Advertisement

ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತಸಾಗರ; ವಿದ್ಯಾರ್ಥಿಗಳ ರೋಧನ

11:19 AM Jan 21, 2019 | Sharanya Alva |

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹ ಕಾಯಕಕ್ಕೆ ಮೀಸಲಾಗಿದ್ದ ಕಾಯಕ ಯೋಗಿ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ (111 ವರ್ಷ) ಸೋಮವಾರ ಲಿಂಗೈಕ್ಯರಾಗಿದ್ದರು. ಇದೀಗ ಸಂಜೆ ಸಿದ್ದಗಂಗಾಮಠದ ವಜ್ರಮಹೋತ್ಸವ ಭವನ ಸಮೀಪದ ಮ್ಯೂಸಿಯಮ್ ಗ್ರೌಂಡ್ ನಲ್ಲಿ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

ಮ್ಯೂಸಿಯಮ್ ಗ್ರೌಂಡ್ ನಲ್ಲಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಹವಾನಿಯಂತ್ರಿತ ಪಾರದರ್ಶಕ ಗಾಜಿನ ಮಂಟಪದಲ್ಲಿ ಸಿದ್ದಗಂಗಾಶ್ರೀಗಳ ಲಿಂಗಶರೀರವನ್ನು ಇಡಲಾಗಿದೆ. ವೇದಿಕೆ ಸುತ್ತಮುತ್ತ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ನಾಳೆ ಮಧ್ಯಾಹ್ನ 3ಗಂಟೆವರೆಗೆ ಸಾರ್ವಜನಿಕರಿಗೆ, ಭಕ್ತರಿಗೆ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಸರ್ಕಾರ ತುಮಕೂರು ಸುತ್ತಮುತ್ತ ಜನರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದೆ.

ಕಣ್ಣೀರಿಡುತ್ತಿರುವ ಮಠದ ಭಕ್ತರು, ವಿದ್ಯಾರ್ಥಿಗಳು:

Advertisement

ಶ್ರೀಗಳ ಅಂತಿಮ ದರ್ಶನ ಹಾಗೂ ಅಂತಿಮ ವಿಧಿವಿಧಾನ ವೀಕ್ಷಿಸಲು  ಎಲ್ ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಂದೆಡೆ ಮಠದ ಭಕ್ತರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಣ್ಣೀರುಗರೆಯುತ್ತಿದ್ದಾರೆ. ಹೊಸ ಮಠದಲ್ಲಿ ಹಳೇ ವಿದ್ಯಾರ್ಥಿಗಳು ಭಜನೆ ನಡೆಸುತ್ತಿದ್ದಾರೆ.

ಶ್ರೀಗಳ ಅಂತಿಮ ದರ್ಶನ ಪಡೆದ ಗಣ್ಯರು:

ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯಪಾಲ ವಜೂಬಾಯ್ ವಾಲಾ, ಡಿಸಿಎಂ ಪರಮೇಶ್ವರ್, ಸೋಮಣ್ಣ, ಆರ್.ಅಶೋಕ್ ಸೇರಿದಂತೆ ನೂರಾರು ಗಣ್ಯರು ಲಿಂಗೈಕ್ಯರಾದ ಡಾ.ಶಿವಕುಮಾರಸ್ವಾಮಿಗಳ ಲಿಂಗಶರೀರದ ಅಂತಿಮ ದರ್ಶನವನ್ನು ಪಡೆದರು.

ಹತ್ತು ದಿನಗಳ ಕಾಲ ಅನ್ನ ದಾಸೋಹ:

ಶ್ರೀಗಳ ಇಚ್ಛೆಯಂತೆ ಇಂದಿನಿಂದ ಹತ್ತು ದಿನಗಳ ಕಾಲ ಸಿದ್ದಗಂಗಾಮಠದಲ್ಲಿ ಅನ್ನದಾಸೋಹ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

ವಿಡಿಯೋ:ಫಕ್ರುದ್ದೀನ್

Advertisement

Udayavani is now on Telegram. Click here to join our channel and stay updated with the latest news.

Next