Advertisement
ಶಿಡ್ಲಘಟ್ಟ, ಲಿಂಗಸಗೂರು, ಪಾವ ಗಡ, ಅಫjಲ್‌ಪುರ, ಕುಂದಗೋಳ, ಕಲ ಬುರಗಿ ಉತ್ತರ ಕ್ಷೇತ್ರಗಳ ಶಾಸಕರಿಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ. ಈಗಾಗಲೇ ಈ ಪೈಕಿ ಹಲವರಿಗೆ ರಾಜ್ಯ ನಾಯಕರು ಸಂದೇಶ ರವಾನಿಸಿದ್ದಾರೆ. ಇಲ್ಲೆಲ್ಲ ಹೊಸ ಪ್ರಯೋಗಕ್ಕೆ ಪಕ್ಷ ಮುಂದಾಗಿದೆ.
ಸದ್ಯ ವಿಧಾನಸಭೆಯಲ್ಲಿ 6 ಮಹಿಳಾ ಸದಸ್ಯರಿದ್ದು, ಈ ಬಾರಿ ಮಹಿಳೆಯರಿಗೆ 15 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಸಾಧ್ಯತೆಯಿದೆ. ಇಲ್ಲೆಲ್ಲ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಮುಸ್ಲಿಂ ಸಮುದಾಯಕ್ಕೆ 20 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದ್ದರೂ 12ರಿಂದ 15 ಕ್ಷೇತ್ರಗಳಿಗೆ ಸೀಮಿತವಾಗುವ ಸಾಧ್ಯತೆಗಳಿವೆ.
Related Articles
ಒಂದೇ ಕಡೆ ಐದಾರು ಆಕಾಂಕ್ಷಿಗಳಿ ರುವ ಕ್ಷೇತ್ರಗಳನ್ನು ಗುರುತಿಸಿ ಎಲ್ಲರನ್ನೂ ಒಟ್ಟಿಗೆ ಕರೆಸಿ ಸಂಧಾನ ನಡೆಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಚಿಕ್ಕಮಗಳೂರು ಕ್ಷೇತ್ರಕ್ಕೆ ಆಕಾಂಕ್ಷಿಗಳಾಗಿದ್ದವರನ್ನು ಕರೆಸಿ, ಟಿಕೆಟ್ ಕೊಡುವುದು ವರಿಷ್ಠರ ತೀರ್ಮಾನ, ಅದಕ್ಕೆ ಬದ್ಧರಾಗಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ಸಿ.ಟಿ. ರವಿ ಅವರನ್ನು ಸೋಲಿಸಲೇಬೇಕೆಂದು ಸಿದ್ದರಾಮಯ್ಯ ನಿರ್ಧರಿಸಿರುವುದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ ಸವಾಲಾಗಿ ತೆಗೆದುಕೊಂಡಿದೆ. ಇತ್ತೀಚೆಗೆ ಪಕ್ಷ ಸೇರಿದ ತಮ್ಮಯ್ಯಗೆ ಟಿಕೆಟ್ ಸಿಗುವುದು ಖಾತರಿಯಾದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಮುನಿಸಿ ಕೊಂಡಿದ್ದರು. ಹೀಗಾಗಿ ಸಂಧಾನ ಮಾಡಲಾಗಿದೆ.
Advertisement