Advertisement

Karnataka: ಉಚಿತ ಬಸ್‌ ಸೇವೆ ಕೋಟಿ ದಾಟಿದ ನಾರಿಯರು

12:08 AM Jun 15, 2023 | Team Udayavani |

ಬೆಂಗಳೂರು: ಕೇವಲ ಮೂರು ದಿನಗಳ ಅಂತರದಲ್ಲಿ ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಹೆಚ್ಚು-ಕಡಿಮೆ ಒಂದು ಕೋಟಿ ಆಗಿದೆ !

Advertisement

ರವಿವಾರ ಆರಂಭಗೊಂಡ “ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಒಟ್ಟಾರೆ 98.58 ಲಕ್ಷ ಮಹಿಳಾ ಪ್ರಯಾಣಿಕರ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 51.52 ಲಕ್ಷ ಮಹಿಳೆಯರು ಸಂಚರಿಸಿದ್ದಾರೆ. ಇದು ಸೋಮವಾರ ಮಧ್ಯರಾತ್ರಿ 12ರಿಂದ ಮಂಗಳವಾರ ಮಧ್ಯರಾತ್ರಿ 12ರವರೆಗೆ ದಾಖಲಾದ ವಿವರ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.

ಮಧ್ಯರಾತ್ರಿ ಅನಂತರ ಘಟಕಗಳಿಗೆ ಹಿಂದಿರುವ ಬಸ್‌ಗಳ ಪ್ರಯಾಣಿಕರ ಮಾಹಿತಿ ಇಲ್ಲ. ಆ ಸಂಖ್ಯೆಯೂ ಸೇರಿದರೆ ಹೆಚ್ಚು-ಕಡಿಮೆ ಒಂದು ಕೋಟಿ ದಾಟುತ್ತದೆ.

ಬಾರದ ಸಂದೇಶ;
ಪರದಾಡಿದ ಪ್ರಯಾಣಿಕರು!
ಒಂದೆಡೆ ಶಕ್ತಿ ಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದರೆ, ಮತ್ತೂಂದೆಡೆ ಟಿಕೆಟ್‌ ಕಾಯ್ದಿರಿಸಿ ಪ್ರಯಾಣಿಸುವವರಿಗೆ ಬುಧ ವಾರ ಬುಕಿಂಗ್‌ ಬಸ್‌ ವಿವರ ಮತ್ತು ನಿರ್ವಾಹಕರ ಮೊಬೈಲ್‌ ಸಂಖ್ಯೆ ಲಭ್ಯವಾಗದೆ ಪರ
ದಾಡುವಂತಾಯಿತು. ಇದರಿಂದ ಕೆಲವು ಪ್ರಯಾಣಿಕರ ಶಾಪಕ್ಕೂ ನಿಗಮ ಗುರಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next