Advertisement
ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ಡಾ| ದಿಲೀಪ್ ಕೋಪರ್ಡೆ ಮತ್ತು 17 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. ಆನಂತರ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಸುಕುಮಾರ್ ಎನ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾಗಿ ಡಾ| ವಿಜಯ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ದೇವದಾಸ ಎಲ್. ಕುಲಾಲ್, ಜತೆ ಕಾರ್ಯದರ್ಶಿಯಾಗಿ ಪ್ರೊ| ರಮೇಶ್ ಕಾಖಂಡಕಿ, ಗೌರವ ಕೋಶಾಧಿಕಾರಿಯಾಗಿ ಲೋಕನಾಥ ಎ. ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಚಿತ್ತರಂಜನ್ ಎಂ. ಆಳ್ವ ಅವರು ಆಯ್ಕೆಯಾದರು.
ಕರ್ನಾಟಕ ಸಂಘದ ಉಪ ಕಾರ್ಯಾಧ್ಯಕ್ಷರಾಗಿ, ನಿಕಟಪೂರ್ವ ಕಾರ್ಯಾಧ್ಯಕ್ಷರಾಗಿ, ಮಂಜುನಾಥ ವಿದ್ಯಾಲಯದ ಸಮನ್ವಯಕ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಮಂಜುನಾಥ ಕಾಲೇಜ್ ಗವರ್ನಿಂಗ್ ಬಾಡಿಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘ ಮತ್ತು ಸಂಘದ ಸಂಚಾಲಕತ್ವದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಂಟರ ಸಂಘದ ಕೇಂದ್ರ ವಲಯದ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಇವರು ಡೊಂಬಿವಲಿ ಪರಿಸರದ ಹತ್ತಾರು ಸಂಘ-ಸಂಸ್ಥೆಗಳ ನಿಕಟ ಸಂಪರ್ಕ ಹೊಂದಿದ್ದು, ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Related Articles
ಕರ್ನಾಟಕ ಸಂಘದಲ್ಲಿ ಮೂರು ವರ್ಷ ಗೌರವ ಕೋಶಾಧಿಕಾರಿಯಾಗಿ, 6 ವರ್ಷ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ಮೂರು ವರ್ಷ ಉಪ ಕಾರ್ಯಾಧ್ಯಕ್ಷರಾಗಿ, ಮಂಜುನಾಥ ಕಾಲೇಜಿನ ಗವರ್ನಿಂಗ್ ಬಾಡಿಯ ಕಾರ್ಯದರ್ಶಿಯ ಬಳಿಕ ಕಾರ್ಯಾಧ್ಯಕ್ಷರಾಗಿ, ಪ್ರಸ್ತುತ ಕರ್ನಾಟಕ ಸಂಘಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಗೆಲುವಿನ ರೂವಾರಿಯಾಗಿದ್ದಾರೆ. ಬಂಟರ ಸಂಘ ಪ್ರಾದೇಶಿಕ ಸಮಿತಿ ಡೊಂಬಿವಲಿ ಇದರ ಉಪ ಕಾರ್ಯಾಧ್ಯಕ್ಷರಾಗಿ ಕಾರ್ಯದಕ್ಷತೆ ಮೆರೆದಿದ್ದಾರೆ.
Advertisement
ಡಾ| ದಿಲೀಪ್ ಕೋಪರ್ಡೆಡೊಂಬಿವಲಿ ಪರಿಸರದಲ್ಲಿ ಖ್ಯಾತ ಎಲುಬು ತಜ್ಞ ವೈದ್ಯರಲ್ಲಿ ಓರ್ವರಾದ ಡಾ| ದಿಲೀಪ್ ಕೋಪರ್ಡೆ ಇವರು ಕರ್ನಾಟಕ ಸಂಘದಲ್ಲಿ ನಿರಂತರ 3 ವರ್ಷ ಉಪಾಧ್ಯಕ್ಷರಾಗಿದ್ದು, ಇದೀಗ ಉಪಾಧ್ಯಕ್ಷರಾಗಿ ಮರು ನೇಮಕಗೊಂಡಿದ್ದಾರೆ. ಡಾ| ವಿ. ಎಂ. ಶೆಟ್ಟಿ
ಖ್ಯಾತ ಎಲುಬು ತಜ್ಞರಾದ ಇವರು, ಕರ್ನಾಟಕ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದು, ಇದೀಗ ಸಂಘದ ಉಪಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಇಬ್ಬರ ವೈದ್ಯರ ಮೇಲುಸ್ತುವಾರಿಯಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಆಯೋಜಿಸಲಾಗುವುದು. ದೇವದಾಸ್ ಕುಲಾಲ್
ಸಂಘದಲ್ಲಿ ಮೂರು ವರ್ಷಗಳ ಕಾಲ ಜತೆ ಕಾರ್ಯದರ್ಶಿಯಾಗಿದ್ದು, ಬಳಿಕ ಮೂರು ವರ್ಷ ಕಾರ್ಯದರ್ಶಿಯಾಗಿದ್ದು, ಇದೀಗ ಮತ್ತೂಮ್ಮೆ ಗೌರವ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕುಲಾಲ ಸಂಘದ ಸಕ್ರಿಯ ಉಪಾಧ್ಯಕ್ಷರಾಗಿದ್ದು, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕನಾಥ ಶೆಟ್ಟಿ
ಕರ್ನಾಟಕ ಸಂಘದ ಹಿರಿಯ ಸದಸ್ಯ ರಾದ ಇವರು 3 ವರ್ಷ ಲಲಿತಕಲಾ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದು, ಬಳಿಕ ಮೂರು ವರ್ಷ ಸಂಘದ ಜೊತೆ ಕೋಶಾಧಿಕಾರಿಯಾಗಿದ್ದು, ಇದೀಗ ಗೌರವ ಕೋಶಾಧಿಕಾರಿಯಾಗಿ ಆಯ್ಕೆ ಯಾಗಿದ್ದಾರೆ. ಅಲ್ಲದೆ ಡೊಂಬಿವಲಿ ಹೊಟೇಲ್ ಓನರ್ ಅಸೋಸಿಯೇಶನ್ ಇದರ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.