Advertisement

ಬೆಂಗಳೂರು: ದೌರ್ಜನ್ಯಕ್ಕೊಳಗಾದ ಸಾವಿರಾರು ಮಂದಿ ಅಮಾಯಕರಿಗೆ ನ್ಯಾಯ ಕೊಡಿಸುತ್ತಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗ ಕೆಲ ದಿನಗಳಲ್ಲೇ ಖಾಲಿ ಆಗಲಿದೆ!

Advertisement

ಹೌದು, ಮುಂದಿನ ವಿಧಾನಸಭೆ ಚುನಾವಣೆ ಕಾರ್ಯದಲ್ಲಿ ತಲ್ಲಿನವಾಗಿರುವ ರಾಜ್ಯ ಸರ್ಕಾರ ಈಗಾಗಲೇ ಆಯೋಗದಲ್ಲಿ ಖಾಲಿ ಆಗಿರುವ ಹಾಗೂ ಕೆಲವೇ ದಿನಗಳಲ್ಲಿ ಅವಧಿ ಪೂರೈಸಲಿರುವ ಸದಸ್ಯರು ಹಾಗೂ ಅಧ್ಯಕ್ಷರ ನೇಮಕಪ್ರಕ್ರಿಯೆಗೆ ಇದುವರೆಗೂ ಯಾವುದೇ ಚಾಲನೆ ನೀಡಿಲ್ಲ. ಹೀಗಾಗಿ ಕೆಲವು ದಿನಗಳಲ್ಲಿ ಸದಸ್ಯರು ಹಾಗೂ ಅಧ್ಯಕ್ಷರ ನೇಮಕಕ್ಕೆ ಪ್ರಕ್ರಿಯೆ ಆರಂಭಿಸದೇ ಇದ್ದಲ್ಲಿ ಚುನಾವಣೆ ಮುಗಿಯುವ ತನಕ ಆಯೋಗ ಸಂಪೂರ್ಣ ಖಾಲಿ ಉಳಿಯಲಿದೆ.

ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಅಧ್ಯಕ್ಷರು ಸೇರಿ ಮೂವರು ಸದಸ್ಯರಿದ್ದರು. ಈಪೈಕಿ ಫೆ.17ರಂದು ನಿವೃತ್ತ ನ್ಯಾಯಮೂರ್ತಿ ಕೆ.ಬಿ. ಚಂಗಪ್ಪ ನಿವೃತ್ತಿಯಾಗಿದ್ದಾರೆ. ಫೆ.24ರಂದು ನಿವೃತ್ತಐಪಿಎಸ್‌ ಅಧಿಕಾರಿ ಆರ್‌.ಕೆ.ದತ್ತಾ ಕೂಡ ನಿವೃತ್ತಿ ಹೊಂದಿದ್ದಾರೆ. ಅನಂತರ ಮಾ.10ರಂದುಆಯೋಗ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿಡಿ.ಎಚ್‌.ವಘೇಲಾ ಕೂಡ ನಿವೃತ್ತಿಯಾಗಲಿದ್ದಾರೆ.ಆ ಬಳಿಕ ಇಡೀ ಆಯೋಗ ನಾಮಾಕಾವಸ್ತೆಯಾಗಲಿದೆ.

ಮಾನವ ಹಕ್ಕುಗಳ ಕಾಯ್ದೆ ಪ್ರಕಾರಆಯೋಗದ ಮುಖ್ಯಸ್ಥರು ಸೇರಿಐವರು ಸದಸ್ಯರನ್ನು ನೇಮಿಸ ಬೇಕು.ಅಧ್ಯಕ್ಷರಾಗಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳುಅಥವಾ ಸುಪ್ರೀಂ ಕೋರ್ಟ್‌ನನ್ಯಾಯಮೂರ್ತಿಗಳು, ಸದಸ್ಯರಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳು, ಕೆಳ ಹಂತದನ್ಯಾಯಾಧೀಶರು ಮತ್ತು ಇತರೆ ಇಬ್ಬರು ಸದಸ್ಯರು ಮಾನವ ಹಕ್ಕುಗಳ ಆಯ್ಕೆ ಬಗ್ಗೆ ಹೆಚ್ಚಿನ ಜ್ಞಾನವುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಈ ಸದಸ್ಯರ ಅಧಿಕಾರಾವಧಿ ಮೂರರಿಂದ 5 ವರ್ಷಗಳು.

ಇನ್ನು ಈ ಸದಸ್ಯರ ಕೆಳಗೆ ಒಬ್ಬರು ಎಡಿಜಿಪಿ ಅಥವಾ ಐಜಿಪಿ, ಡಿವೈಎಸ್ಪಿಗಳು, ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಕಳೆದ ಕೆಲ ವರ್ಷಗಳಿಂದ ಅಧ್ಯಕ್ಷರು ಸೇರಿ ಮೂವರು ಸದಸ್ಯರನ್ನು ಮಾತ್ರ ನೇಮಿಸುತ್ತಿದೆ. ಇಬ್ಬರುನ್ಯಾಯಮೂರ್ತಿಗಳು, ಒಬ್ಬರು ನಿವೃತ್ತ ಪೊಲೀಸ್‌ ಅಧಿಕಾರಿಗಳನ್ನು ನೇಮಿಸುತ್ತಿದೆ. ಬಾಕಿ ಇಬ್ಬರು ಸದಸ್ಯರ ನೇಮಕವೇ ಆಗಿಲ್ಲ.

Advertisement

ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ!: ಆಯೋಗದ ಸದಸ್ಯರ ಆಯ್ಕೆ ಸಮಿತಿಯಲ್ಲಿ ಮುಖ್ಯಮಂತ್ರಿ,ವಿಧಾನಸಭೆ ಸ್ಪೀಕರ್‌, ಪರಿಷತ್‌ ಸಭಾಪತಿ, ಪ್ರತಿ  ಪಕ್ಷದ ನಾಯಕರು ಹಾಗೂ ಗೃಹ ಸಚಿವರು ಇರುತ್ತಾರೆ. ಈ ಸಮಿತಿ ನಿಯಮದ ಪ್ರಕಾರ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರ ನಿವೃತ್ತಿಯ 2ರಿಂದ 3 ತಿಂಗಳು ಮೊದಲೇ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು. ಸಮಿತಿ ಆಯ್ಕೆ ಮಾಡಿದ ವ್ಯಕ್ತಿಯ ಬಗ್ಗೆ ಸಂಪುಟದ ಒಪ್ಪಿಗೆ ಪಡೆಯಬೇಕು. ನಂತರ ರಾಜ್ಯಪಾಲರುಅಂಗೀಕರಿಸಬೇಕು. ಆದರೆ, ಚುನಾವಣೆಒತ್ತಡದಲ್ಲಿರುವ ಸರ್ಕಾರ ಮತ್ತು ಪ್ರತಿಪಕ್ಷಗಳ ಈ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ.

ತನಿಖೆಯೇ ಸಾಧ್ಯವಿಲ್ಲ: ಮತ್ತೂಂದೆಡೆ ಸದಸ್ಯರ ಸೂಚನೆ ಹೊರತು ಪಡಿಸಿ ಪೊಲೀಸ್‌ ಅಧಿಕಾರಿಗಳು ನೇರವಾಗಿ ಆಯೋಗಕ್ಕೆ ಬರುವದೂರುಗಳ ತನಿಖೆ ನಡೆಸುವಂತಿಲ್ಲ. ಅಲ್ಲದೆ, ದೂರುಗಳನ್ನು ಸ್ವೀಕರಿಸು ವಂತಿಲ್ಲ. ಒಂದು ವೇಳೆ ಸಾರ್ವಜನಿಕ ಹಿತದೃಷ್ಟಿಯಿಂದ ಸ್ವೀಕರಿಸಿದರೂತನಿಖೆ ನಡೆಸುವಂತಿಲ್ಲ. ಹೀಗಾಗಿ ಮಾ.10ರನಂತರ ಮಾನವ ಹಕ್ಕುಗಳ ಆಯೋಗ ತನ್ನ ಕೆಲಸ ಸ್ಥಗಿತಗೊಳಿಸಲಿದೆ.

15 ಸಾವಿರ ದೂರುಗಳು :  ಅಕ್ರಮ ಬಂಧನ, ಬಾಲಕಾರ್ಮಿಕರು, ಅಪಹರಣ, ಲಾಕಪ್‌ಡೆತ್‌, ದೌರ್ಜನ್ಯ ಸೇರಿ ವಿವಿಧ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ಸೇರಿ 2022ನೇ ಸಾಲಿನಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ 15 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಇದರಲ್ಲಿ 10 ಸಾವಿರ ಕೇಸ್‌ಗಳು ಇತ್ಯರ್ಥವಾಗಿವೆ. 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಮಧ್ಯೆ 2023ರ ಫೆಬ್ರವರಿ 2ನೇ ವಾರದವರೆಗೇ ಕನಿಷ್ಠ 2 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಮತ್ತೂಂದಡೆ ಚುನಾವಣೆ ವೇಳೆ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಹೆಚ್ಚಾಗಲಿವೆ. ಈ ಸಂದರ್ಭದಲ್ಲಿ ಆಯೋಗ ಖಾಲಿ ಆಗಲಿದೆಯಾ ಎಂಬ ಆತಂಕ ಎದುರಾಗಿದೆ.

ಆಯೋಗದ ಸದಸ್ಯರು ನಿವೃತ್ತಿಯಾಗುತ್ತಿದ್ದರೂ ಸರ್ಕಾರ ಬೇರೊಬ್ಬ ಸದಸ್ಯರ ಆಯ್ಕೆಗೆ ಮುಂದಾಗಿಲ್ಲ. ಜತೆಗೆ ನಿಯಮದ ಪ್ರಕಾರ ಐವರುಸದಸ್ಯರ ನೇಮಿಸಬೇಕು. ಇದುವರೆಗೂ ಅದು ಆಗಿಲ್ಲ. ಈ ಬಾರಿಯಾದರೂ, ನ್ಯಾಯಮೂರ್ತಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳ ಜತೆಗೆ ಮಾನವ ಹಕ್ಕುಗಳ ಬಗ್ಗೆ ಹೆಚ್ಚು ಜ್ಞಾನವುಳ್ಳವರನ್ನು ಆಯ್ಕೆ ಮಾಡಬೇಕು. ಎಸ್‌. ಉಮಾಪತಿ, ವಕೀಲ

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next