ಉಡುಪಿ: ಚುನಾವಣೆಯಲ್ಲಿ ಪಕ್ಷ ಬಿ-ಫಾರ್ಮ್ ನೀಡಲಿ ಅಥವಾ ನೀಡದಿರಲಿ ಸ್ಪರ್ಧೆಗೆ ಇಳಿಯುವ ಉಮೇ ದುವಾರರು ಇದ್ದೇ ಇರುತ್ತಾರೆ. ಜತೆಗೆ ಪಕ್ಷೇತರ ಅಭ್ಯರ್ಥಿಗಳಿರುತ್ತಾರೆ. ಫಲಿತಾಂಶ ಬಂದಾಗ ಬಹುತೇಕರಿಗೆ ಠೇವಣಿಯೂ ಸಿಗದು. ಈ ಮಧ್ಯೆ ನಾಮಪತ್ರ ಸಲ್ಲಿಸಿ, ಎರಡೇ ದಿನದಲ್ಲಿ ವಾಪಸ್ ಪಡೆಯುವ ಚಾಣಾಕ್ಷರೂ ಇದ್ದಾರೆ.
2008, 2013 ಹಾಗೂ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರ ದಲ್ಲೂ ಠೇವಣಿ ಕಳೆದುಕೊಂಡವರ ಪಟ್ಟಿ ದೊಡ್ಡದು. ಯಾರನ್ನೋ ಮಣಿ ಸಬೇಕು, ಇನ್ಯಾರಿಗೋ ಅನುಕೂಲ ಮಾಡಿ ಕೊಡಬೇಕು ಅಥವಾ ಕ್ಷೇತ್ರದಲ್ಲಿ ಗೆದ್ದು ಇಡೀ ವ್ಯವಸ್ಥೆಯನ್ನೇ ಬದಲಿಸಬೇಕು-ಹೀಗೆ ನಾನಾ ಕಾರಣ ಸ್ಪರ್ಧೆಯ ಹಿಂದಿರುತ್ತದೆ.
2018ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ 14 ಮಂದಿ ನಾಮ ಪತ್ರ ಸಲ್ಲಿಸಿದ್ದರು. ನಾಲ್ವರ ನಾಮಪತ್ರ ತಿರಸ್ಕೃತಗೊಂಡರೆ, ಇಬ್ಬರು ವಾಪಸ್ ಪಡೆದರು. ಕಣದಲ್ಲಿದ್ದ 8 ಮಂದಿಯಲ್ಲಿ 6 ಜನರಿಗೆ ಠೇವಣಿ ಸಿಗಲಿಲ್ಲ. ಕುಂದಾಪುರ ಕ್ಷೇತ್ರದಲ್ಲಿ 8 ಮಂದಿಯಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡರೆ, ಇಬ್ಬರು ವಾಪಸ್ ಪಡೆದಿದ್ದರು. ಉಳಿದವರಲ್ಲಿ ಮೂವರು ಠೇವಣಿ ಕಳೆದುಕೊಂಡರು. ಉಡುಪಿ ಕ್ಷೇತ್ರದಿಂದ 5 ಮಂದಿ ನಾಮ ಪತ್ರ ಸಲ್ಲಿಸಿ, ಇಬ್ಬರು ವಾಪಸ್ ಪಡೆದಿದ್ದರು. ಮೂವರಲ್ಲಿ ಒಬ್ಬರು ಠೇವಣಿ ಕಳೆದು ಕೊಂಡರು. ಕಾಪು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ 10 ಮಂದಿಯಲ್ಲಿ 1 ತಿರಸ್ಕೃತಗೊಂಡು, ಇಬ್ಬರು ವಾಪಸ್ ಪಡೆದಿದ್ದರು. ಏಳರಲ್ಲಿ ಐದು ಮಂದಿ ಠೇವಣಿ ಕಳೆದುಕೊಂಡಿದ್ದರು. ಕಾರ್ಕಳ ಕ್ಷೇತ್ರದಲ್ಲಿ 5 ಮಂದಿ ನಾಮಪತ್ರ ಸಲ್ಲಿಸಿ ದ್ದು, 1 ತಿರಸ್ಕೃತಗೊಂಡು, ಇಬ್ಬರು ವಾಪಸ್ ಪಡೆದಿದ್ದರು. ಇಬ್ಬರು ಠೇವಣಿ ಗಳಿಸಿದ್ದರು. ಯಾವ ಕ್ಷೇತ್ರದಲ್ಲೂ ಮಹಿಳೆಯರು ನಾಮಪತ್ರ ಸಲ್ಲಿಸಿರಲಿಲ್ಲ.
2013ರಲ್ಲಿ ಬೈಂದೂರು ಕ್ಷೇತ್ರದಿಂದ 14 ಮಂದಿ ನಾಮಪತ್ರ ಸಲ್ಲಿಸಿದ್ದು ಒಬ್ಬರು ವಾಪಸ್ ಪಡೆದಿದ್ದು, ಉಳಿದವರಲ್ಲಿ 11 ಮಂದಿ ಠೇವಣಿ ಕಳೆದುಕೊಂಡರು. ಕುಂದಾಪುರದಿಂದ 9 ಮಂದಿಯಲ್ಲಿ 1 ನಾಮಪತ್ರ ತಿರಸ್ಕೃತಗೊಂಡಿದ್ದು, ಇಬ್ಬರು ವಾಪಸ್ ಪಡೆದಿದ್ದರು. 6 ಮಂದಿಯಲ್ಲಿ ನಾಲ್ವರಿಗೆ ಠೇವಣಿ ಸಿಗಲಿಲ್ಲ. ಉಡುಪಿ ಕ್ಷೇತ್ರದಿಂದ 8 ಮಂದಿಯಲ್ಲಿ ಇಬ್ಬರಿಗಷ್ಟೇ ಠೇವಣಿ ಸಿಕ್ಕಿತ್ತು. ಕಾಪು ಕ್ಷೇತ್ರ ದಿಂದ 13 ನಾಮಪತ್ರದಲ್ಲಿ ಇಬ್ಬರು ವಾಪಸ್ ಪಡೆದಿದ್ದರು. ಉಳಿದ 11 ಮಂದಿಯಲ್ಲಿ 9 ಮಂದಿ ಠೇವಣಿ ಗಳಿಸಲಿಲ್ಲ. ಕಾರ್ಕಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ, ಕಣದಲ್ಲಿದ್ದ 9 ಮಂದಿಯಲ್ಲಿ 7 ಮಂದಿ ಠೇವಣಿ ಕಳೆದುಕೊಂಡಿದ್ದರು. ಆಗ ಉಡುಪಿ, ಬೈಂದೂರು ಹಾಗೂ ಕಾರ್ಕಳದಲ್ಲಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.
2018ರಲ್ಲಿ ಬೈಂದೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ 10 ಮಂದಿಯಲ್ಲಿ 1 ತಿರಸ್ಕೃತಗೊಂಡು, ಕಣದಲ್ಲಿದ್ದ 9ರಲ್ಲಿ 7 ಮಂದಿಗೆ ಠೇವಣಿ ಉಳಿಸಿಕೊಳ್ಳಲಿಲ್ಲ. ಕುಂದಾಪುರದಲ್ಲಿ 8 ಮಂದಿ ನಾಮಪತ್ರ ಸಲ್ಲಿಸಿದ್ದರು. 1 ತಿರಸ್ಕೃತಗೊಂಡರೆ, ಇಬ್ಬರು ವಾಪಸ್ ಪಡೆದಿದ್ದರು. ಕಣದಲ್ಲಿದ್ದ ಐವರಲ್ಲಿ ಮೂವರು ಠೇವಣಿ ಕಳೆದುಕೊಂಡಿದ್ದರು. ಉಡುಪಿಯಲ್ಲಿ 10 ಮಂದಿಯಲ್ಲಿ ಇಬ್ಬರು ವಾಪಸ್ ಪಡೆದಿದ್ದರು. ಉಳಿದವರಲ್ಲಿ 6 ಮಂದಿ ಠೇವಣಿ ಕಳೆದುಕೊಂಡಿದ್ದರು. ಕಾಪು ಕ್ಷೇತ್ರದಿಂದ 5 ಮಂದಿ ನಾಮಪತ್ರ ಸಲ್ಲಿಸಿ, ಕಣದಲ್ಲಿದ್ದರು. ಮೂರವರು ಠೇವಣಿ ಕಳೆದುಕೊಂಡಿದ್ದರು. ಕಾರ್ಕಳದಿಂದ 10 ಮಂದಿ ನಾಮಪತ್ರ ಸಲ್ಲಿಸಿದ್ದು ಇಬ್ಬರದ್ದು ತಿರಸ್ಕೃತಗೊಂಡರೆ, ಒಬ್ಬರು ವಾಸಪ್ ಪಡೆದಿದ್ದರು. ಉಳಿದ 7 ಮಂದಿಯಲ್ಲಿ ಐವರಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಕಾಪುವಿನಿಂದ ಓರ್ವ ಮಹಿಳೆ ಅಭ್ಯರ್ಥಿ ಕಣದಲ್ಲಿದ್ದರು.
2013ರಲ್ಲಿ ಮೂವರು ಹಾಗೂ 2018ರಲ್ಲಿ ಓರ್ವ ಮಹಿಳೆ ಪಕ್ಷೇತರ ರರಾಗಿ ಅಂತಿಮ ಕಣದಲ್ಲಿ ದ್ದರು. ಆದರೆ, ಎರಡೂ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯ ವಾಗಿಲ್ಲ. ವಿಶೇಷ ಎಂಬಂತೆ ಮೂರು ಚುನಾವಣೆಯಲ್ಲಿ ಠೇವಣಿ ಉಳಿಸಿಕೊಂಡಿದ್ದ ಮೊದಲೆರೆಡು ಸ್ಥಾನದಲ್ಲಿದ್ದವರು ಮಾತ್ರ. 2013
ರಲ್ಲಿ ಕುಂದಾಪುರದಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿದ್ದ ಒಬ್ಬರು ಠೇವಣಿ ಕಳೆದುಕೊಂಡಿದ್ದು ಉಂಟು.
-ರಾಜು ಖಾರ್ವಿ ಕೊಡೇರಿ