ಬೆಂಗಳೂರು: 2018ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಕ್ರವಾರ ವಿಧಾನಸೌಧದಲ್ಲಿ ಘೋಷಿಸಿದ್ದಾರೆ. ಅತ್ಯುತ್ತಮ ನಟ, ನಟಿ, ಅತ್ಯುತ್ತಮ ಚಿತ್ರದ ವಿವರ ಇಲ್ಲಿದೆ…
ಜಿ.ಕೆ. ಶ್ರೀನಿವಾಸ್ ಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ.ಎಸ್. ಬಸವರಾಜು ಡಾ.ವಿಷ್ಣುವರ್ಧನ್ ಪ್ರಶಸ್ತಿ.
ಅತ್ಯುತ್ತಮ ನಟ:ರಾಘವೇಂದ್ರ ರಾಜ್ ಕುಮಾರ್, ಅತ್ಯುತ್ತಮ ನಟಿ ಮೇಘನಾ ರಾಜ್, ಅತ್ಯುತ್ತಮ ಪೋಷಕ ನಟ ಬಾಲಾಜಿ ಮನೋಹರ್, ಅತ್ಯುತ್ತಮ ಪೋಷಕ ನಟಿ ವೀಣಾ ಸುಂದರ್. ಅತ್ಯುತ್ತಮ ಬಾಲನಟ ಮಾಸ್ಟರ್ ಆರೆನ್,
ಮೊದಲ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ,
ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ,
ಮೂರನೇ ಅತ್ಯುತ್ತಮ ಚಿತ್ರ ಒಂದಲ್ಲಾ ಎರಡಲ್ಲಾ, ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಸಂತಕವಿ ಕನಕದಾಸರ ರಾಮಧಾನ್ಯ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅತ್ಯುತ್ತಮ ಮಕ್ಕಳ ಚಿತ್ರ ಹೂವು ಬಳ್ಳಿ, ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಬೆಳಕಿನ ಕನ್ನಡಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ದೇಯಿ ಬೈದೇತಿ.
ಅತ್ಯುತ್ತಮ ಕಥೆ ಹರೀಶ್ ಎಸ್, ಅತ್ಯುತ್ತಮ ಚಿತ್ರಕಥೆ ಪಿ.ಶೇಷಾದ್ರಿ, ಅತ್ಯುತ್ತಮ ಸಂಭಾಷಣೆ ಶಿರಿಷಾ ಜೋಶಿ, ಅತ್ಯುತ್ತಮ ಸಂಗೀತ ನಿರ್ದೇಶನ ರವಿ ಬಸ್ರೂರು, ಅತ್ಯುತ್ತಮ ಗೀತರಚನೆ ಡಾ.ಬರಗೂರು ರಾಮಚಂದ್ರಪ್ಪ.