Advertisement

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

12:53 PM Jul 06, 2021 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಕೆಂದ್ರ ಸಚಿವರಾಗಿದ್ದ ತಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ.

Advertisement

ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದ್ದು, ತಾವರ್ ಚಂದ್ ಗೆಹ್ಲೋಟ್ ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು.

2014ರಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡಿದೆ, ಈ ಸ್ಥಾನಕ್ಕೆ  ತಾವರ್ ಚಂದ್ ಗೆಹ್ಲೋಟ್  ನೇಮಕವಾಗಿದ್ದು,  ಇವರು ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ರಾಜ್ಯಸಭೆಯ ಸದಸ್ಯರು.

8 ರಾಜ್ಯಗಳ ನೂತನ ರಾಜ್ಯಪಾಲರು

  • ಮಿಜೋರಾಮ್ ರಾಜ್ಯಪಾಲರಾಗಿದ್ದ ಪಿ. ಎಸ್ ಶ್ರೀಧರನ್ ಪಿಳೈ ಗೋವಾದ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
  • ಹರ್ಯಾಣದ ರಾಜ್ಯಪಾಲರಾಗಿದ್ದ ಸತ್ಯದೇವ್ ನಾರಾಯಣ್ ಆರ್ಯ , ತ್ರಿಪುರಾದ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
  • ತ್ರಿಪುರಾದ ಗವರ್ನರ್‍ ಆಗಿದ್ದ ರಮೇಶ್ , ಜಾರ್ಖಂಡ್ ನ ರಾಜ್ಯಪಾಲರಾಗಿ ವರ್ಗಾವಣೆಗೊಂಡಿದ್ದಾರೆ.
  • ಕರ್ನಾಟಕ: ತಾವರ್ ಚಂದ್ ಗೆಹ್ಲೋಟ್
  • ಹಿಮಾಚಲ್ ಪ್ರದೇಶದ ರಾಜ್ಯಪಾಲರಾಗಿದ್ದ ಬಂಡಾರು ದತ್ತಾತ್ರೇಯ , ಹರ್ಯಾಣದ ಗವರ್ನರ್ ಆಗಿ ವರ್ಗಾವಣೆಗೊಂಡಿದ್ದಾರೆ.
  • ಮಿಜೋರಾಂ- ಡಾ. ಹರಿಬಾಬು ಕಂಬಾಮ್ ಪತಿ
  • ಮಧ್ಯಪ್ರದೇಶ- ಮಂಗುಭಾಯ್ ಚಗಾನ್ ಭಾಯ್ ಪಟೇಲ್
  • ಹಿಮಾಚಲ್ ಪ್ರದೇಶ- ರಾಜೇಂದ್ರ ವಿಶ್ವನಾಥ್ ಅಲೇಕಾರ್
Advertisement

Udayavani is now on Telegram. Click here to join our channel and stay updated with the latest news.

Next