Advertisement
ಬೆಳಗಾವಿಯಲ್ಲಿ ನಂ. 1ರಂದು ರಾಜ್ಯೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದ ಹಿನ್ನೆಲೆಯಲ್ಲಿ ಸಂಕೇಶ್ವರದಲ್ಲಿ ನ. 4ರಂದು ರಾಜ್ಯೋತ್ಸವ ಆಚರಣೆಗೆ ರಾಜ್ಯೋತ್ಸವ ಆಚರಣೆ ಸಮಿತಿ ನಿರ್ಧಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಸಡಗರದಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
Related Articles
Advertisement
ಕ್ರಾತಿ ವೀರ ಸಂಗೊಳ್ಳಿ ರಾಯಣ್ಣನನ ಭಾವಚಿತ್ರಕ್ಕೆ ಉದ್ಯಮಿ ಸುನೀಲ ಪರ್ವತರಾವ ಪೂಜೆ ಸಲ್ಲಿಸಿದರು. ರಾಜ್ಯೋತ್ಸವ ಮೆರವಣಿಗೆಗೆ ಡಾ. ಜಯಪ್ರಕಾಶ ಕರಜಗಿ ಚಾಲನೆ ನೀಡಿದರು. ನವೀನ ಗಂಗರೇಡ್ಡಿ ಹಳದಿ ಮತ್ತು ಕೆಂಪು ಬಣ್ಣದ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಬೆಳಗ್ಗೆ ಗಾಂಧಿ ಚೌಕದಿಂದ ಆರಂಭಗೊಂಡ ತಾಯಿ ಭುವನೇಶ್ವರಿ ಹಾಗೂ ರೂಪಕಗಳ ಮೆರವಣಿಗೆಯು ಆಝಾದ ರಸ್ತೆ ಸುಭಾಷ್ ರಸ್ತೆ, ಹಳೆ ಪಿಬಿ ರಸ್ತೆ, ಚನ್ನಮ್ಮ ವೃತ್ತ ಮಾರ್ಗವಾಗಿ ಮತ್ತೆ ಗಾಂಧಿ ಚೌಕಕ್ಕೆ ಆಗಮಿಸಿ ಮುಕ್ತಾಯ ಗೊಂಡಿತು.
ರೂಪಕಗಳ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳ ವೇಷಭೂಷಣವು ಎಲ್ಲರ ಗಮನ ಸೆಳೆಯಿತು. ಪಟ್ಟಣದಲ್ಲಿನ ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಬಸವೇಶ್ವರರ ಪ್ರತಿಮೆಗಳು ಕನ್ನಡ ಭಾವಟಗಳಿಂದ ಶೃಂಗಾರಗೊಂಡಿದ್ದವು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಪ್ರಮೋದ ಹೊಸಮನಿ, ಕನ್ನಡಪರ ಹೋರಾಟಗಾರರಾದ ದಿಲೀಪ ಹೊಸಮನಿ ಸಂತೋಷ ಮುಡಸಿ, ವಿಕ್ರಮ ಕರನಿಂಗ, ಸಂಜಯ ಶಿರಕೋಳಿ, ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಸತ್ಯನಾಯಿಕ, ಉಪಾಧ್ಯಕ್ಷ ಅಸ್ಲಂ ಮುಲ್ತಾನಿ, ಪ್ರ, ಕಾರ್ಯದರ್ಶೀ ಪ್ರಶಾಂತ ಮನ್ನಿಕೇರಿ, ಕಾರ್ಯದರ್ಶಿ ಸಂತೋಷ ಅಲತಗಿ, ಖಜಾಂಚಿ ರಾಹುಲ್ ಜಯಕರ, ಸುನಿಲ ಪರ್ವತರಾವ್, ಅಮರ ನಲವಡೆ, ಶ್ರೀಕಾಂತ ಹತನೂರೆ, ಜಿತೇಂದ್ರ ಮರಡಿ, ಆನಂದ ವೈರಾಗಿ, ಮೋಸಿನ ಪಠಾನ್, ಚಿದಾನಂದ ಕರ್ದನ್ನವರ, ಪ್ರಶಾಂತ ಕೋಳಿ, ವಿನೋದ ನಾಯಿಕ, ಪಿಂಟು ಸೂರ್ಯವಂಶಿ, ಮಹೇಶ ಹಟ್ಟಿಹೊಳಿ, ರೋಹನ ನೇಸರಿ, ಗಂಗಾರಾಮ ಭೂಸಗೋಳ, ಪವನ ಪಾಟೀಲ, ಪ್ರೀತಂ ಸುಮಾರೆ, ಗಣೇಶ ಪಾಟೀಲ, ಲಕ್ಷ್ಮಣ ಬಾನೆ, ಅನಿಲ ಖಾತೆದಾರ, ರಾಹುಲ್ ವಾರಕರಿ, ಯುವರಾಜ ಪಾತ್ರೋಟ, ಜಯು ಸಾವಂತ, ಅಭಿ ಹರಿಜನ ಸೇರಿದಂತೆ ಅನೇಕರು ಭಾಗವಹಿಸಿದ್ದರು.