Advertisement

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮಹಾರಾಷ್ಟ್ರ : ಸಾಂಸ್ಕೃತಿಕ ಕಾರ್ಯಕ್ರಮ

08:10 PM Mar 29, 2019 | Vishnu Das |

ಮುಂಬಯಿ: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಘಟಕದ ವತಿಯಿಂದ ಸಮೂಹ ಗಾಯನ ಸ್ಪರ್ಧೆ ಮತ್ತು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಜರಗಿತು.

Advertisement

ದ. ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ತುಳು ವರಿದ್ದುಕೊಂಡು ಕನ್ನಡವನ್ನು ಗಟ್ಟಿ ಅನುಷ್ಠಾನಗೊಳಿಸಿದ್ದಾರೆ. ಮಹಾರಾಷ್ಟ್ರದ ತಾಯಿ ಬೇರೆಯಲ್ಲ, ಕನ್ನಡಾಂಬೆ ಬೇರೆಯಲ್ಲ, ನಾವೆಲ್ಲರೂ ಭಾರತಮಾತೆಯ ಮಕ್ಕಳಾಗಿ ಬೆಳೆ ದವರು. ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು, ಊರಿನ ಎಲ್ಲ ಕಾರ್ಯಗಳಿಗೂ ಬೆಳಕು ನೀಡಿದವರು. ಮುಂಬಯಿ ಕನ್ನಡಿಗರ ಮುಂಬಯಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಊರಿನವರಿಗೆ ಅಸೂಯೆ ತರುವಂತಹದ್ದು. ಜಾತೀಯ, ಇತರ ಸಂಘಟನೆ ಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡುತ್ತಿದ್ದು, ಮನಸಿಗೆ ಮುಟ್ಟುವಂತೆ ಹಾಡುವ ಸಂಗೀತಗಾರರ ತಂಡವೇ ಸುಗಮ ಸಂಗೀತ ಪರಿಷತ್ತಾಗಿದೆ. ವಿಶಿಷ್ಟವಾದ ಕಲಾವಿದರು ನಮ್ಮಲ್ಲಿ ದ್ದಾರೆ. ಅವರ ಪ್ರತಿಭೆಗೆ ಸೂಕ್ತ ವೇದಿಕೆ ಯನ್ನು ಸುಗಮ ಸಂಗೀತ ಪರಿಷತ್ತು ಕಲ್ಪಿಸುತ್ತದೆ. ಸುಗಮ ಸಂಗೀತ ಪರಿಷತ್ತು ಮುಖೇನ ಸಾಹಿತ್ಯ ಪರಿಷತ್ತು ಮುಂಬಯಿಯಲ್ಲಿ ನಡೆಯುವಂತಾಗಲಿ ಎಂದರು.

ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್‌ ಶೆಟ್ಟಿ ಯೆಯ್ನಾಡಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು, ಅಧ್ಯಕ್ಷ ದಿನೇಶ್‌ ಆರ್‌. ಕೆ., ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಮೋಹನ್‌ದಾಸ್‌ ಶೆಟ್ಟಿ, ಸಂಚಾಲಕ ಕೃಷ್ಣ ಶೆಟ್ಟಿ ಮತ್ತು ರಾಜ್‌ಕುಮಾರ್‌ ಕಾರ್ನಾಡ್‌, ಸದಸ್ಯರುಗಳಾದ ಪ್ರಭಾಕರ ನಾಯಕ್‌, ಪುಷ್ಪಲತಾ ಗೌಡ, ಶಲಿತಾ ಕೊತ್ವಾಲ್‌, ಪ್ರತಿಮಾ ಹೆಗ್ಡೆ, ಸೌಭಾಗ್ಯ ಗೌಡ, ನಂದಾ ಸುವರ್ಣ, ರಾಜೇಂದ್ರ ರಾವ್‌, ಹರೀಶ್‌ ಪೂಜಾರಿ, ಸಲಹೆಗಾರರಾದ ಗಣೇಶ್‌ ಬಲ್ಯಾಯ, ವಿಜಯ ಕುಮಾರ್‌ ಶೆಟ್ಟಿ ತೋನ್ಸೆ ಅವರು ಉಪಸ್ಥಿತರಿದ್ದರು.

ಸಂಘಟಕ-ನಿರ್ದೇಶಕ, ರಂಗನಟ ಭಾಸ್ಕರ ಸುವರ್ಣ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಭಾವಗೀತೆ, ಸಮೂಹ ಗಾಯನ, ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ದರು. ಸಂಸ್ಥೆಯ ಕಲಾವಿದರು ಗಳಿಂದ ಸಂಗೀತ, ನೃತ್ಯ ವೈವಿಧ್ಯ ನಡೆಯಿತು. ಆನಂತರ ಕವಿಗೋಷ್ಠಿ ನೆರವೇರಿತು.

ಚಿತ್ರ-ವರದಿ : ಸುಭಾಷ್‌ಶಿರಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next