ಮುಂಬಯಿ: ಕರ್ನಾಟಕ ಸಮಾಜ ಸೂರತ್ ಸಂಸ್ಥೆಯ ವತಿಯಿಂದ ನ. 1ರಂದು ಮಧ್ಯಾಹ್ನ 1.00 ರಿಂದ ಸೂರತ್ ನಗರದ ನಾನ್‌ಪುರಾದ ಜೀವನ ಭಾರತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮತ್ತು ಮಾನಿಷಾದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸೂರತ್‌ನ ಆದಾಯ ತೆರಿಗೆ ಇಲಾಖಾ ಆಯುಕ್ತ ಶ್ರೀನಿವಾಸ ಬಿದರಿ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಪಟ್ಲ ಸತೀಶ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸೂರತ್‌ನ ಹಿರಿಯ ತುಳು-ಕನ್ನಡತಿ, ಸಮಾಜ ಸೇವಕಿ ಮೀನಾ ಮಂಜುನಾಥ್ ಶೆಟ್ಟಿಗಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಕರ್ನಾಟಕ ಸಮಾಜದ ಗೌರವಾಧ್ಯಕ್ಷ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ, ರಮೇಶ್ ಭಂಡಾರಿ, ಉಮೇಶ್ ಸಫಲಿಗ, ಅಜಿತ್ ಶೆಟ್ಟಿ, ಕೋಶಾಧಿಕಾರಿ ರಾಮಕೃಷ್ಣ ಮೂಲ್ಯ ಉಪಸ್ಥಿತರಿದ್ದು ಅತಿಥಿಗಳನ್ನು ಸಮ್ಮಾನಿಸಿ ಗೌರವಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಸೂರತ್‌ನ ತುಳು-ಕನ್ನಡಿಗ ಕಲಾದರಿಂದ ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು, ತೆಂಕುತಿಟ್ಟಿನ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮತ್ತು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ “ಮಾನಿಷಾದ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸಂಸ್ಥೆಯ ಅಧ್ಯಕ್ಷ ಮನೋಜ್ ಸಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ವನಿತಾ ಜೆ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ. ಶೆಟ್ಟಿ, ಜತೆ ಕಾರ್ಯದರ್ಶಿ ಶಾಂತಿ ಡಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಲಿದ್ದು, ಸಮಸ್ತ ತುಳು-ಕನ್ನಡಿಗ ಬಂಧುಗಳು, ಸದಸ್ಯರು, ಕನ್ನಡಾಭಿಮಾನಿಗಳು, ಕಲಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.