಕ್ಷ ಜನರು ಭೇಟಿನೀಡುತ್ತಿದ್ದರು. ವರ್ಷಕ್ಕೆ 8ರಿಂದ10ಕೋಟಿ ಆದಾಯವೂ ಬರುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಈಬಾರಿ ವಸ್ತುಪ್ರದರ್ಶನ ಆಯೋಜಿಸಿಲ್ಲ. ಮುಂದಿನ ವರ್ಷ ಮೈಸೂರು ಹಬ್ಬ ನಡೆದರೆ, ವಸ್ತು ಪ್ರದರ್ಶನ ಆರಂಭಿಸುವ ಚಿಂತನೆ ಇದೆ. ಜಿಲ್ಲಾ ಮಂತ್ರಿ, ಸಂಸದರು, ಶಾಸಕರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು.
ಅರಮನೆ,ಬೆಟ್ಟದ ರೀತಿ ಇಲ್ಲಿಗೂಬರುವಂತೆ ಮಾಡಬೇಕಿದೆ :
ಪ್ರವಾಸಿಗರನ್ನು ಆಕರ್ಷಿಸಲುಕಾರ್ಯಯೋಜನೆ ರೂಪಿಸಿದ್ದೀರಾ?
ಮೈಸೂರಿಗೆ ಬರುವ ಪ್ರವಾಸಿಗರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂಬ ಭಾವನೆ ಹೇಗೆ ಮೂಡುತ್ತದೆಯೋ ಹಾಗೆ ವಸ್ತು ಪ್ರದರ್ಶನಕ್ಕೂ ಭೇಟಿ ನೀಡಬೇಕು ಎಂದು ಹೇಳುವಂತಾಗಬೇಕು. ಅದಕ್ಕಾಗಿ ವರ್ಷವಿಡೀ ಇಲ್ಲಿ ಕರಕುಶಲ ಮೇಳ, ವಸ್ತು ಪ್ರದರ್ಶನ ಸೇರಿದಂತೆ ಮಕ್ಕಳ ಮನರಂಜನೆ ಸಂಬಂಧಿತ ಕಾರ್ಯಕ್ರಮಗಳು ನಡೆಯುವಂತೆ ಯೋಜನೆ ರೂಪಿಸಲಾಗುವುದು. ವಸ್ತು ಪ್ರದರ್ಶನಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮಗ್ರ ನೀಲನಕ್ಷೆ ರೂಪಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸುವುದಲ್ಲದೇ, ಇಲ್ಲಿರುವ ಸಮಸ್ಯೆಗಳಿಗೆ ಶಾಶ್ವತಪರಿಹಾರಕಂಡುಕೊಳ್ಳಲುಮೊದಲ ಆದ್ಯತೆ ನೀಡುತ್ತೇನೆ.ಜೊತೆಗೆ ಸ್ವತ್ಛತೆ, ಹಸರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್‌ಕುಮಾರ್ ಗೌಡ ತಿಳಿಸಿದ್ದಾರೆ.