Advertisement

ದೇವರೇ ಚುನಾವಣೆಯಲ್ಲಿ ನಮ್ಮನ್ನೇ ಗೆಲ್ಲಿಸು: ಮತದಾನದ ಮುನ್ನಾದಿನ ಗಣ್ಯರ ದೇಗುಲ ಸುತ್ತಾಟ

01:19 AM May 10, 2023 | Team Udayavani |

ಬೆಂಗಳೂರು: “ದೇವರೇ ಚುನಾವಣೆಯಲ್ಲಿ ನಮ್ಮ ಪಕ್ಷವೇ ಗೆದ್ದು ಅಧಿಕಾರಕ್ಕೆ ಬರುವಂತಾಗಲಿ’  – ಹೀಗೆಂದು ಪ್ರಮುಖ ನಾಯಕರು ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

Advertisement

ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡು ಮತದಾನಕ್ಕೆ ಕ್ಷಣ ಗಣನೆ ಆರಂಭವಾಗುತ್ತಿದ್ದಂತೆ ರಾಜ ಕೀಯ ಪಕ್ಷಗಳ ನಾಯಕರು “ದೇಗುಲ ಸುತ್ತಾಟ’ ದಲ್ಲಿ ತೊಡಗಿದ್ದರು.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಕೆಲವು ನಾಯಕರು ವಿಶೇಷ ಹೋಮ-ಹವನ ಕೂಡ ನಡೆಸಿದ್ದಾರೆ. ಇನ್ನು ಹಲವರು ಮಠಾಧೀಶರ ಆಶೀರ್ವಾದ ಪಡೆದಿ ದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆಗೂಡಿ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ಗ್ಯಾರಂಟಿ ಜಾರಿ ಮಾಡು ತ್ತೇವೆ ಎಂದು ಘೋಷಿಸಿದ್ದು ವಿಶೇಷ.

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ದೇವಿಯ ಮುಂದಿಟ್ಟು ಪೂಜೆ ಮಾಡಿಸಿಕೊಂಡ ಬಳಿಕ ಉಭಯ ನಾಯಕರು ದೇವಾಲಯದ ಮುಂದೆ ಜತೆಗೂಡಿ ಕೈ ಎತ್ತಿ ಒಗ್ಗಟ್ಟು ಹಾಗೂ ವಿಜಯದ ಸಂಕೇತ ತೋರಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು ಮೊದಲ ಸಂಪುಟದಲ್ಲೇ ನಾವು ಘೋಷಿ ಸಿರುವ ಭರವಸೆ ಈಡೇರಿಸುತ್ತೇವೆ. ನಾವಿಬ್ಬರೂ ಜತೆಗೂಡಿ ಸಂಕಲ್ಪ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಇಬ್ಬರೂ ಇದಕ್ಕೆ ಮುನ್ನ ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮತ್ತೂಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಬಿಜೆಪಿ ನಾಯಕರು ಹನುಮಂತನ ದೇವಾಲಯ ಗಳಲ್ಲಿ ಪೂಜೆ ಸಲ್ಲಿಸಿ ಹನುಮಾನ್‌ ಚಾಲೀಸ ಪಠಣ ಮಾಡಿದ್ದಾರೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ವಿಜಯ ನಗರ ದಲ್ಲಿ ರುವ ಕೆಂಪಣ್ಣನವರ ಕಲ್ಯಾಣ ಮಂಟಪದ ಆವರಣದ ಆಂಜ ನೇಯ ದೇವಾ ಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹನುಮಾನ್‌ ಚಾಲೀಸ ಪಠಣ ಮಾಡಿದರು.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನ ಪ್ರಸನ್ನ ವೀರಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹನುಮಾನ್‌ ಚಾಲೀಸ ಪಠಣ ಮಾಡಿದರು. ಸಚಿವ ಗೋಪಾಲಯ್ಯ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತ ರಿದ್ದರು.

ರಾಜ್ಯದ ಹಲವು ಭಾಗಗಳಲ್ಲಿ ಬಿಜೆಪಿ ಕಾರ್ಯ ಕರ್ತರು ಆಂಜನೇಯ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸ ಪಠಣ ಮಾಡಿ, ಬಿಜೆಪಿ ಸರಕಾರದ ಪರವಾಗಿ ಪ್ರಾರ್ಥಿಸಿದರು.

ರುದ್ರಾಕ್ಷಿ ಮಾಲೆ ತೆಗೆದು ಜಪ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ವೇಳೆ ಡಿ.ಕೆ. ಶಿವಕುಮಾರ್‌ ಅವರು ಕೊರಳಲ್ಲಿದ್ದ ರುದ್ರಾಕ್ಷಿ ಮಾಲೆ ತೆಗೆದು ಕೈಯಲ್ಲಿ ಹಿಡಿದು ಜಪ ಮಾಡಿ ದರು. ವಿಶೇಷ ಪೂಜೆ ಸಲ್ಲಿಸುವ ವೇಳೆ ಕಾಂಗ್ರೆಸ್‌ ಪಕ್ಷದ ಹೆಸರು ಹೇಳಿ ಅರ್ಚನೆ ಮಾಡುವಂತೆ ಸೂಚಿಸಿದರು. ಹೂವು-ಹಣ್ಣು ಜತೆಗೆ ಗ್ಯಾರಂಟಿ ಕಾರ್ಡ್‌ ಕೂಡ ಇರಿಸಿ ಪ್ರಾರ್ಥನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next