ದುಬೈ ಡ್ಯಾನ್ಸ್ ಕಪ್ 2024ರ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಡಾ| ಸಂಜಯ್ ಶಾಂತಾರಾಮ್, ಶಿಲ್ಪಾ ನಾಯರ್, ಯತೀಶ್ ಅಮೀನ್ ಮತ್ತು ದೇವಾಂಶಿ ನೃತ್ಯ, ಡ್ರಾಯಿಂಗ್ ಮತ್ತು ರಂಗೋಲಿ ತೀರ್ಪುಗಾರರಾಗಿ ಗಣೇಶ್ ರೈ, ಸುಸ್ಮಿತಾ ಧ್ರುವ , ಏಕವ್ಯಕ್ತಿ ನಟನೆಗೆ ವಿಶ್ವನಾಥ ಶೆಟ್ಟಿ, ಪಿಂಕಿ ರಾಣಿ, ಕಾರ್ಯಕ್ರಮದ ಟ್ರೇಡ್‌ಮಾರ್ಕ್ ಎಂದು ಬಿಂಬಿಸಲಾದ ವಿಶೇಷವಾದ ಲಿಮೋಸಿನ್ನಲ್ಲಿ ಪ್ರಭಾವಶಾಲಿ ತೀರ್ಪುಗಾರರನ್ನು ಸ್ಥಳಕ್ಕೆ ಕರೆತರಲಾಯಿತು.
Advertisement
ದುಬೈ ಡ್ಯಾನ್ಸ್ ಕಪ್‌ನ್ನು ಖ್ಯಾತ ತೀರ್ಪುಗಾರ ಡಾ| ಸಂಜಯ್ ಶಾಂತಾರಾಮ್ ಮತ್ತು ಅವರ ಶಿಷ್ಯ ಕೌಶಿಕ್ ಗಂಗಾಧರ್ ಉದ್ಘಾಟಿಸಿದರು, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕೋಶಾಧಿಕಾರಿ ನಾಗರಾಜ್ ರಾವ್, ಪೋಷಕ ರೊನಾಲ್ಡ್ ಮಾರ್ಟಿಸ್, ಸಲಹೆಗಾರ ಜಯಂತ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಒಟ್ಟು ಏಳು ತೀರ್ಪುಗಾರರು ಅತ್ಯುತ್ತಮ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥಾಪಕ ಸದಸ್ಯ ಸುಧಾಕರ ರಾವ್ ಪೇಜಾವರ ಅವರು ಕರ್ನಾಟಕ ಸಂಘ ದುಬೈಯ ಸಂಸ್ಥಾಪನ ದಿನಗಳು ಮತ್ತು 39 ವರ್ಷಗಳ ಸಂಘ ಪರಂಪರೆಯ ಸಂಕ್ಷಿಪ್ತ ಪರಿಚಯವನ್ನು ನೀಡಿದರು.
Related Articles
Advertisement
ಈವೆಂಟ್ ಅನ್ನು ಅದರ ಶೀರ್ಷಿಕೆ ಪ್ರಾಯೋಜಕರು, ಬೆಂಗಳೂರಿನಲ್ಲಿರುವ ರಿಯಲ್ ಎಸ್ಟೇಟ್ ಡೆವಲಪರ್ ದಿ ಫ್ಯೂಚರ್ ಅರ್ಥ್ ಗ್ರೂಪ್ ಉತ್ತಮವಾಗಿ ಬೆಂಬಲಿಸಿದರು, ಮೋನಿಕಾ ಮಂದಣ್ಣ ಇನ್ನೋವರ್ ಪ್ಲಾಟಿನಂ ಪ್ರಾಯೋಜಕರಾದ ಪುರವಂಕರ ಅವರನ್ನು ಪ್ರತಿನಿಧಿಸಿದ್ದು ವಿಪಿ ಪವನ್ ಕುಮಾರ್ ಮತ್ತು ಅವರ ಸಲಹೆಗಾರರಾದ ನಾಗೇಶ್ ಉಡುಪಿ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಎಲ್ಲ ಪ್ರಾಯೋಜಕರುಗಳನ್ನು ಹಾಗೂ ಯುಎಇಯಲ್ಲಿರುವ ಎಲ್ಲ ಕರ್ನಾಟಕ ಪರ ಸಂಘಟನೆಗಳ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಕರ್ನಾಟಕ ಸಂಘ ದುಬೈಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಧಿಕಾ ಸತೀಶ್, ಹರೀಶ್ ಕೋಡಿ, ಸಿದ್ದಲಿಂಗೇಶ್ ಬಿ. ಆರ್., ಯುವರಾಜ್ ದೇವಾಡಿಗ, ಸುನೀಲ್ ಗವಾಸ್ಕರ್, ಲಾರೆನ್ಸ್ ನಜರೆತ್, ವಿನುತ ಕೆ.ಎಸ್., ಬೃಂದಾ ಮಂಜುನಾಥ್, ಶ್ವೇತಾ ಹಾಗೂ ಕಾರ್ಯಕಾರಿ ಸದಸ್ಯರ ತಂಡದವರು ಪೂರ್ವಭಾವಿ ತಯಾರಿಯೊಂದಿಗೆ ಗಲ್ಫ್ ಗೆಳೆಯರು ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವಲ್ಲಿ ಸಹಕರಿಸಿದರು.