ಬೆಂಗಳೂರು:2019-20ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಮಂಡಿಸಿದ್ದ ಅಯವ್ಯಯದಲ್ಲಿ ತಿಳಿಸಿದ್ದಾರೆ.
ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೋಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಅಲ್ಲದೇ 2019-20ನೇ ಆರ್ಥಿಕ ವರ್ಷಕ್ಕೆ 20,950 ಕೋಟಿ ರೂಪಾಯಿ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ.
ವಾಣಿಜ್ಯ ತೆರಿಗೆ;
ಸರಕು ಮತ್ತು ಸೇವಾ ತೆರಿಗೆಯಡಿ ರಾಜಸ್ವ ಅಂತರ ಸರಿದೂಗದಿದ್ದರೆ, ರಾಜ್ಯಗಳಿಗೆ ಪರಿಹಾರ ಕಾಯ್ದೆಯಲ್ಲಿ ನಿಗದಿಪಡಿಸಿದಂತೆ, ಸಾಕಷ್ಟು ಪರಿಹಾರವನ್ನು 2025ನೇ ಸಾಲಿನವರೆಗೂ ನೀಡಲು ಕೇಂದ್ರಕ್ಕೆ ಒತ್ತಾಯ. ವಾಣಿಜ್ಯ ತೆರಿಗೆ ಇಲಾಖೆಗೆ 76046 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿದೆ. ಜಿಎಸ್ ಟಿ ಜಾರಿಗೆ ಹಿಂದಿನ ತೆದಿಗೆ ಬಾಕಿ ಕಡಿತಗೊಳಿಸಲು ಸಮಗ್ರ ಕರ ಸಮಾಧಾನ ಯೋಜನೆ ಜಾರಿ.
ನೋಂದಣಿ ಮತ್ತು ಮುದ್ರಾಂಕ:
2019-20ನೇ ಸಾಲಿಗೆ 11,828 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿ.