Advertisement

ಐಪಿಎಲ್ 2022: ಯಾವ ಯಾವ ತಂಡ ಸೇರಿದ್ದಾರೆ ಕರ್ನಾಟಕದ ಆಟಗಾರರು; ಇಲ್ಲಿದೆ ಸಂಪೂರ್ಣ ಪಟ್ಟಿ

03:22 PM Feb 14, 2022 | Team Udayavani |

ಬೆಂಗಳೂರು: ಐಪಿಎಲ್ ಮೆಗಾ ಹರಾಜು ಮುಗಿದಿದೆ. 204 ಆಟಗಾರರನ್ನು ಹತ್ತು ಫ್ರಾಂಚೈಸಿಗಳು ಖರೀದಿ ಮಾಡಿದೆ. ಎರಡು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹಲವು ದೇಶಿಯ ಪ್ರತಿಭೆಗಳು ಕೂಡಾ ಉತ್ತಮ ಬೇಡಿಕೆ ಪಡೆದಿದ್ದರು.

Advertisement

ಕರ್ನಾಟಕದ ಆಟಗಾರರು ಕೂಡಾ ಈ ಐಪಿಎಲ್ ಹರಾಜಿನಲ್ಲಿ ಗಮನ ಸೆಳೆದರು. ರಾಜ್ಯದ ಒಟ್ಟು 16 ಮಂದಿ ಆಟಗಾರರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ.  ಅದರಲ್ಲಿ ಏಳು ಮಂದಿ ಆಟಗಾರರು ಕೋಟಿ ಒಡೆಯರಾಗಿದ್ದಾರೆ.

ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ರಿಟೈನ್ ಮಾಡಿಕೊಂಡಿದ್ದರೆ, ಕೆ.ಎಲ್.ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲೇ ಆಯ್ಕೆ ಮಾಡಿತ್ತು. ಹೀಗಾಗಿ ಇವರಿಬ್ಬರ ಹೆಸರು ಹರಾಜು ಟೇಬಲ್ ಗೆ ಬಂದಿರಲಿಲ್ಲ.

ಹೆಚ್ಚು ಕರ್ನಾಟಕದ ಆಟಗಾರರನ್ನು ಖರೀದಿ ಮಾಡಿದ್ದು ರಾಜಸ್ಥಾನ ರಾಯಲ್ಸ್ ತಂಡ. ಪಡಿಕ್ಕಲ್, ಪ್ರಸಿದ್ದ ಕೃಷ್ಣ, ಕೆಸಿ ಕರಿಯಪ್ಪ ಮತ್ತು ಕರುಣ್ ನಾಯರ್ ರಾಯಲ್ಸ್ ಪರ ಆಡಲಿದ್ದಾರೆ.

ಇದನ್ನೂ ಓದಿ:ಹೇಗಿದೆ ನೋಡಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ

Advertisement

ಮನೀಷ್ ಪಾಂಡೆ, ರಾಹುಲ್ ಮತ್ತು ಕೆ ಗೌತಮ್ ಲಕ್ನೋ ತಂಡದ ಪಾಲಾದರೆ, ರವಿಕುಮಾರ್ ಸಮರ್ಥ್, ಜಗದೀಶ್ ಸುಚಿತ್ ಮತ್ತು ಶ್ರೇಯಸ್ ಗೋಪಾಲ್ ಹೈದರಬಾದ್ ತಂಡ ಸೇರಿದ್ದಾರೆ. ಅನೀಶ್ವರ್ ಗೌತಮ್ ಮತ್ತು ಲವ್ನೀತ್ ಸಿಸೋಡಿಯಾ ಆರ್ ಸಿಬಿ ಕ್ಯಾಂಪ್ ಸೇರಿದ್ದು, ಪ್ರವೀಣ್ ದುಬೆ ಅವರು ಡೆಲ್ಲಿ ಪಾಳಯದಲ್ಲಿದ್ದಾರೆ. ಅಭಿನವ್ ಮನೋಹರ್ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿದ್ದಾರೆ. ಕರ್ನಾಟಕದ ಮಾಜಿ ರಣಜಿ ಆಟಗಾರ ರಾಬಿನ್ ಉತ್ತಪ್ಪ ಅವರು ಸಿಎಸ್ ಕೆ ಪಾಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next