Advertisement

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

06:20 AM Oct 06, 2018 | |

ಬೆಂಗಳೂರು: ಕರ್ನಾಟಕ ಸಂಗೀತ  ನೃತ್ಯ ಅಕಾಡೆಮಿ, 2018-19ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಿದ್ದು, ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಹಿಂದೂಸ್ತಾನಿ ಸಂಗೀತ ಕಲಾವಿದ ಫ‌ಕೀರಪ್ಪ ತಾಂದಳೆ ಮತ್ತು ಸುಗಮ ಸಂಗೀತ ಕಲಾವಿದ ಕೊಪ್ಪಳದ ಸದಾಶಿವ ಪಾಟೀಲ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ನೆನಪಿನ ಕಾಣಿಕೆಯನ್ನು ಹೊಂದಿದೆ.

Advertisement

ಅಕಾಡೆಮಿ ಅಧ್ಯಕ್ಷ ಫ‌ಯಾಜ್‌ ಖಾನ್‌ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಹಾಗೇ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆಗಾಗಿ ಬೆಂಗಳೂರಿನ ಡಾ.ಬಿ.ಎಂ.ಜಯಶ್ರೀ (ಹಾಡುಗಾರಿಕೆ), ಎಚ್‌.ಎಸ್‌. ವೇಣುಗೋಪಾಲ್‌ (ಕೊಳಲು), ಅನೂರು ಅನಂತಕೃಷ್ಣ ಶರ್ಮ (ಮೃದಂಗ) ಕೋಲಾರದ ಪಿ.ನಾರಾಯಣಸ್ವಾಮಿ (ಡೋಲು) ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಸಾಧನೆಗಾಗಿ ಬೆಂಗಳೂರಿನ ಡಾ.ನಾಗರಾಜರಾವ್‌ ಹವಾಲ್ದಾರ್‌(ಗಾಯನ), ಬೆಳಗಾವಿಯ ಸುಧಾಂಶು ಕುಲಕರ್ಣಿ (ಹಾರ್ಮೋನಿಯಂ), ಕಲಬುರ್ಗಿಯ ಸೋಮಶೇಖರ ಪಾಟೀಲ್‌ ( ತಬಲ), ನೃತ್ಯ ಕ್ಷೇತ್ರದಲ್ಲಿನ ಅದ್ಬುತ ಸಾಧನೆಗಾಗಿ ಬೆಂಗಳೂರಿನ ಸುಭದ್ರಾ ಪ್ರಭು (ಕೂಚಿಪುಡಿ), ಮೈಸೂರಿನ ಡಾ.ಕೆ.ಕುಮಾರ್‌ (ಭರತನಾಟ್ಯ), ನಂದಿನಿ ಕೆ.ಮೆಹ್ತಾ (ಕಥಕ್‌), ಮಂಗಳೂರಿನ ರಾಜಶ್ರೀ ಎಸ್‌. ಶೆಣೈ (ಭರತನಾಟ್ಯ) ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಅನುಪಮ ಸಾಧನೆಗಾಗಿ ಬೆಂಗಳೂರಿನ ಎಚ್‌.ಪಾಲ್ಗುಣ, ಕಥಾ ಕೀರ್ತನ ಕ್ಷೇತ್ರದಲ್ಲಿ ಉತ್ತಮ ಸೇವೆಗಾಗಿ ಹಾವೇರಿಯ ಶಿವಮೂರ್ತಿ ಶಾಸ್ತ್ರೀ ಹಿರೇಮs… ಮತ್ತು ಗಮಕ ಕ್ಷೇತ್ರದಲ್ಲಿ ಅದ್ಬುತ ಸಾಧನೆಗಾಗಿ ಬೆಂಗಳೂರಿನ  ಎಂ.ಆರ್‌.ಕೇಶವ ಮೂರ್ತಿ (ವಾಚನ), ತುಮಕೂರಿನ ಜಿ.ಎಸ್‌.ಶ್ರೀನಿವಾಸ ಮೂರ್ತಿ (ವ್ಯಾಖ್ಯಾನ) ‘ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಲಾಕ್ಷೇತ್ರದಲ್ಲಿ ಸಂಘ -ಸಂಸ್ಥೆಗಳು ನೀಡುವ ಸೇವೆಗಾಗಿ ನೀಡಲಾಗುವ “ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ ಕುಂದಗೋಳದ ಶ್ರೀಮಂತ ನಾನಾ ಸಾಹೇಬ ನಾಡಗೀರ ಸ್ಮತಿ ಪ್ರತಿಷ್ಠಾನ ಭಾಜನವಾಗಿದೆ. ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ನೆನಪಿನ ಕಾಣಿಕೆ.

ಅ.30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಕರ್ನಾಟ ಸಂಗೀತ ಮತ್ತು ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಅಶೋಕ್‌ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next