Advertisement

Live :ತೀರ್ಪು ಪ್ರಕಟ; ಸ್ಪೀಕರ್ ನಿರ್ಧಾರವೇ “ಸುಪ್ರೀಂ”, ಅತೃಪ್ತ ಶಾಸಕರಿಗೆ ಜಿಜ್ಞಾಸೆ

08:49 AM Jul 18, 2019 | Nagendra Trasi |

ನವದೆಹಲಿ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರ ರಾಜೀನಾಮೆ ಅರ್ಜಿ ಕುರಿತು ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಜಕೀಯ ಬೆಳವಣಿಗೆಯ ಹೈಲೈಟ್ಸ್ ಇಲ್ಲಿದೆ..

Advertisement

15 ಶಾಸಕರ ರಾಜೀನಾಮೆ ಕುರಿತಂತೆ ಸುಪ್ರೀಂಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದ್ದು, ರಾಜೀನಾಮೆ ಕುರಿತು ಸ್ಪೀಕರ್ ತೀರ್ಮಾನ ಕೈಗೊಳ್ಳಲಿ ಎಂದು ಹೇಳಿದೆ.

*ಎರಡು ವಾಕ್ಯಗಳಲ್ಲಿ ತೀರ್ಪು ಓದಿದ ಸಿಜೆಐ. ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ. ಅನರ್ಹತೆಯ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು.

*ನಾಳೆ ವಿಶ್ವಾಸಮತ ಯಾಚಿಸಿ, ಆದರೆ 15 ಶಾಸಕರ ಹಾಜರಿ ಕಡ್ಡಾಯವಲ್ಲ. ಅತೃಪ್ತರ ಪರ ಸುಪ್ರೀಂ ತೀರ್ಪು

*ಸ್ಪೀಕರ್ ರಾಜೀನಾಮೆ ಇತ್ಯರ್ಥಪಡಿಸುವವರೆಗೆ ಶಾಸಕರು ಸದನಕ್ಕೆ ಹಾಜರಾಗಬೇಕಿಲ್ಲ. ಸ್ಪೀಕರ್ ಗೆ ಕಾಲಮಿತಿ ನಿಗದಿಪಡಿಸದ ಸುಪ್ರೀಂಕೋರ್ಟ್.

Advertisement

*ರಾಜೀನಾಮೆ ನೀಡಿದ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವಂತೆ ಒತ್ತಾಯಿಸುವಂತಿಲ್ಲ. ಕಾಲಮಿತಿಯಲ್ಲಿ ಸ್ಪೀಕರ್ ತೀರ್ಪು ಪ್ರಕಟಿಸಬೇಕು.

*ತೀರ್ಪು ಓದುತ್ತಿರುವ ನ್ಯಾಯಮೂರ್ತಿಗಳು. ಸಂವಿಧಾನದ ಸಮತೋಲನ ಅತ್ಯಗತ್ಯ. ಸಿಜೆಐ ಗೊಗೊಯಿ

*ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅರ್ಜಿ ವಿಚಾರಣೆಯ ತೀರ್ಪು ಹೊರಬಿದ್ದ ನಂತರ ರಾಜ್ಯ ರಾಜಕೀಯದ ಹೊಸ ಬೆಳವಣಿಗೆ ಆರಂಭ.

*ಮಂಗಳವಾರ ಅತೃಪ್ತರ ಪರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಸ್ಪೀಕರ್ ಪರ ಅಭಿಷೇಕ್ ಸಿಂಘ್ವಿ, ಸಿಎಂ ಪರ ರಾಜೀವ್ ಧವನ್ ಸುದೀರ್ಘವಾಗಿ ವಾದ, ಪ್ರತಿವಾದ ಮಂಡಿಸಿದ್ದರು.

*ನಿನ್ನೆ ವಾದ, ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂಕೋರ್ಟ್ ಪೀಠ

*ಸುಪ್ರೀಂಕೋರ್ಟ್ ಮಹತ್ವದ ತೀರ್ಪಿಗೆ ಕ್ಷಣಗಣನೆ ಆರಂಭ

*ಸಿಎಂ ಕುಮಾರಸ್ವಾಮಿ ರಾಜೀನಾಮೆ ಖಚಿತ, ನಾಳೆ ವಿಶ್ವಾಸಮತಯಾಚನೆಯಲ್ಲಿ ನಮಗೇ ಗೆಲುವು: ಬಿಎಸ್ ಯಡಿಯೂರಪ್ಪ

*ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ದುರ್ಗಾಪರಮೇಶ್ವರಿ ದೇಗುಲಕ್ಕೆ ಕೆಎಸ್ ಈಶ್ವರಪ್ಪ ಭೇಟಿ, ಚಂದ್ರಗ್ರಹಣ ಪ್ರಯುಕ್ತ ಈಶ್ವರಪ್ಪ ಪೂಜೆ.

*ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಇಂದೇ ತೀರ್ಮಾನ. ಗೆಲುವು ಯಾರ ಪಾಲಿಗೆ ಎಂಬ ಕುತೂಹಲ.

 

Advertisement

Udayavani is now on Telegram. Click here to join our channel and stay updated with the latest news.

Next