Advertisement
ನವಿಮುಂಬಯಿ ಕನ್ನಡ ಸಂಘದ ಎಂ. ಬಿ. ಕುಕ್ಯಾನ್ ಸಭಾಗೃಹದಲ್ಲಿ ನ.28 ರಂದು ನಡೆದ ನವಿಮುಂಬಯಿ ಕನ್ನಡ ಸಂಘದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರ ಸಹಿತ ಇತರ ಯಾವುದೇ ಕ್ಷೇತ್ರಗಳಲ್ಲಿ ಮುಂಬಯಿ ಮಹಾನಗರದಲ್ಲಿ ಕನ್ನಡಿ ಗರು ಸಕ್ರಿಯರಾಗಿದ್ದಾರೆ. ಇಂಥವರ ಕಾರ್ಯವನ್ನು ಗುರುತಿಸಿ ಈ ಬಾರಿ ಕರ್ನಾಟಕ ಸರಕಾರವು ಮುಂಬಯಿ ಮಹಾನಗರದ ಮೂವರು ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜ ವಾಗಿ ಅಭಿನಂದನೆಯವಾಗಿದೆ. ಇದು ಮುಂಬ ಯಿಯ ಸಮಸ್ತ ಕನ್ನಡಿಗರಿಗೆ ದೊರೆತ ಗೌರವವಾಗಿದೆ ಎಂದು ತಿಳಿಸಿದರು.
Related Articles
Advertisement
ನವಿಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗೋಪಾಲ ವೈ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ. ಎಚ್. ಕಟ್ಟಿ ಅವರು ಸಂಘದ ಬಗ್ಗೆ ಹಾಗೂ ಸಂಘ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನವಿಮುಂಬಯಿ ಕನ್ನಡ ಸಂಘದ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರಗಿದವು. ಇತ್ತೀಚೆಗೆ ನಿಧನ ಹೊಂದಿದ ನಟ, ಸಮಾಜ ಸೇವಕ ಪುನೀತ್ ರಾಜಕುಮಾರ್ ಅವರ ಸಂಸ್ಮರಣೆ ನಡೆಯಿತು. ಕಿರು ಹಾಸ್ಯ ನಾಟಕ, ರಂಗ ನಿರ್ದೇಶಕ ಸಾದಯಾ ಅವರ ನಿರ್ದೇಶನದಲ್ಲಿ ಅಂಬಿಕಾತನಯದತ್ತ ಒಂದು ರೂಪಕ ಪ್ರದರ್ಶನಗೊಂಡಿತು.
ಲೈಬ್ರೆರಿ ವ್ಯವಸ್ಥಾಪಕರಾದ ವೈ. ವೈ. ಕೆಂಭಾವಿ, ಜಯರಾಮ್ ಶೆಟ್ಟಿ ಹಾಗೂ ಜ್ಯೋತಿ ಪ್ರಸಾದ್ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪರಿಸರದ ತುಳು-ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಸಮಿತಿಯ ಸಂಯೋ ಜಕ ರಘು ಮೂಲ್ಯ ಅತಿಥಿಗಳನ್ನು ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ. ರೈ ಸ್ವಾಗತಿಸಿದರು. ಪ್ರತಿಭಾ ಅವರು ವಿಶೇಷ ಆಮಂತ್ರಿ ತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರ ಮವನ್ನು ಉಪಾಧ್ಯಕ್ಷ ಮಧುಸೂದನ್ ಟಿ. ರಾವ್‌ನಿರ್ವಹಿಸಿದರು.
ಶ್ರೀಮಂತ ಇತಿಹಾಸ ಹೊಂದಿರುವ ನಾಡು ನಮ್ಮದು. ಕನ್ನಡದ ಸಂಸ್ಕೃತಿ, ಸಾಹಿತ್ಯಗಳು ಎಂದೆಂದಿಗೂ ಮಹತ್ವವನ್ನು ಪಡೆಯುತ್ತವೆ. ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವುದಕ್ಕಾಗಿ ನವಿಮುಂಬಯಿ ಕನ್ನಡ ಸಂಘವು ಸದಾ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ನಾಡು-ನುಡಿಯ ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ನಾವು ಕನ್ನಡದ ಸೇವೆಗಾಗಿ ಸದಾ ಕೆಲಸ ಮಾಡುತ್ತೇವೆ. ಇನ್ನು ಮುಂದೆಯೂ ಎಲ್ಲರ ಸಂಪೂರ್ಣ ಸಹಕಾರದಿಂದ ಮಹಾರಾಷ್ಟ್ರದ ಮಣ್ಣಿನಲ್ಲಿ ನಾವು ಒಂದಾಗಿ ಕನ್ನಡದ ಸೇವೆ ಮಾಡೋಣ.-ಗೋಪಾಲ್ ವೈ. ಶೆಟ್ಟಿ ಅಧ್ಯಕ್ಷರು, ನವಿಮುಂಬಯಿ ಕನ್ನಡ ಸಂಘ ವಾಶಿ
-ಚಿತ್ರ-ವರದಿ: ಸುಭಾಷ್ ಶಿರಿಯ