Advertisement

ತೀರ್ಥಹಳ್ಳಿ: ಬೆಳಗಾವಿ ಘಟನೆಯನ್ನು ಖಂಡಿಸಿ ಗೂಂಡಾಗಳನ್ನು ತಕ್ಷಣ ಬಂದಿಸುವಂತೆ ಕರವೇ ಮನವಿ

01:36 PM Dec 22, 2021 | Suhan S |

ತೀರ್ಥಹಳ್ಳಿ: ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಸೇನೆ ಪುಂಡರು ಮತ್ತು ಎಂ.ಇ.ಎಸ್. ಸಂಘಟನೆಯವರು ಕನ್ನಡ ಬಾವುಟವನ್ನು ಸುಟ್ಟು ಕನ್ನಡಿಗರಿಗೆ ಅವಮಾನಿಸಿದ ಘಟನೆಯನ್ನು ಖಂಡಿಸಿ ಕರವೇ ಸಂಘಟನೆ ಪ್ರತಿಭಟನೆ ನಡೆಸಿತು.

Advertisement

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿ ವಿಕೃತ ಮೆರೆದು, ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಸಗಣಿ ಬಳಿದು ಕನ್ನಡಿಗರನ್ನು ಕೆರಳಿಸುವ ಕೆಲಸವನ್ನು ಮಾಡಿದ್ದಾರೆ. ಪ್ರತೀ ವರ್ಷವೂ ಸಹ ಬೆಳಗಾವಿ ಅಧಿವೇಶನದ.ಸಮಯದಲ್ಲಿ ಎಂ.ಇ.ಎಸ್. ಪುಂಡರು ಮತ್ತು ಶಿವಸೇನೆಯವರು ಕನ್ನಡಿಗರನ್ನು ಕೆಣಕಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಬಗ್ಗೆ ಯಾವುದೇ ಸರ್ಕಾರ ಇವರ ಸಂಘಟನೆಯನ್ನು ನಿಷೇಧಿಸುವ ಕುರಿತು ಅಥವಾ ಅವರ ವಿರುದ್ಧ ಕಠಿಣ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿ ಅವರನ್ನು ಬಂಧಿಸಿ ಶಿಕ್ಷಿಸುವ ಕೆಲಸವನ್ನು ಈವರೆಗೂ ಮಾಡಿರುವುದಿಲ್ಲ. ಈ ಸಂದರ್ಭದಲ್ಲೂ ಮುಂದೆ ಇದೇ ರೀತಿ ಪುಂಡಾಟಿಕೆ ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಕರವೇ ಅಧ್ಯಕ್ಷ ಸುರೇಂದ್ರ ಯಡೂರು ತಿಳಿಸಿದರು .

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ಬುಧವಾರ ಘಟನೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ತೀರ್ಥಹಳ್ಳಿ ತಾಲ್ಲೂಕು ಕರವೇ ವತಿಯಿಂದ ಪ್ರತಿಭಟನೆಯ ಮುಖಾಂತರ ತಾಲ್ಲೂಕು ತಹಶೀಲ್ದಾರ್‌ರವರ ಮೂಲಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಸುರೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಿಲೀಪ್, ಯುವ ಘಟಕದ ಅಧ್ಯಕ್ಷ ಶ್ರೀಕಾಂತ್ ಬೆಟ್ಟಮಕ್ಕಿ, ನಗರ ಘಟಕದ ಅಧ್ಯಕ್ಷ  ರವಿ, ಪ್ರಧಾನ ಕಾರ್ಯದರ್ಶಿ ಮಲ್ಲಕ್ಕಿ ರಾಘವೇಂದ್ರ, ಉಪಾಧ್ಯಕ್ಷರಾದ ವಿಕ್ರಮ್ ಶೆಟ್ಟಿ, ಟೈಲರ್ ಸುರೇಶ್, ಭಾರತೀಪುರ ಪ್ರದೀಪ್, ಅರ್ಜುನ್ ಎಸ್., ಶ್ರೀನಿಧಿ ಎ. ಆರ್. ಅಂಬರೀಶ್ ಬಸವಾನಿ, ಚಂದ್ರು ಹೂವಿನಂಗಡಿ, ಸತೀಶ್, ಅಹ್ಮದ್ ಕಡೂರು, ಪ್ರತಿಮ, ಲಕ್ಷ್ಮೀದೇವಿ, ನಾಗವೇಣಿ, ಭರತ್‌ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next