Advertisement

ಕೆಎಸ್‌ಇಟಿಗೆ ಅರ್ಜಿ ಆಹ್ವಾನ, ಡಿ.16ಕ್ಕೆ ಪರೀಕ್ಷೆ

06:50 AM Aug 23, 2018 | Team Udayavani |

ಬೆಂಗಳೂರು: 2018ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್‌ಇಟಿ)ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆ.23ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ರಾಜ್ಯದ ವಿವಿಧೆಡೆ 11 ಪರೀಕ್ಷಾ ಹಾಗೂ ನೋಡಲ್‌ ಕೇಂದ್ರಗಳನ್ನು ರಚಿಸಿದ್ದು, ಡಿಸೆಂಬರ್‌ 16ರಂದು ಪರೀಕ್ಷೆ ನಡೆಯಲಿದೆ.

Advertisement

ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿಯನ್ನು ಬದಲಿಸಲಾಗಿದೆ. ಮೂರು ಪತ್ರಿಕೆಗಳ ಬದಲಾಗಿ ಎರಡು ಪತ್ರಿಕೆಗಳಿಗೆ ಸೀಮಿತಗೊಳಿಸಲಾಗಿದೆ. ಬೋಧನೆ ಹಾಗೂ ಬುದ್ದಿ ಸಾಮರ್ಥ್ಯಕ್ಕೆ ಸಂಬಂಧಿಸಿದ ಕಡ್ಡಾಯ 50 ಪ್ರಶ್ನೆಗಳನ್ನು ಒಳಗೊಂಡ 100 ಅಂಕಗಳ ಮೊದಲ ಪತ್ರಿಕೆ ಹಾಗೂ ಅಭ್ಯರ್ಥಿಯ ವಿಷಯಕ್ಕೆ ಸಂಬಂಧಿಸಿದ 100 ಪ್ರಶ್ನೆಗಳನ್ನು ಒಳಗೊಂಡ 200 ಅಂಕದ ಮತ್ತೂಂದು ಪತ್ರಿಕೆ ಇರಲಿದೆ.

kset.uni-mysore.ac.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಯಾದ ಎರಡು ದಿನಗಳ ನಂತರ ಅರ್ಜಿ ಪ್ರತಿ, ಹಾಜರಾತಿ ಪತ್ರ, ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು, ಶುಲ್ಕ ಪಾವತಿ ರಶೀದಿ ಹಾಗೂ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸೂಚಿಸಿರುವ ನೋಡಲ್‌ ಕೇಂದ್ರಗಳಿಗೆ ಮುದ್ರಿತ ಅರ್ಜಿಯ ಪ್ರತಿಯನ್ನು ಸಲ್ಲಿಸಬೇಕು. ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.22, ಮುದ್ರಿತ ಅರ್ಜಿಯ ಪ್ರತಿಯನ್ನು ನೋಡಲ್‌ ಕೇಂದ್ರಗಳಿಗೆ ಸಲ್ಲಿಸಲು ಅ.6 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-2419202, 439, 426 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next