Advertisement

ರಾಜ್ಯದ ಕಡೆ ಮಿಡತೆ ಬರುವ ಸಾಧ್ಯತೆ ಕಡಿಮೆ, ಆತಂಕ ಬೇಡ: ಸಚಿವ ಬಿ ಸಿ ಪಾಟೀಲ್

04:00 PM May 28, 2020 | keerthan |

ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಮಿಡತೆಗ:ಳು ಕೃಷಿಗೆ ಹಾನಿ ಮಾಡಿದೆ. ಆದರೆ ಇವು ರಾಜ್ಯಕ್ಕೆ ಬರುವ ಸಾಧ್ಯತೆ ಕಡಿಮೆ. ಬಂದರೂ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸನ್ನದ್ಧವಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಿಡತೆಗಳು ದಕ್ಷಿಣ ಆಫ್ರಿಕಾದಿಂದ ಬಲೂಚಿಸ್ತಾನ, ಪಾಕಿಸ್ತಾನ ಮೂಲಕ ರಾಜಸ್ಥಾನ್, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೆ ಬಂದ ವರದಿಯಾಗಿದೆ. ಇವು 150-200 ಕಿಲೋಮೀಟರ್ ಪ್ರತಿದಿನ ಗಾಳಿ ಬೀಸುವ ಕಡೆ ಪ್ರಯಾಣಿಸಲಿದೆ. ಕೀಟವೊಂದು 1-2 ಗ್ರಾಂ ಹಸಿರು ತಿನ್ನಲಿದೆ ಆದರೂ ದೊಡ್ಡ ಪ್ರಮಾಣದ ಮಿಡತೆಗಳು ಇರುವ ಕಾರಣ ಬೆಳೆಹಾನಿ ದೊಡ್ಡ ಪ್ರಮಾಣದಲ್ಲಿರಲಿದೆ ಎಂದರು.

ಈ ಮಿಡತೆಗಳು ಸಂಜೆ 4-7 ರ ವೇಳೆ ಮಾತ್ರ ತಿನ್ನಲಿದೆ. ಬಾಕಿ ಸಮಯ ಗಿಡದಲ್ಲೇ ಇರಲಿದೆ. ಇದಕ್ಕೆ ಕ್ಲೋರೋಫೈರಿಪಾಸ್ ಎನ್ನುವ ಔಷಧ ಸಿಂಪಡಣೆ ಮಾಡಬೇಕು. ನಮ್ಮಲ್ಲಿ ಅಗತ್ಯ ಬೇಕಿರುವ 1ಲಕ್ಷ ಲೀಟರ್ ದಾಸ್ತಾನು ಇದೆ ಎಂದರು.

ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಹಣವನ್ನು ಬಿಡುಗಡೆ ಮಾಡಿದೆ. ವಿಪತ್ತು ನಿಧಿಯಿಂದ ಶೇ. 25 ರಷ್ಟು ಹಣದಲ್ಲಿ ಬಳಕೆ ಮಾಡಬಹುದು, 200 ಕೋಟಿ ಹಣ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದರು.

ಮಹಾರಾಷ್ಟ್ರದಿಂದ ರಾಜ್ಯದ ಕಡೆ ಗಾಳಿ ಬರಿತ್ತಿಲ್ಲ, ನೈರುತ್ಯದಿಂದ ಈಶಾನ್ಯದ ಕಡೆ ಗಾಳಿ ಬೀಸುತ್ತಿದೆ.  ಇನ್ನೂ 8 ದಿನ ಗಾಳಿ ಇದೇ ರೀತಿ ಇರಲಿದೆ. ಹಾಗಾಗಿ ರಾಜ್ಯಕ್ಕೆ ಕೀಟಗಳು ಬರುವುದು ತೀರಾ ಕಡಿಮೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಮಟ್ಟದ ಸಮಿತಿಗಳುವೆ, ಡಿಸಿ, ಸಿಇಒ, ಜಿಡಿ ಕೃಷಿ ಇಲಾಖೆ,ಅಗ್ನಿ ಶಾಮಕ ಒಳಗೊಂಡ ತಂಡ ಇದೆ. ತುರ್ತು ಸಂದರ್ಭ ಬಂದರೆ ಎದುರಿಸಲು ಈ ತಂಡ ಕೆಲಸ ಮಾಡಲಿದೆ. ಡ್ರೋಣ್ ಮೂಲಕ ಕೀಟನಾಶಕ ಸಿಂಪಡಿಸಬಹುದು, ಅಗ್ನಿಶಾಮಕವನ್ನೂ ಬಳಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೋಲಾರದಲ್ಲಿ ಕಂಡುಬಂ ದಿರುವುದು ಬೇರೆ ರೀತಿಯ ಮಿಡತೆ. ಇಲ್ಲಿ ಗಾಬರಿ ಪಡುವ ಅಗತ್ಯವಿಲ್ಲ ಎಂದ ಅವರು ಇದಕ್ಕಾಗಿ ನಾವು ಸನ್ನದ್ದರಾಗಿದ್ದೇವೆ. ಔಷಧವನ್ನು ಗಡಿಯಲ್ಲಿ ದಾಸ್ತಾನು ಮಾಡಲಿದ್ದೇವೆ, ಸರ್ಕಾರದ ಹಣದಲ್ಲಿ ಔಷಧ ಸಿಂಪಡಣೆ ಮಾಡಲಾಗುವುದು. ಮಹಾರಾಷ್ಟ್ರ ಕೃಷಿ ಆಯುಕ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿ ಗಂಟೆಗೊಮ್ಮೆ ಮಾಹಿತಿ ಪಡೆಯಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next