ಮರಾಠಾ ಅಭಿವೃದ್ಧಿ ನಿಗಮ ರಚನೆಗೆ ಬೆಂಬಲಿಸಿ ಹಾಗೂ ಡಿ.5 ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿರೋಧ ವ್ಯಕ್ತಪಪಡಿಸಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡಿರುವ ಕರವೇ ಕಾರ್ಯಕರ್ತರು ಶನಿವಾರ ನಗರದಲ್ಲಿರುವ ಶಾಸಕ ಕಛೇರಿ ಎದುರು ಪ್ರತಿಭಟನೆ ನಡೆಸಿ, ಶಾಸಕ ಯತ್ನಾಳ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಮರಾಠಿ ಸಮುದಾಯವನ್ನು ಓಲೈಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ನಿರ್ಧಾರ ಸರಿಯಲ್ಲ.
Related Articles
Advertisement
ಇದನ್ನೂ ಓದಿ:ಭೀಕರ ಅಪಘಾತ-ಕಾರಿನಲ್ಲಿದ್ದ ಏಳು ಮಂದಿ ಜೀವಂತ ದಹನ, ಓರ್ವ ಮಹಿಳೆ ಪವಾಡಸದೃಶ ಪಾರು
ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ, ಶ್ರೀಕಾಂತ ಬಿಜಾಪುರ ಮಾತನಾಡಿ, ಈಚೆಗೆ ನಗರ ಶಾಸಕ ಯತ್ನಾಳ ಅವರು ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸಲು ಮುಂದಾಗುತ್ತಿದ್ದಾರೆ. ಅಲ್ಲದೇ ಅನಗತ್ಯವಾಗಿ ವಿವಾಧಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ. ನಗರ ಶಾಸಕರು ಮಾನಸಿಕ ಆರೋಗ್ಯದ ಕುರಿತು ಆತಂಕವಾಗಿದ್ದು, ಕೂಡಲೇ ಸರ್ಕಾರ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಮಹಾದೇವ ರಾವಜಿ, ಫಯಾಜ ಕಲಾದಗಿ, ಸಾಯಬಣ್ಣ ಮಡಿವಾಳರ, ಮಲ್ಲು ಮಡಿವಾಳರ, ಮಂಜುನಾಥ ಬಡಿಗೇರ, ಗೌಡಪ್ಪಗೌಡ ಬಿರಾದಾರ, ಸಂತೋಷ ಪಾಟೀಲ, ಸುಭಾಸ ಪಾಟೀಲ, ಮಲಕುಗೌಡ ಪಾಟೀಲ, ಪಂಡಿತ ಪೂಜಾರಿ, ಧರ್ಮು ಸಿಂಧೆ, ಭೀಮಪ್ಪ ಕಾಂಬಳೆ, ಮನೋಹರ ತಾಜವ, ಶಿವಾಜಿ ಜಾಧವ, ಬಸವರಾಜ ಬಿ.ಕೆ., ನಶೀಮ ರೋಜಿಂದಾರ, ವಿನೋದ ದಳವಾಯಿ, ಪಿದಾ ಕಲಾದಗಿ, ರಾಜು ಹಜೇರಿ, ಮೃತ್ಯುಂಜಯ ಹಿರೇಮಠ, ಮಲ್ಲಿಕಾರ್ಜುನ ಬಿರಾದಾರ, ರಮೇಶ ಜಾವಗರ, ಸುರೇಶ ಪೂಜಾರಿ, ಸೋಮು ಕರನಾಳ, ಎಸ್.ವೈ.ನಡುವಿನಕೇರಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು