Advertisement
ಸದ್ಯ ಒಟ್ಟಾರೆ ಕೊರೊನಾ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಕೇರಳ ನಂತರ ಮೂರನೇ ಸ್ಥಾನದಲ್ಲಿದೆ. ಆದರೆ, ಮಂಗಳವಾರ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿಯೇ 2975 ಪ್ರಕರಣಗಳು, 21 ಸಾವು ವರದಿಯಾಗಿದೆ. ಕೇರಳದಲ್ಲಿ 2,389 ಪ್ರಕರಣಗಳು, 16 ಸಾವಾಗಿದೆ. ಅಲ್ಲದೆ, ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಸೋಮವಾರದ ವರೆಗೂ ಕೇರಳ ಎರಡನೇ ಸ್ಥಾನದಲ್ಲಿತ್ತು. ಆದರೆ ಮಂಗಳವಾರ ಕರ್ನಾಟಕದಲ್ಲಿ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆ ಸಕ್ರಿಯ ಪ್ರಕರಣಗಳು 25 ಸಾವಿರಕ್ಕೇರಿಕೆಯಾಗಿವೆ. ಈ ಮೂಲಕ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಸೋಂಕಿತರು ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಹಾದಿಯಲ್ಲಿಯೇ ಸಾಗುತ್ತಿದ್ದು, ಮಂಗಳವಾರ 21 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿರುವುದು ವರದಿಯಾಗಿದೆ. ಇದನ್ನೂ ಓದಿ :ಭಾರತ-ಚೀನಾ ಗಡಿಯಿಂದೀಚೆ ಒಂದಿಂಚೂ ಜಾಗ ಕಳೆದುಕೊಂಡಿಲ್ಲ : ಸೇನಾ ಮುಖ್ಯಸ್ಥರ ಸ್ಪಷ್ಟನೆ
Related Articles
Advertisement
ಅತಿ ಹೆಚ್ಚು ಪ್ರಕರಣಗಳು ಬೆಂಗಳೂರು 1984, ಬೀದರ್ 102, ಕಲಬುರಗಿ 156, ಮೈಸೂರು 111, ಹಾಸನ 57, ಬೆಂಗಳೂರು ಗ್ರಾಮಾಂತರ 66 ಉಡುಪಿ 53 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು 11, ಮೈಸೂರು 3, ಬೆಂಗಳೂರು ಗ್ರಾಮಾಂತರ 2, ಬೀದರ್, ಚಿಕ್ಕಮಗಳೂರು, ಹಾಸನ, ಕಲಬುರಗಿಯಲ್ಲಿ ತಲಾ ಒಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ.
ಸದ್ಯ ರಾಜ್ಯದ ಒಟ್ಟಾರೆ ಕೊರೊನಾ ಪ್ರಕರಣಗಳು 9.92 ಲಕ್ಷಕ್ಕೆ ಹೆಚ್ಚಳವಾಗಿದ್ದು, ಈಗಾಗಲೇ 9.55 ಲಕ್ಷ ಜನ ಗುಣಮುಖರಾಗಿದ್ದಾರೆ. ಒಟ್ಟಾರೆ ಸಾವು 12541 ಕ್ಕೆ ತಲಮಂಗಳವಾರ 25,541 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಆರೈಕೆಯಲ್ಲಿದ್ದಾರೆ. ಮಂಗಳವಾರ 1.06 ಲಕ್ಷ ಸೋಂಕು ಪರೀಕ್ಷೆಗಳಾಗಿದ್ದು, ಪರೀಕ್ಷೆಗೊಳಪಟ್ಟ 100 ಮಂದಿಯಲ್ಲಿ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.