ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ “ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನದ’ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಜೂ. 14ರಂದು “ಕರ್ನಾಟಕ ಜನಸಂವಾದ’ ವರ್ಚುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.
ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಜೂ.14ರ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿ ದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆಂದರು.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟೂಬ್ ಸೇರಿದಂತೆ ವೆಬೆಕ್ಸ್ ಇತರೆ ಮಾಧ್ಯಮಗಳ ಮೂಲಕ ರಾಜ್ಯದ 20 ಲಕ್ಷಕ್ಕೂ ಹೆಚ್ಚು ಜನರಿಗೆ ಮೋದಿ 2.0 ಸಾಧನೆ ಹಾಗೂ ಸದ್ಯದ ಸ್ಥಿತಿಯಲ್ಲಿ ಕೋವಿಡ್- 19 ವೈರಸ್ ವಿರುದ ಜನ ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಜಾಗೃತಿ ಕುರಿತು ಜೆ.ಪಿ. ನಡ್ಡಾ ಅವರು ದೆಹಲಿಯಿಂದ ಮಾತನಾಡಲಿದ್ದಾರೆಂದರು.
ಕೋಟಿ ಜನರನ್ನು ತಲುಪುವ ಗುರಿ: ಜನಸಂವಾದ ಮೂಲಕ ದೇಶ-ರಾಜ್ಯದಲ್ಲಿ ನಿಧಾನವಾಗಿ ಹರಡುತ್ತಿ ರುವ ಕೋವಿಡ್- 19 ವೈರಸ್ ಅನ್ನು ಬದುಕಿನ ಭಾಗವಾಗಿಸಿಕೊಂಡು ಜೀವಿಸುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡುವ ಜನಜಾಗೃತಿ ಅಭಿಯಾ ನಕ್ಕೂ ಪಕ್ಷ ಮುಂದಾಗಿದೆ. “ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನ’ದ ಪ್ರಯುಕ್ತ ಸಾಮಾಜಿಕ ಜಾಲತಾಣ ಬಳಸಿಕೊಂಡು ಪಕ್ಷದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ 37 ಜಾಗೃತಿ ಅಭಿಯಾನ ನಡೆಯಲಿದೆ.
311 ಮಂಡಲದಲ್ಲಿ 311 ರ್ಯಾಲಿ, 5 ಮೋರ್ಚಾ ಗಳಿಂದ ಸುಮಾರು 115 ರ್ಯಾಲಿ ನಡೆಸಲಾಗುತ್ತದೆ. ಜೂ.25ರವರೆಗೆ ರಾಜ್ಯಾದ್ಯಂತ 600ಕ್ಕೂ ಹೆಚ್ಚು ರ್ಯಾಲಿ ನಡೆಯಲಿದ್ದು, 1 ಕೋಟಿಗೂ ಅಧಿಕ ಜನರನ್ನು ತಲುಪುವ ಗುರಿ ಹೊಂದಲಾಗಿದೆ. ಅದರಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಜೂ.14ರಂದು ಸಂಜೆ 6 ಗಂಟೆಗೆ ದೆಹಲಿಯಿಂದ ಬೃಹತ್ ವರ್ಚುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಲಿ ದ್ದು, 20 ಲಕ್ಷ ಜನರನ್ನು ತಲುಪುವ ಗುರಿ ಇದೆ ಎಂದು ಹೇಳಿದರು.
ಕೋವಿಡ್- 19 ನಿಂದ ಕೆಲಸ ಕಳೆದುಕೊಂಡವರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ವಿಶೇಷವಾಗಿ ಸಣ್ಣ, ಅತಿ ಸಣ್ಣ, ಗೃಹ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸುವ ಕಡೆಗೆ ಗಮನ ನೀಡಲಾಗಿದೆ, ರೈತ, ಕಾರ್ಮಿಕ, ಮಹಿಳೆ, ವಾಹನ ಚಾಲಕರು, ನೇಕಾರರು ಇತರೆ ಫಲಾನುಭವಿ ಗಳ ಸಭೆ ನಡೆಯಲಿದೆ. ಅವರಿಗೆ ಕೋವಿಡ್ ಸಂಬಂಧ ವಿಶೇಷ ಪ್ಯಾಕೇಜ್ ನೀಡಿರುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಚೀನಾ ಸೋಲಿಸಿ; ಭಾರತ ಗೆಲ್ಲಿಸೋಣ!: ಜೂ.14ರ ಸಂಜೆ 7ರಿಂದ 8 ಗಂಟೆವರೆಗೆ “ಚೀನಾ ಸೋಲಿಸಿ- ಭಾರತ ಗೆಲ್ಲಿಸೋಣ’ ಅಭಿಯಾನ ನಡೆಸಲು ಉದ್ದೇಶಿ ಸಲಾಗಿ ದೆ. ರಾಜ್ಯದ 58,000 ಬೂತ್‌ಗಳ 50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವದೇಶಿ ಅಭಿಯಾನದ ಪ್ರತಿಜ್ಞಾ ಸಂಕಲ್ಪ ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಗಾಂಧೀಜಿ ಹೇಳಿದಂತೆ ಸ್ವದೇಶಿ ಪರಿಕಲ್ಪನೆಯಲ್ಲಿ ನಾವೆಲ್ಲಾ ಬಾಳ್ವೆ ನಡೆಸಲು ಮನವಿ ಮಾಡಲಾಗುವುದೆಂದರು.