Advertisement

Karnataka Poll: ಶಿರಸಿಯಲ್ಲಿ ಅಂಚೆ ಮತದಾನ ಮಾಡಿದ 102 ವರ್ಷದ ಹಿರಿಯಜ್ಜಿ

07:10 PM May 01, 2023 | Team Udayavani |

ಶಿರಸಿ: ರಾಜ್ಯ ವಿಧಾನಸಭೆ ಚುನಾವಣಾ ಹಿನ್ನಲೆಯಲ್ಲಿ ವಯಸ್ಸಾದವರಿಗೆ, ಅನಾರೋಗ್ಯವುಳ್ಳವರಿಗೆ ಮನೆಯಿಂದಲೆ ಮತದಾನ ಮಾಡುವ ಅವಕಾಶವನ್ನು‌ ಮೇ 1ರಿಂದ ಆರಂಭಿಸಲಾಗಿದೆ.

Advertisement

ಶಿರಸಿ‌ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ‌ ಮತದಾನ ಪ್ರಕ್ರಿಯೆಯಲ್ಲಿ 102 ವರ್ಷದ ಶೀಬಳೆಮನೆಯ ಹಿರಿಯಜ್ಜಿ ಮಂಜಮ್ಮ ಅಧಿಕಾರಿಗಳ ತಂಡ ಅವರ ಮನೆಗೇ ಸೀಲ್ಡ ಮಾಡಲಾದ ಮತಪೆಟ್ಟಿಗೆ ಒಯ್ದು ಮತದಾನಕ್ಕೆ ಅವಕಾಶ‌ ಮಾಡಿಕೊಟ್ಟರು. ಅಜ್ಜಿ ಸಂಭ್ರಮದಿಂದ ಮತದಾನ ‌ಮಾಡಿದರು.

ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 315 ಮತದಾರರಿದ್ದರೆ, 88 ವಿಶೇಷ ಚೇತನ ಮತದಾರರಿದ್ದಾರೆ. ಸೋಮವಾರದಿಂದ ತಾಲೂಕಿನ 12 ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಮತದಾನ ತಂಡ ರಚನೆ ಮಾಡಲಾಗಿದೆ. ಮತದಾರರ ಮನೆಗೆ ತೆರಳಿ ಅಂಚೆ ಮತಪತ್ರದ ವಿವರಣೆ ನೀಡಿ ಮತದಾನ ಪ್ರಕ್ರಿಯಿಯೆ ಆರಂಭಿಸಿದ್ದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next