Advertisement

ಕರ್ನಾಟಕ NRI ಸಮಿತಿ ಬಹ್ರೈನ್‌ ಅಧ್ಯಕ್ಷರಾಗಿ ಲೀಲಾಧರ ಬೈಕಂಪಾಡಿ 

09:35 AM Apr 28, 2018 | Team Udayavani |

ಮುಂಬಯಿ: ಕರ್ನಾಟಕ ಅನಿವಾಸಿ ಭಾರ ತೀಯ ಸಮಿತಿ   ಬಹ್ರೈನ್‌ ಇದರ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಸಾಮಾಜಿಕ ಕಾರ್ಯಕರ್ತ, ತುಳು – ಕನ್ನಡ ಸಮುದಾಯದ ಮುಂದಾಳು ಲೀಲಾಧರ ಬೈಕಂಪಾಡಿ ಅವರು ಇತ್ತೀಚೆಗೆ ನೇಮಕಗೊಂಡಿ¨ªಾರೆ. ಸಾಂಸ್ಕೃತಿಕ ರಾಯಭಾರಿ ಲೀಲಾಧರ ಬೈಕಂಪಾಡಿಯವರಿಗೆ ಪ್ರಾಪ್ತಿಯಾಗಿರುವ ಈ ಪ್ರತಿಷ್ಠಿತ ಜನಸೇವಾ ಹು¨ªೆಯು ಅವರ ಜನಪರ ಕಾಳಜಿ, ಸಮಾಜಮುಖೀ ಕಾಯಕ ಮತ್ತು ನಿರಂತರವಾದ ಸೇವೆ-ಸಿದ್ಧಿ-ಸಾಧನೆಗಳಿಗೆ ಅರ್ಹ ನೆಲೆಯಲ್ಲಿ ಸಂದ ಗೌರವವಾಗಿದೆ.

Advertisement

ಸಮಸ್ತ ಬಹ್ರೈನ್‌ ಕನ್ನಡಿಗರ ಮೂಲ ಸೇವಾ ಕೇಂದ್ರವಾಗಲಿರುವ ಸಂಸ್ಥೆಯು ಕರ್ನಾಟಕ ಸರಕಾರವು ಹೊರತಂದಿರುವ ಅನಿವಾಸಿ ಭಾರತೀಯ ನೀತಿ ಸಂಹಿತೆಯನ್ವಯ ಕ್ರಿಯಾಶೀಲವಾಗಲಿದೆ. ಬೆಂಗಳೂರಿನ ಮಾತೃ ಸಮಿತಿಯ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಇತಿ-ಮಿತಿಯ ಆಧಾರದಲ್ಲಿ ಬಹ್ರೈನ್‌ನ ಅನಿವಾಸಿ ಕನ್ನಡಿಗರ ಸ್ಥಳೀಯ ಹಾಗೂ ತಾಯ್ನಾಡಿನ ಸಮಸ್ಯೆ, ಆಕಾಂಕ್ಷೆ, ನಿರೀಕ್ಷೆ, ಅಗತ್ಯ, ಆಶೋತ್ತರಗಳಿಗೆಲ್ಲಾ  ಸಾಧ್ಯವಾದ ರೀತಿ ಯಲ್ಲಿ ಸ್ಪಂದಿಸುತ್ತಾ, ನಮ್ಮ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಅನಿವಾಸಿ ಕನ್ನಡಿಗರೂ   ವಿವಿಧ ನೆಲೆಯಲ್ಲಿ ಕೊಡುಗೆಗಳನ್ನು ನೀಡುವಂತೆ ಪ್ರೇರೇಪಿಸುವ ಕ್ರಿಯಾವರ್ಧಕ ಪಾತ್ರವನ್ನೂ ಈ ಸಮಿತಿಯು ನಿಭಾಯಿಸಲಿದೆ.

ವಿಮಾ ಸೌಲಭ್ಯ, ಕಲೆ, ಸಂಸ್ಕೃತಿ, ಉತ್ಸವಗಳಿಗೆ ಉತ್ತೇಜನ, ಸಾಂಸ್ಕೃತಿಕ ಪರಂಪರೆಯ ಉದ್ದೀಪನ, ದೇಶ – ವಿದೇಶದಲ್ಲಿನ ಉದ್ಯೋ ಗಾವಕಾಶಗಳ ಮಾಹಿತಿ ಹಂಚಿಕೆ, ವೃತ್ತಿ ಸಂಬಂಧಿತ ತರಬೇತಿ, ಬಂಡವಾಳ ಹೂಡಿಕೆ ಮತ್ತು ಉದ್ಯಮಕ್ಕೆ   ಪ್ರೋತ್ಸಾಹ   ನೀಡುವಂತಹ ವಿಶೇಷ ಯೋಜನೆಗಳನ್ನೂ ಕೂಡಾ ರಾಜ್ಯ ಸರಕಾರದ ಆಶ್ರ ಯದ ಮೂಲ ಸಮಿತಿಯು ಹೊಂದಿದ್ದು, ಶಾಖಾ ಸಮಿತಿಯ ಸಹಯೋಗ-ಸಮನ್ವಯದೊಂದಿಗೆ ಇಂತಹ ಚಟುವಟಿಕೆಗಳು ಕಾರ್ಯರೂಪಕ್ಕೆ ಬರಲಿವೆ. 

ಈ ಸಂಬಂಧ, ಅರ್ಹತೆಯ ಆಧಾರದ ಮೇಲೆ ಲಭ್ಯವಿರುವ ಸೌಲಭ್ಯಗಳ ಫಲಾನುಭವಿಗಳಾಗುವ ನಿಟ್ಟಿನಲ್ಲಿ ಎÇÉಾ ಅನಿವಾಸಿ ಕನ್ನಡಿಗರು ಮೊದಲಾಗಿ ಅಧಿಕೃತ ಗುರುತಿನ ಚೀಟಿಯನ್ನು ಎನ್‌ಆರ್‌ಕೆ ಕಾರ್ಡ್‌ ಪಡೆಯಲು ಅಗತ್ಯ ಮಾಹಿತಿಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಗತ ಸುಮಾರು 3 ದಶಕಗಳಿಂದ ಸಂಘಟನೆ, ಸಮಾಜ ಸೇವೆ ಮತ್ತು ವಿವಿಧ ಕ್ಷೇತ್ರಗಳಿಗೆ ನಿರಂತರವಾಗಿ ನೀಡುತ್ತಾ ಬಂದಿರುವ ಮೌಲಿಕ ಕೊಡುಗೆಗಳಿಗಾಗಿ ಅನೇಕ ಗೌರವ, ಪುರಸ್ಕಾರಗಳನ್ನು ಪಡೆಯುತ್ತಾ ಬಂದಿರುವ ಇವರು ರಾಷ್ಟ್ರೀಯ ಭೂಷಣ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸೌರಭ ಪ್ರಶಸ್ತಿ, ಸೃಷ್ಟಿ ಕಲಾಶ್ರೀ ಪ್ರಶಸ್ತಿ, ಮುಂಬಯಿ ವಿ. ವಿ. ಯ ಸ್ವರ್ಣ ಪದಕ ಗೌರವ ಪುರಸ್ಕಾರ, ಪ್ರೈಡ್‌ ಆಫ್‌ ಏಷ್ಯಾ ಅಂತಾರಾಷ್ಟ್ರೀಯ ಪುರಸ್ಕಾರದಂತಹ ಪ್ರಶಸ್ತಿಗಳನ್ನು ಪಡೆದಿದ್ದಾರೆ. 
ಬಹ್ರೈನ್‌ನ ಸಮಸ್ತ ಅನಿವಾಸಿ ಕನ್ನಡಿಗರು ರಾಜ್ಯ ಸರಕಾರದ ಮೂಲ ಸಮಿತಿಯ ಮೂಲಕ ಲಭ್ಯವಾಗುವ ಎಲ್ಲಾ  ಸೇವೆ ಮತ್ತು ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಸಮಿತಿಯನ್ನು ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next