Advertisement

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು

03:26 AM Aug 10, 2020 | Hari Prasad |

ಬೆಂಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ವಾರದಿಂದ ಎಡೆಬಿಡದೆ ಸುರಿದ ಧಾರಾಕಾರ ಮಳೆ ರವಿವಾರ ಸಂಪೂರ್ಣ ಕಡಿಮೆಯಾಗಿದೆ.

Advertisement

ಆದರೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಮುಂದುವರಿದಿತ್ತು.

ಮುಳುಗಡೆಗೊಂಡಿದ್ದ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಭಗಂಡೇಶ್ವರ ದೇಗುಲ ಆವರಣದಲ್ಲಿ ನದಿಯ ಹರಿವು ತಗ್ಗಿದೆ. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಮಹಿಳೆಯೊಬ್ಬರು ನದಿಗೆ ಬಿದ್ದು ಸಾವನ್ನಪ್ಪಿದರೆ,

ಹಾವೇರಿಯಲ್ಲಿ ಯುವಕನೋರ್ವ ನೆರೆಯಲ್ಲಿ ಕೊಚ್ಚಿ ಹೋಗಿದ್ದಾನೆ.

ಕರಾವಳಿಗೆ ರೆಡ್‌ ಅಲರ್ಟ್‌
ರಾಜ್ಯ ಕರಾವಳಿಯಲ್ಲಿ ಆ. 10ರಂದು ರೆಡ್‌ ಅಲರ್ಟ್‌, ಆ. 11ರಂದು ಆರೆಂಜ್‌ ಮತ್ತು ಆ. 12ರಿಂದ 14ರ ವರೆಗೆ ಎಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಮಂಗಳವಾರ ಮುಂಜಾನೆಯ ವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲೆಡೆ, ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next