Advertisement
ದೇವರಾಜ ಅರಸು :
Related Articles
Advertisement
ವೀರೇಂದ್ರ ಪಾಟೀಲ್ :
ವೀರೇಂದ್ರ ಪಾಟೀಲ್ ಅವರು 1968ರಿಂದ 1971ರವರಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಅನಂತರ 1989ರಲ್ಲಿ ಅವರ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗಿ ಭರ್ಜರಿ ಬಹುಮತ ಬಂದು ಎರಡನೇ ಬಾರಿ ಮುಖ್ಯಮಂತ್ರಿಯಾಗು ತ್ತಾರೆ. ಆದರೆ 1990ರಲ್ಲಿ ಅನಾ ರೋಗ್ಯ ಕಾರಣ ಅವರನ್ನು ಬದಲಾವಣೆ ಮಾಡಲಾಗು ತ್ತದೆ. ಅನಂತರ ವೀರೇಂದ್ರ ಪಾಟೀಲ್ ರಾಜ್ಯ ರಾಜಕಾರಣ ದಿಂದ ತೆರೆಮರೆಗೆ ಸರಿದು ಮತ್ತೆ ಪ್ರವರ್ಧಮಾನಕ್ಕೆ ಬರಲೇ ಇಲ್ಲ. ರಾಜ್ಯ ರಾಜ ಕಾರಣದಲ್ಲಿ ವೀರೇಂದ್ರ ಪಾಟೀಲ್ ಲಿಂಗಾಯತ ಸಮು ದಾಯದಲ್ಲಿ ಪ್ರಭಾವಿ ನಾಯಕರಾಗಿದ್ದವರು.
ರಾಮಕೃಷ್ಣ ಹೆಗಡೆ :
ಕೇಂದ್ರ ರಾಜಕಾರಣದಲ್ಲಿದ್ದ ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸೇತರ ಸರಕಾರ
ದಲ್ಲಿ ಮುಖ್ಯಮಂತ್ರಿಯಾ ದರು. ಬಾಟಿÉಂಗ್ ಹಗರಣ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗಿ 1985 ರಲ್ಲಿ ಮತ್ತೆ ಜನತಾಪಕ್ಷ ಅಧಿಕಾರಕ್ಕೆ ತಂದು ಎರಡನೇ ಬಾರಿ ಮುಖ್ಯಮಂತ್ರಿಯಾ ದರು. ಆದರೆ ಟೆಲಿಫೋನ್ ಟ್ಯಾಪಿಂಗ್ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು.
ಎಚ್.ಡಿ. ದೇವೇಗೌಡ :
ಎಚ್.ಡಿ.ದೇವೇಗೌಡ 1994 ರಲ್ಲಿ ಮುಖ್ಯಮಂತ್ರಿಯಾಗಿ 1996ರ ಲೋಕಸಭೆ ಚುನಾವಣೆ ಅನಂತರ ಅದೃಷ್ಟ ಒಲಿದು ಬಂದು ಪ್ರಧಾನಿಯಾದ್ದರಿಂದ ಮುಖ್ಯಮಂತ್ರಿ ಪದವಿ ಬಿಟ್ಟು ಹೋದರು. ಆಗ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿ ಪಕ್ಷದ ಆಂತರಿಕ ಕಚ್ಚಾಟ, ಭಿನ್ನಮತದ ನಡುವೆಯೇ ಉಳಿದ ಅವಧಿ ಪೂರೈಸಿದರು. 1999 ರಲ್ಲಿ ಕಾಂಗ್ರೆಸ್ ಪಕ್ಷ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಬಹುಮತ ಬಂದು ಅವರೇ ಮುಖ್ಯಮಂತ್ರಿಯಾದರು. ಆರು ತಿಂಗಳ ಮುಂಚೆ ವಿಧಾನಸಭೆ ವಿಸರ್ಜಿಸಿ 2004 ರಲ್ಲಿ ಚುನಾವಣೆಗೆ ಹೋದರು. ಬಹುಮತ ಬರಲಿಲ್ಲ. ಆಗ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಯಾಗಿ ಧರ್ಮಸಿಂಗ್‌ಗೆ ಮುಖ್ಯಮಂತ್ರಿ ಪದವಿ ಒಲಿಯಿತು. 2006ರ ವರೆಗೆ ಅವರು ಮುಖ್ಯಮಂತ್ರಿಯಾಗಿದ್ದರು.
ಎಸ್.ಬಂಗಾರಪ್ಪ :
ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕಾರಣ ಪ್ರವೇಶಿಸಿ ಅನಂತರ ಕಾಂಗ್ರೆಸ್ ಸೇರಿದ್ದ ಎಸ್.ಬಂಗಾರಪ್ಪ ಅವರು 1983 ರಲ್ಲಿ ಕ್ರಾಂತಿರಂಗ ಸ್ಥಾಪಿಸಿ ಜನತಾಪಕ್ಷದ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರು. ಆಗ ಮುಖ್ಯಮಂತ್ರಿ ಆಗುವ ಆಸೆ ಹೊಂದಿದ್ದರು. ಆದರೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರಿಂದ ಮತ್ತೆ ಕಾಂಗ್ರೆಸ್ ಸೇರಿ 1985 ರಲ್ಲಿ ವಿಪಕ್ಷ ನಾಯಕರಾ ದರು. 1990 ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಅನಾರೋಗ್ಯ ಕಾರಣ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗ ಬಂಗಾರಪ್ಪ ಅವರು ಮುಖ್ಯಮಂತ್ರಿ ಆದರು. ಆದರೆ ಎರಡೇ ವರ್ಷದಲ್ಲಿ ಕ್ಲಾಸಿಕ್ ಕಂಪ್ಯೂಟರ್ ಹಗರಣ ಆರೋಪದಿಂದ ಹುದ್ದೆ ಕಳೆದುಕೊಂಡರು.
ಡಿ.ವಿ.ಸದಾನಂದ ಗೌಡ :
2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗಿ 2011 ರಲ್ಲಿ ಈಗ ರಾಜ್ಯದಲ್ಲಿ ಉದ್ಭವಿಸಿರುವ ರಾಜಕೀಯ ಪರಿಸ್ಥಿತಿ ಮಾದರಿ ಯಲ್ಲಿಯೇ ವಿದ್ಯಮಾನಗಳು ಉಂಟಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಾಗ ಡಿ.ವಿ. ಸದಾ ನಂದ ಗೌಡರು 2011ರ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿಯಾ ದರು. 2013ರ ವರೆಗೂ ವಿಧಾನ ಸಭೆ ಅವಧಿ ಇದ್ದರೂ ಪಕ್ಷದಲ್ಲಿನ ಆಂತರಿಕ ಸಂಘರ್ಷದಿಂದ 2012ರ ಜುಲೈಯಲ್ಲಿ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಬೇಕಾಯಿತು.
ಜಗದೀಶ್ ಶೆಟ್ಟರ್ :
ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಪಕ್ಷದ ಆಂತರಿಕ ಸಂಘರ್ಷದಿಂದ ಜಗದೀಶ್ ಶೆಟ್ಟರ್ ಅವರಿಗೆ 2012ರಲ್ಲಿ ಮುಖ್ಯ ಮಂತ್ರಿಯಾಗುವ ಯೋಗ ಬಂದಿತು. ಆದರೆ ಅವರ ಅವಧಿ ತೀರಾ ಕಡಿಮೆ ಇತ್ತು. 2013 ಮೇ ವರೆಗೆ ಅವರು ಅಧಿಕಾರ ದಲ್ಲಿದ್ದರು. ಇದರ ನಡುವೆ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದ್ದ ರಿಂದ ಹಾಗೂ ಅದರಿಂದಾದ ರಾಜಕೀಯ ಪರಿಣಾಮಗಳಿಂದಾಗಿ 2013 ರಲ್ಲಿ ಚುನಾವಣೆಗೆ ಹೋದಾಗ ಬಹುಮತ ಬರಲಿಲ್ಲ.
ಹೀಗಾಗಿ ಶೆಟ್ಟರ್ ಮತ್ತೂಂದು ಅವಧಿಗೆ ಮುಖ್ಯಮಂತ್ರಿ ಆಗುವುದು ತಪ್ಪಿತ್ತು.
ಬಿ.ಎಸ್.ಯಡಿಯೂರಪ್ಪ :
ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು, 2007ರಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರೂ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದರು. ಅನಂತರ 2008ರಲ್ಲಿ ಅವರದೇ ನೇತೃತ್ವದಲ್ಲಿ ಚುನಾವಣೆ ನಡೆದು ಪಕ್ಷ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದರೂ 2011 ರಲ್ಲಿ ಆರೋಪಗಳಿಂದಾಗಿ ರಾಜೀ ನಾಮೆ ನೀಡಬೇಕಾಯಿತು. ಕೆಜೆಪಿ ಕಟ್ಟಿ 2013ರ ವಿಧಾನಸಭೆ ಚುನಾ ವಣೆಯಲ್ಲಿ ಬಿಜೆಪಿಗೆ ಸಾಕಷ್ಟು ನಷ್ಟ ಮಾಡಿದ ಅವರು ಮತ್ತೆ ಬಿಜೆಪಿಗೆ ಬಂದು ರಾಜ್ಯಾಧ್ಯಕ್ಷರಾಗಿ ಅವರದೇ ನೇತೃತ್ವದಲ್ಲಿ 2018ರಲ್ಲಿ ಬಿಜೆಪಿ 105 ಸ್ಥಾನ ಪಡೆದು ಮುಖ್ಯ ಮಂತ್ರಿಯಾದರು. ಬಹುಮತ ಸಾಬೀತು ಮಾಡಲು ಆಗದೆ ರಾಜೀನಾಮೆ ನೀಡಿದರು. ಅನಂತರ ಆಪರೇಷನ್ ಕಮಲ ಮೂಲಕ 17 ಶಾಸಕರ ಬಿಜೆಪಿ ಸೇರ್ಪಡೆಯಿಂದ ಬಿಜೆಪಿಗೆ ಬಹುಮತ ಬಂದು 2019ರಲ್ಲಿ ಮುಖ್ಯಮಂತ್ರಿಯಾದರು. ಎರಡು ವರ್ಷಗಳ ಅನಂತರ ಇದೇ ಜುಲೈ 26 ರಂದು ರಾಜೀನಾಮೆ ಘೋಷಿಸಿದರು.
ಎಚ್.ಡಿ.ಕುಮಾರಸ್ವಾಮಿ :
ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯ ಮಂತ್ರಿಯಾದರು. ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಇವರು ಮುಖ್ಯಮಂತ್ರಿ ಆಗಲಿಲ್ಲ. ಅಚ್ಚರಿ ಎಂಬಂತೆ 2006ರಲ್ಲಿ ಬಿಜೆಪಿ ಜತೆ ಮೈತ್ರಿ ಸರಕಾರ ಮಾಡಿ 20 ತಿಂಗಳು ಮುಖ್ಯಮಂತ್ರಿ ಯಾಗಿದ್ದರು. ಮತ್ತೂಮ್ಮೆಯೂ ಅದೃಷ್ಟ ಖುಲಾಯಿಸಿ 2018ರಲ್ಲಿ ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರಕಾರ ಮಾಡಿ 13 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿ 20 ತಿಂಗಳು ಎಂದು ಒಪ್ಪಂದವಾಗಿತ್ತು, ಆದರೆ ಎರಡನೇ ಬಾರಿ ಯಾವುದೇ ಒಪ್ಪಂದವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮಹಾವಲಸೆಯಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು.
-ಎಸ್. ಲಕ್ಷ್ಮೀನಾರಾಯಣ