ಬೆಂಗಳೂರು:2017-18ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು,ಈ ಬಾರಿ ಶೇ.59.56ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದು(ಶೇ.91.49), ಉಡುಪಿ ಜಿಲ್ಲೆ ದ್ವಿತೀಯ(ಶೇ.90.67), ಕೊಡಗು ತೃತೀಯ(ಶೇ.83.94), ಮಡಿಕೇರಿ ನಾಲ್ಕನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕೊನೆ ಸ್ಥಾನ ಪಡೆದಿದೆ. ಎಂದು ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ 1ಗಂಟೆಗೆ ಮಂಡಳಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ 118 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ. ಈ ಬಾರಿ ಒಟ್ಟು 4,725 ಕಾಲೇಜುಗಳಿಂದ 6,90,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಒಟ್ಟು 4, 08, 421 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜೂನ್ 8ರಿಂದ ಜೂನ್ 20ರವರೆಗೆ ಫೇಲ್ ಆದವರಿಗೆ ಪೂರಕ ಪರೀಕ್ಷೆ ನಡೆಯಲಿದೆ. ಬಾಲಕಿಯರು ಶೇ.67.11 ರಷ್ಟು ತೇರ್ಗಡೆಯಾಗಿದ್ದು, ಬಾಲಕರು ಶೇ.52.30ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆ 9ನೇ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ 13ನೇ ಸ್ಥಾನ ಪಡೆದಿದೆ. ಮೂರು ಸರ್ಕಾರಿ ಕಾಲೇಜು ಶೂನ್ಯ ಫಲಿತಾಂಶ ಪಡೆದಿದೆ. ಕನ್ನಡ ಮಾಧ್ಯಮ ತೇರ್ಗಡೆ ಪ್ರಮಾಣ 51.45ರಷ್ಟು, ಆಂಗ್ಲ ಮಾಧ್ಯಮ ಪ್ರಮಾಣ 66.6 ರಷ್ಟು ಎಂದು ಹೇಳಿದರು. 112 ಅನುದಾನ ರಹಿತ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಎಸ್ಎಂಎಸ್ ಮೂಲಕ ಫಲಿತಾಂಶ: ವಿದ್ಯಾರ್ಥಿಗಳು ಎಸ್ಎಂಎಸ್ ಮೂಲಕವೂ ಫಲಿತಾಂಶ ತಿಳಿಯಬಹುದು. ಮೊಬೈಲ್‌ನಲ್ಲಿ KAR12 ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ರೋಲ್ ನಂಬರ್ ನಮೂದಿಸಿ 56263ಗೆ ಸಂದೇಶ ಕಳುಹಿಸಬೇಕು.
//www.pue.kar.nic.in
//karresults.nic.in